ರಾಷ್ಟ್ರೀಯ ಲೋಕಅದಾಲತ್ ಪೂರ್ವಭಾವಿ ಸಭೆ

ರಾಷ್ಟ್ರೀಯ ಲೋಕಅದಾಲತ್ ಪೂರ್ವಭಾವಿ ಸಭೆ National Lok Adalat Preparatory Meeting

ಮುಂಡಗೋಡ, 13 ; ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ಮುಂಬರುವ ರಾಷ್ಟ್ರೀಯ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಕ್ಷತಾ ಸಿ.ಆರ್‌. ಮಾತನಾಡಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳು ವಿಲೇವಾರಿ ಮಾಡುವಲ್ಲಿ ಆಯಾ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ವಕೀಲರು ಅತ್ಯಂತ ಆಸಕ್ತಿ ವಹಿಸುವಂತೆ ಇಲ್ಲಿಯ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಕ್ಷತಾ ಸಿ.ಆರ್‌. ರವರು ಮಾತನಾಡಿದರು.90 ದಿನಗಳ ವಿಶೇಷ ಅಭಿಯಾವು ಕಾನೂನು ಸೇವೆಗಳು ಆಗತ್ಯಯುಳ್ಳವರಿಗೆ ವಿಶೇಷವಾಗಿ ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನೈಸರ್ಗಿಕ ವಿಕೋಪಗಳಿಂದ ಬಾಧಿತರಾದವರಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿ ಶುಲ್ಕವಿಲ್ಲದೆ ಉಚಿತ ಕಾನೂನು ನೆರವು ಒದಗಿಸುವ ಉದ್ದೇಶವಾಗಿದೆ ಇದು ಕಕ್ಷಿದಾರರಿಗೆ ಮಧ್ಯಸ್ಥಿಕಾ ಕೇಂದ್ರದ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಅನುಕೂಲ ಮಾಡಿದೆ ಆದ್ದರಿಂದ ಎಲ್ಲರೂ 13-9-2025 ರಂದು ನಡೆಯುವ ಲೋಕಆದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಕ್ಷತಾ ಸಿ.ಆರ್‌. ಹೇಳಿದರು.  

ಚೆಕ್ ಬೌನ್ಸ್‌ ಅಥವಾ ಇತರೆ ಪ್ರಕರಣಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಪಿಐ ರಂಗನಾಥ ನೀಲಮ್ಮನವರ, ಅವರಿಗೆ ಸೂಚಿಸಿದ್ದರು.ಈ ವೇಳೆಯಲ್ಲಿ ಸಿಪಿಐ ರಂಗನಾಥ್ ನಿಲಮ್ಮನವರ ಪಿಎಸ್‌ಐ ಪರಶುರಾಮ ಮಿರ್ಜಿಗಿ ವಕೀಲರಾದ ಎಮ್‌.ಎ.ನಂದಿಕಟ್ಟಿ, ಸುಜೀತ್ ಸದಾನಂದ, ಸಂಗಮೇಶ ಕೊಳ್ಳಾನವರ, ನಂದೀಶ ನಿಂಬಾಯಿ, ರಾಜಶೇಖರ ಹುಬ್ಬಳ್ಳಿ, ನಾಗರಾಜ ಬಾರ್ಕಿ, ಇನ್ನಿತರ ವಕೀಲರು ಹಾಗೂ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಶರತ ಪವಾರ ಹಾಗೂ ಉಪಸ್ಥಿತರಿದ್ದರು.