ಬಳ್ಳಾರಿಯ ಬಿಎಂಸಿಆರ್‌ಸಿಯಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ

ಬಳ್ಳಾರಿಯ ಬಿಎಂಸಿಆರ್‌ಸಿಯಲ್ಲಿ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ National Surgeons Day celebrated at BMCRC, Bellary

ಲೋಕದರ್ಶನ ವರದಿ

        ಬಳ್ಳಾರಿ 18:  ಕೆಎಸ್‌ಸಿ-ಎಎಸ್‌ಐ ಬಳ್ಳಾರಿ ನಗರ ಶಾಖೆ ಹಾಗೂ ಬಿಎಂಸಿಆರ್‌ಸಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹಯೋಗದೊಂದಿಗೆ ಬಳ್ಳಾರಿ ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ ಆಚರಿಸಲಾಯಿತು. 

ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಉಪಯುಕ್ತವಾಗುವಂತೆ ಕೇಸ್ ಪ್ರೆಸೆಂಟೇಶನ್ ಹಾಗೂ ಅಪರೂಪದ ಪ್ರಕರಣ ವರದಿ ಕುರಿತು ವಿಶೇಷ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಲಾಗಿತ್ತು.  

ಎಎಸ್‌ಐ ಸಂಸ್ಥೆಯು ಯುವ ಮತ್ತು ಉದಯೋನ್ಮುಖ ಶಸ್ತ್ರಚಿಕಿತ್ಸಕರಿಗೆ ನೀಡುತ್ತಿರುವ ಬೆಂಬಲ ಹಾಗೂ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಸೋಸಿಯೇಷನ್ ಆಫ್ ಸರ್ಜನ್ಸ್‌ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಗಡ್ಡಿ ದಿವಾಕರ್ ಕರೆ ನೀಡಿದರು. 

ಈ ಶೈಕ್ಷಣಿಕ ಸಂವಾದಗಳು ಮತ್ತು ವೈದ್ಯಕೀಯ ಚರ್ಚೆಗಳು ವಿಶೇಷವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಲಿಕೆ, ಸೂಕ್ತ ಮಾರ್ಗದರ್ಶನ ಹಾಗೂ ಅವರ ವೃತ್ತಿಪರ ಅಭಿವೃದ್ಧಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.