ಶ್ರೀನಿವಾಸ ರಾಮಾನುಜನ ಅವರ ಜನ್ಮ ದಿನದ ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ
National Mathematics Day is celebrated on the birthday of Srinivasa Ramanujan.
ಜಮಖಂಡಿ 23: ಗಣಿತಶಾಸ್ತ್ರವು ರಾಷ್ಟ್ರದ ಅಭಿವೃದ್ಧಿ, ತಂತ್ರಜ್ಞಾನ ಪ್ರಗತಿ ಹಾಗೂ ಆರ್ಥಿಕ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ, ಅಂತರಿಕ್ಷ ಸಂಶೋಧನೆ ಹಾಗೂ ಸೈಬರ್ ಭದ್ರತೆ ಮುಂತಾದ ಕ್ಷೇತ್ರಗಳೆಲ್ಲವೂ ಗಣಿತಶಾಸ್ತ್ರದ ಮೇಲೆಯೇ ಆಧಾರಿತವಾಗಿವೆ. ಎಂದು ಗಣಿತಶಾಸ್ತ್ರ ಸಹ ಪ್ರಾಧ್ಯಾಪಕ ಎಸ್.ಕೆ.ಡೇಂಬರೆ ಹೇಳಿದರು.
ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ. ಗಣಿತಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಹಯೋಗದಲ್ಲಿ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ ಅವರ ಜನ್ಮ ದಿನದ ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವಂತೆ ತಮ್ಮ ಗಣಿತದ ಜ್ಞಾನವನ್ನು ವಿಸ್ತರಿಸಿ, ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶಗಳು ಮತ್ತು ಉದ್ಯಮ ಶೀಲತೆಯತ್ತ ಗಮನಹರಿಸಬೇಕು. ಗಣಿತಶಾಸ್ತ್ರದಲ್ಲಿ ದೃಢವಾದ ಅಡಿಪಾಯವಿದ್ದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಂಶುಪಾಲ ಡಾ.ಸುನಂದಾ ಎಸ್.ಶಿರೂರ ಮಾತನಾಡಿ, ಗಣಿತಶಾಸ್ತ್ರ ತಾರ್ಕಿಕಚಿಂತನೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಮುಖ ವಿಷಯವಾಗಿದೆ. ಗಣಿತಶಾಸ್ತ್ರವನ್ನು ಕೇವಲ ಪಠ್ಯವಿಷಯವಾಗಿ ಮಾತ್ರವಲ್ಲದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಉಪಯೋಗಿಸ ಬಹುದಾದ ಜ್ಞಾನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ವಿ.ಆರ್. ದಳವಾಯಿ, ಯು.ಎಸ್.ದೇಸಾಯಿ, ಡಾ.ಬಿ.ಎನ್.ಜಾಧವ, ಡಾ.ಎ.ಆಯ್.ಮಯರ, ಎಸ್.ಎನ್.ದೇಸ್ತೋಟ, ಕೆ.ಟಿ.ಜಕನೂರ, ಆರ್.ಎ. ಸಂಗಣ್ಣವರ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 