ರಾಷ್ಟ್ರೀಯ ಆರೋಗ್ಯ ಅಭಿಯಾನ: ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕ್ಷೇತ್ರ ಪ್ರಚಾರ

 ರಾಷ್ಟ್ರೀಯ ಆರೋಗ್ಯ ಅಭಿಯಾನ: ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕ್ಷೇತ್ರ ಪ್ರಚಾರ National Health Campaign: Field promotion of Health Department programs


ರಾಷ್ಟ್ರೀಯ ಆರೋಗ್ಯ ಅಭಿಯಾನ: ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕ್ಷೇತ್ರ ಪ್ರಚಾರ 

ಧಾರವಾಡ 15: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಕ್ಷೇತ್ರಮಟ್ಟದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 2025-26 ನೇ ಸಾಲಿಗಾಗಿ ಬೀದಿ ನಾಟಕ ಮತ್ತು ಜಾನಪದ ಕಲಾತಂಡಗಳ ಆಯ್ಕೆಗಾಗಿ ಇಂದು (ನ.15) ಬೆಳಿಗ್ಗೆ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.    

ಕಲಾ ತಂಡಗಳ ಪ್ರದರ್ಶನದಲ್ಲಿ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಜಾನಪದ ಕಲಾತಂಡ ಮತ್ತು   ಅಭಿನಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸೆಂಟರ್ ಫಾರ್ ಯುಥ ಆಂಡ್ ಕಲ್ಬರಲ್ ಡೆವಲಪಮೆಂಟ್ (ಸಿವಾಯ್‌ಸಿಡಿ) ಕಲಾ ತಂಡ, ಬೆಟದೂರ ಗ್ರಾಮದ ಶ್ರೀ ಕೃಷ್ಣ ಗೀಗಿ ಮೇಳ ಹಾಗೂ ಜಾನಪದ ಕಲಾವಿದರ ಸಂಘ, ಪಶುಪತಿಹಾಳ ಗ್ರಾಮದ ಶ್ರೀ ಚೌಡೇಶ್ವರಿ ಜಾನಪದ ಸಂಸ್ಕೃತಿಕ ಕಲಾ ಸಂಘ ಮತ್ತು ಗ್ರಾಮದ ಶ್ರೀ ಸಿದ್ಧಾರೂಢ ಜನಪದ ಸಾಹಿತ್ಯ ಮತ್ತು ಕಲಾ ತಂಡ, ಸಂಕ್ಲೀಪುರ ಗ್ರಾಮದ ಆದರ್ಶ ಕಲಾ ತಂಡ,  ಧಾರವಾಡ ತಾಲೂಕಿನ ದೇವರಹುಬ್ಬಳ್ಳಿಯ ಅವ್ವ ಸಂಸ್ಕೃತಿಕ ಹಾಗೂ ಗ್ರಾಮ ಅಭಿವೃದ್ಧಿ ಸಂಸ್ಥೆ, ಧಾರವಾಡ ನಗರದ ಸಮುದಾಯ ಘಟಕ, ವಾಯುಪುತ್ರ ಕಲಾತಂಡ, ಹುಬ್ಬಳ್ಳಿ ತಾಲೂಕಿನ ಇಟಿಗಟ್ಟಿ ಗ್ರಾಮದ ಪಾಂಡುರಂಗ ರುಕುಮಾಯಿ ಸಂಸ್ಕೃತಿಕ ಟ್ರಸ್ಟ್‌ ತಂಡಗಳು ಭಾಗವಹಿಸಿದ್ದವು.  

ಕಲಾ ತಂಡಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಜಂಟಿನಿರ್ದೆಶಕಿ ಡಾ.ಪುಷ್ಪಾ ಎಚ್‌.ಆರ್‌., ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್‌. ಎಮ್‌.ಹೊನಕೇರಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಸುಜಾತಾ ಹಸವಿಮಠ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಕನ್ನಡ ಮತ್ತು ಸಂಸ್ಸೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಸುರೇಶ ಹಿರೇಮಠ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್‌.ಪಾತ್ರೋಟ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್‌.ಎನ್‌.ಅಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ರಾಜೇಶ್ವರಿ ಆರ್‌. ಪಟ್ಟಣಶೆಟ್ಟಿ ಅವರು ಪಾಲ್ಗೋಂಡಿದ್ದರು.