ಶಿವಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ
National level symposium at Shivananda Mahavidyalaya
ಕಾಗವಾಡ, 30 : ಶರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆಗಳಿವೆ. ಮಾನವೀಯತೆ ಬಿಟ್ಟು ಸಾಹಿತ್ಯವೇ ಇಲ್ಲ. ಸಾಹಿತ್ಯದ ಮೂಲ ಉದ್ದೇಶ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆಗಳನ್ನು ಹೋಗಲಾಡಿಸುವುದಾಗಿದೆ ಎಂದು ವಿಜಯಪೂರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ ತಿಳಿಸಿದ್ದಾರೆ.
ಅವರು ಗುರುವಾರ ದಿ. 30 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ವಿಜಯಪೂರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಶಿವಾನಂದ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ‘ಶರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆ’ ವಿಷಯದ ಮೇಲೆ ಹಮ್ಮಿಕೊಂಡ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸದಲಗಾದ ಗೀತಾಶ್ರಮದ ಪೀಠಾಧಿಶ ಪ.ಪೂ. ಶ್ರೀ ಶ್ರದ್ಧಾನಂದ ಮಹಾಸ್ವಾಮಿಗಳು ವಹಿಸಿ, ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಪಿ. ತಳವಾರ ವಹಿಸಿ, ಮಾತನಾಡಿದರು.
ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಮಹೇಶ ಚಿಂತಾಮಣಿ ಪ್ರಾಸ್ತಾವಿಕ ಮಾತನಾಡಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇಜರ ವ್ಹಿ.ಎಸ್. ತುಗಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಎರಡು ಪ್ರಮುಖ ಗೋಷ್ಠಿಗಳಲ್ಲಿ ಮೊದಲು ವಚನಕಾರರ ಮಾನವೀಯ ಚಿಂತನೆ ಕುರಿತು ವಿಜಯಪೂರದ ಹಿರಿಯ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಮೇತ್ರಿ ಮತ್ತು ವಚನಕಾರರ ಮಾನವೀಯ ಚಿಂತನೆ ಕುರಿತು ಜಮಖಂಡಿಯ ಪ್ರಾಧ್ಯಾಪಕ ಡಾ. ವೈ.ವೈ. ಕೊಕ್ಕನವರ ಉಪನ್ಯಾಸ ನೀಡಿದರು. ಎರಡನೆದಾಗಿ ಹರಿಹರಣ ಸಾಹಿತ್ಯದಲ್ಲಿ ಮಾನವೀಯ ಚಿಂತನೆ ಕುರಿತು ಕುಪ್ಪಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ದುರ್ಗಾಪ್ರವೀಣ ಮತ್ತು ಷಟ್ಪದಿ ಕಾವ್ಯಗಳಲ್ಲಿ ಮಾನವೀಯ ಚಿಂತನೆ ಕುರಿತು ಹಾರೂಗೇರಿಯ ನಿವೃತ್ತ ಪ್ರಾಧ್ಯಾಪಕ ಡಾ. ವ್ಹಿ.ಎಸ್. ಮಾಳಿ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಅಥಣಿಯ ಹಿರಿಯ ಸಾಹಿತಿಗಳು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಾಳಾಸಾಹೇಬ ಲೋಕಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎ. ಪಾಟೀಲ, ನಾಡಿನ ಹಿರಿಯ-ಕಿರಿಯ ಸಂಶೋಧನಾ ಆಸಕ್ತರು, ಪ್ರಾಧ್ಯಾಪಕರು, ವಿದ್ಯಾಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಭಿಜಾತ ಕನ್ನಡ ದ್ವೈಮಾಸಿಕ ಪತ್ರಿಕೆಯ ಸಹಭಾಗಿತ್ವದಲ್ಲಿ ವಿಚಾರ ಸಂಕಿರಣದ ಪುಸ್ತಕವನ್ನು ಪ್ರಕಟಿಸಲಾಯಿತು. ಅನನ್ಯಾ ಕುಲಕರ್ಣಿ ವಚನಗೀತೆ ಹಾಡಿದರು. ಶ್ರೇಯಾ ಸಾಂಗವಾಡೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಪ್ರೊ. ಬಿ.ಡಿ. ಧಾಮಣ್ಣವರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಎಂ. ಜಕ್ಕಣ್ಣವರ ಪರಿಚಯಿಸಿದರು. ಪ್ರೊ. ವ್ಹಿ.ಬಿ. ಬುರ್ಲೆ ಹಾಗೂ ಪ್ರೊ. ಎನ್.ಎಂ. ಬಾಗೆವಾಡಿ ನಿರೂಪಿಸಿದರು. ಪ್ರೊ. ಎಸ್.ಎಸ್. ಫಡತರೆ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 