ಲೋಕದರ್ಶನ
ವರದಿ
ಹಾವೇರಿ 22:
ತಾಲೂಕಿನ ಕರಜಗಿ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಏರ್ಪಡಿಸಿದ್ದ "ರೋಜಗಾರ ದಿನಾಚರಣೆ"
ಕಾರ್ಯಕ್ರಮ ಜರುಗಿತು.
ಈ ಯೋಜನೆಯ ಬಗ್ಗೆ
ತಾಲೂಕ ಪಂಚಾಯತಿಯ ತಾಲೂಕ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಜಿ ಎಸ್ ಬೆನ್ನೂರ ಮಾತನಾಡಿ
ವಾರಕ್ಕೆ 1200 ರಿಂದ 1500 ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನ ಸೃಜಿಸಬೇಕೆಂದು
ಕೂಲಿಕಾರರಿಗೆ ರೋಜಗಾರ ದಿನಾಚರಣೆಯಲ್ಲಿ ತಿಳಿಸಿದರು.
ಕೂಲಿ ಕಾಮರ್ಿಕರಿಗೆ ಕೆಲಸ
ನೀಡುವ ಜವಾಬ್ದಾರಿ ಗ್ರಾಮ ಪಂಚಾಯತಿ ಮೇಲಿದೆ ಎಂದು ತಿಳಿಸಿದರು. ತಾಲೂಕಿನ
33 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಲಿ ಕಾಮರ್ಿಕರು ವಲಸೆ
ಹೋಗುವುದನ್ನು ತಡೆಯಲು,ಮಾನವ ದಿನಗಳ ಸೃಜನೆ
ಮಾಡಲು ಖಾತ್ರಿ ಯೋಜನೆ ವರದಾನವಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ತಿಳಿಸಿದರು.
ಹಾಗೆಯೇ ಮುಂದುವರೆದು ಸಮುದಾಯ ಕಾಮಗಾರಿಗಳಾದ: ಕೆರೆ ಹೂಳೆತ್ತುವುದು , ಗೋ
ಕಟ್ಟೆ ನಿಮರ್ಾಣ ,ಹೊಸ ಕೆರೆ ನಿಮರ್ಾಣ,
ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು, ಮಣ್ಣುಗಾಲುವೆ ನಿಮರ್ಾಣ ,ಮಲ್ಟಿ
ಆರ್ಚ ಚೆಕ್ ಡ್ಯಾಂ, ಗ್ರಾಮೀಣ
ಗೋದಾಮು, ಸ್ಮಶಾನ ಅಭಿವೃದ್ಧಿ ಎಸ್.ಹೆಚ್.ಜಿ ಭವನ,
ಸಕರ್ಾರಿ ಶಾಲೆಗಳ ಆಟದ ಮೈದಾನ ಅಭಿವೃದ್ದಿ,
ಸಕರ್ಾರಿ ಶಾಲೆಗಳಿಗೆ ಕಂಪೌಂಡ್ ನಿಮರ್ಾಣ, ಬೌಲ್ಡರ್ ಚೆಕ್ಸ್, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಅಂಗನವಾಡಿ ಕಟ್ಟಡಗಳು, ಸಕರ್ಾರ ದಿಂದ ಆಯ್ದ ಶಾಲೆಗಳಿಗೆ
ಶೌಚಾಲಯ ನಿಮರ್ಾಣ, ರೈತರ ಒಕ್ಕಣಿ ಕಣ
,ಜಾಗದ ಲಭ್ಯತೆ ಇರುವ ಸಕರ್ಾರಿ ಶಾಲೆಯಲ್ಲಿ
ಕೈತೋಟ ನಿಮರ್ಾಣ. ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ತಿಳಿಸಿದರು.
ಹಾಗೆಯೇ ಮುಂದುವರೆದು ವೈಯಕ್ತಿಕ ಕಾಮಗಾರಿಗಳಾದ, ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ,
ದಾಳಿಂಬೆ, ಪೇರಲ, ದ್ರಾಕ್ಷಿ, ತಾಳೆ, ದಾಲ್ಚಿನ್ನಿ, ಲವಂಗ, ಮೆಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ,
ನೆಲ್ಲಿ ಇನ್ನು ಹಲವಾರು ಬೆಳೆಗಳು) ,ರೇಷ್ಮೆ ಇಲಾಖೆಯ ಕಾಮಗಾರಿಗಳು, ಅರಣ್ಯ ಇಲಾಖೆಯ ಕಾಮಗಾರಿಗಳು, ಕೃಷಿ ಅರಣ್ಯ ಕಾಮಗಾರಿಗಳು,ಕೃಷಿ ಹೊಂಡ ,ಕಾಂಪೋಸ್ಟ್
ಪಿಟ್, ಪ್ಯಾಕೇಜ್ ಕಾಮಗಾರಿಗಳು, ಇಂಗು ಗುಂಡಿ, ಕೊಳುವೆ
ಬಾವಿ ಮರಪೂರಣ ಘಟಕ ,ಭೂ ಅಭಿವೃದ್ದಿ
,ದನದದೊಡ್ಡಿ, ಗ್ರಾಮೀಣ ಗೋದಾಮು, ಬೋಲ್ಡರ್ ಚೆಕ್ ಡ್ಯಾಂಗಳು ,ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ,ಜಮೀನು
ಸುತ್ತಲು ತೋಟಗಾರಿಕಾ ಸಸಿಗಳ ನೆಡುವುದು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಉದ್ಯೋಗ
ಚೀಟಿ ಪಡೆದ ಕೂಲಿ ಕಾಮರ್ಿಕರು,
ಜನಪ್ರತಿನಿಧಿಗಳು, ವಿವಿಧ ಇಲಾಖೆಯವರು, ಆಶಾ ಕಾರ್ಯಕತರ್ೆಯರು ಹಾಗೂ
ಅಂಗನವಾಡಿ ಕಾರ್ಯಕತರ್ೆಯರು ಭಾಗವಹಿಸಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಲೋಕೆಶ ಪಟ್ಠಣ ನಿರೂಪಿಸಿದರು.
ಗ್ರಾಮ ಪಂಚಾಯತಿಯ ದ್ವಿ. ದ. ಲೆಕ್ಕ ಸಹಾಯಕರಾದ ರಮೇಶ ಮಣೆಗಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.