ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ವಾರಾಚರಣೆ: ಬಳ್ಳಾರಿಯಲ್ಲಿ ರಕ್ತದಾನ ಶಿಬಿರ ಆಯೋಜನೆ
National Surgeons Week: Blood donation camp organized in Bellary
ಲೋಕದರ್ಶನ ವರದಿ
ಬಳ್ಳಾರಿ 15: ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ವಾರಾಚರಣೆಯ ಅಂಗವಾಗಿ, ಕೆಎಸ್‌ಸಿ-ಎಎಸ್‌ಐ ಬಳ್ಳಾರಿ ನಗರ ಶಾಖೆಯು ಬಿಎಂಸಿಆರ್‌ಸಿ ಯ ಅಂತಿಮ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಾದ ‘ಅದ್ವೈತ ಬ್ಯಾಚ್' ಸಹಯೋಗದೊಂದಿಗೆ ಶನಿವಾರ, ಭಾನುವಾರ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಜೀವ ಉಳಿಸುವ ಹಾಗೂ ಸಮಾಜ ಸೇವೆಯ ಈ ಮಹತ್ವದ ಕಾರ್ಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಮುಖ್ಯ ಅತಿಥಿಯಾಗಿ ಬಿಎಂಸಿಆರ್‌ಸಿ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಅವರು ಭಾಗವಹಿಸಿ ಮಾತನಾಡಿ, ಸಮುದಾಯದ ಆರೋಗ್ಯ ಸೇವೆಗೆ ಸಂಬಂಧಿಸಿದ ಇಂತಹ ಸಾಮಾಜಿಕ ಕಾರ್ಯಗಳ ಅಗತ್ಯತೆ ಆವಶ್ಯಕವಾಗಿವೆ. ಸ್ವಯಂಪ್ರೇರಿತ ರಕ್ತದಾನ ಮತ್ತು ವೈದ್ಯಕೀಯ ವಲಯದಲ್ಲಿ ಸಾಮಾಜಿಕ ಜವಾಬ್ದಾರಿಯ ಮಹತ್ವ ಇನ್ನಷ್ಟು ಅರಿತುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಸ್‌ಸಿ-ಎಎಸ್‌ಐ ಖಜಾಂಚಿ ಡಾ.ಯಾಳೆಗುರು ಬಸವನಗೌಡ, ಎಎಸ್‌ಐ ಕಾರ್ಯದರ್ಶಿ ಡಾ.ಗಡ್ಡಿ ದಿವಾಕರ್, ಕೆಎಸ್‌ಸಿ-ಎಎಸ್‌ಐ ಬಳ್ಳಾರಿ ನಗರ ಶಾಖೆಯ ಅಧ್ಯಕ್ಷ ಡಾ.ಶೇಕಪ್ಪ ಸಿ.ಮಾಳಗಿಮನಿ, ಕಾರ್ಯದರ್ಶಿ ಡಾ.ಗುಡೇಕೋಟೆ ರವಿಕುಮಾರ, ಜಂಟಿ ಕಾರ್ಯದರ್ಶಿ ಡಾ.ಶೈಖ್ ಫರ್ಹಾನ್ ಎಂ.ಬಿ. ಹಾಗೂ ಖಜಾಂಚಿ ಡಾ.ಅತುಲ್ ಕುಲಕರ್ಣಿ ಅವರು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ ಬಳ್ಳಾರಿ ನಗರ ಶಾಖೆಯ ಶ್ರಮವನ್ನು ಶ್ಲಾಘಿಸಿದರು.
ಕರುಣೆ, ಸೇವಾ ಮನೋಭಾವ ಹಾಗೂ ಸಮುದಾಯದ ಕಲ್ಯಾಣವನ್ನು ಬಿಂಬಿಸುವ ಈ ರಕ್ತದಾನ ಶಿಬಿರವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಈ ವೇಳೆ ಅದ್ವೈತ ಬ್ಯಾಚ್ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಮತ್ತು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ಎಲ್ಲಾ ಮಹಾದಾನಿಗಳಿಗೆ ಆಯೋಜಕರು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 