ಗಣತಿದಾರರು ಮೊದಲು ಆಯಾ ಭಾಗದ ಚೆಕ್‌ಬಂದಿ ಸರಿಯಾಗಿ ಅರ್ಥೈಸಿಕೊಳ್ಳಿ: ರಾಯನಗೌಡ
National census launched
ರಾಷ್ಟ್ರೀಯ ಗಣತಿ ಕಾರ್ಯಕ್ಕೆ ಚಾಲನೆ
ಹನುಮಸಾಗರ 17; ಪಟ್ಟಣ ಪಂಚಾಯತ ಕಾರ್ಯಾಲಯ, ಹನುಮಸಾಗರದ ಪಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಜನಗಣತಿಗೆ ಚಾಲನೆ ನೀಡಲಾಯಿತು.
ಹನುಮಸಾಗರ ರಾಷ್ಟ್ರೀಯ ಜನಗಣತಿ ಕಾರ್ಯ ಏ.16 ರಿಂದ ಅಧಿಕೃತವಾಗಿ ಆರಂಭವಾಗಿದ್ದು, ಸಾರ್ವಜನಿಕರು ಗಣತಿದಾರರು ಮನೆಗೆ ಬಂದಾಗ ಸಮರ್ಕ ಹಾಗೂ ನಿಖರ ಮಾಹಿತಿ ನೀಡಬೇಕು ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.
ಇಲ್ಲಿನ ಪಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ಗಣತಿದಾರರ ಮತ್ತು ಮೇಲ್ವಿಚಾರಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗಣತಿ ಕಾರ್ಯ ಅತ್ಯಂತ ವ್ಯವಸ್ಥಿತ ಹಾಗೂ ನಿಖರವಾಗಿ ಕೈಗೊಳ್ಳಬೇಕು. ಗಣತಿದಾರರು ಮೊದಲು ಆಯಾ ಭಾಗದ ಚಕ್ಕು ಬಂದಿಯನ್ನು ಸರಿಯಾಗಿಅರ್ಥೈಸಿಕೊಳ್ಳಬೇಕು. ಗಣತಿ ಆರಂಭಿಸುವಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಮೂಲ ರಸ್ತೆಯಿಂದಲೇ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಮನೆ ಹಾಗೂ ಲ್ಯಾಂಡ್‌ಮಾರ್ಕ್ ಸ್ಪಷ್ಟವಾಗಿ ದಾಖಲಿಸಬೇಕು. ತಾಂತ್ರಿಕ ಸವಾಲುಗಳ ಕುರಿತು ಪ್ರಸ್ತಾಪಿಸಿದ ಅವರು, ಗಣತಿ ವೇಳೆ ಬಳಸುವ ಮೊಬೈಲ್ ಆಪ್‌ಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಯಾವುದೇ ಅಡಚಣೆ ಉಂಟಾದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಗಣತಿ ಕಾರ್ಯಕ್ಕಾಗಿ ಒಟ್ಟು 20 ಬ್ಲಾಕ್‌ಗಳನ್ನು ಗುರುತಿಸಲಾಗಿದೆ.
ಈ ಕಾರ್ಯಕ್ಕಾಗಿ 26 ಗಣತಿದಾರರನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಲು 6 ಜನ ಮೇಲ್ವಿಚಾರಕರನ್ನುಗಣತಿ ಆರಂಭಿಸುವಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಮೂಲ ರಸ್ತೆಯಿಂದಲೇ ಕಾರ್ಯ ಪ್ರಾರಂಭಿಸಬೇಕುಪ್ರತಿ ಮನೆ ಹಾಗೂ ಲ್ಯಾಂಡ್‌ಮಾರ್ಕ್ ಸ್ಪಷ್ಟವಾಗಿ ದಾಖಲಿಸಬೇಕುನೇಮಕ ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದರು.
ಮೇಲ್ವಿಚಾರಕ ಕಿಶನರಾವ್ ಕುಲಕರ್ಣಿ ಮಾತನಾಡಿ, ಮೊದಲ ಮೂರು ದಿನಗಳ ಕಾಲ ಮ್ಯಾಪಿಂಗ್ ಪ್ರಕ್ರಿಯೆ ನಡೆಯಲಿದ್ದು, ತದ ನಂತರ ಮನೆ-ಮನೆಗೆ ಗಣತಿ ಆರಂಭವಾಗಲಿದೆ. ಸಾರ್ವಜನಿಕರು ಈಗಾಗಲೇ ಆನ್ ಲೈನ್ ಮೂಲಕ ಸ್ವಯಂ ಗಣತಿ ಮಾಡಿಕೊಂಡಿದ್ದರೆ, ಅದರಲ್ಲಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಗಣತಿದಾರರು ಮನೆಗೆ ಬಂದಾಗ ಸರಿಪಡಿಸಿಕೊಂಡು ದೃಢೀಕರಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮೇಲ್ವಿಚಾರಕ ರಾಮಚಂದ್ರ ಬಡಿಗೇರ, ಹಬೀಬಪಾಶಾ ಮಕಾಂದಾರ, ಹುಲಗಪ್ಪ ಕೊಪ್ಪಳ, ಚಂದ್ರಶೇಖರ ಗುಳೆದ ಸೇರಿದಂತೆ ಪಪಂ ಸಿಬ್ಬಂದಿ ಮಹಾಂತಯ್ಯ ಕೊಮಾರಿ, ವೀರೇಶ ಕುರನಾಳ, ಹನುಮೇಶ ಪತ್ತಾರ, ಬಸವರಾಜ ಶಿವಸಿಂಪಿ, ಚಂದಯ್ಯ ಹಿರೇಮಠ, ಮಹಿಬೂಬ್ ಹಾಗೂ ಇತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 