ರಾಷ್ಟ್ರಿಯ ರೈತ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ರಾಷ್ಟ್ರಿಯ ರೈತ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ National Farmers' Day and voluntary blood donation camp


           ಮುದ್ದೇಬಿಹಾಳ 02 : ಪಟ್ಟಣದ ಹೊರವಲಯದಲ್ಲಿರುವ ಹಾರ್ವರ್ಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕುಕ್ಕುಟ ಸಹಕಾರಿ ಮಹಾಮಂಡಳ, ಬೆಂಗಳೂರು, ವಿಜಯಪುರ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಪರ​‍್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿ., ಮುದ್ದೇಬಿಹಾಳ ಹಾಗೂ ಬಿ.ಬಿ.ಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟ ಇವುಗಳ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಲಾಗಿದ್ದ  ರಾಷ್ಟ್ರಿಯ ರೈತ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ ಕೃಷಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಜಿ.ಆರ್ ದೊಡ್ಡಿಹಾಳ  ಉದ್ಘಾಟಿಸಿದರು. 

             ಐಷಾರಾಮಿ ಬದುಕು ಅರಸಿ ಓಡುತ್ತಿರುವ ಜಗತ್ತಿಗೆ ಹೊರತಾಗದ ಭಾರತದಲ್ಲಿಯೂ ಅವಗಣನೆಗೆ ಒಳಗಾದ ಕೃಷಿಯಿಂದ ಉದ್ಭವಿಸಬಹುದಾದ ಬಿಕ್ಕಟ್ಟು, ತಂದೊಡ್ಡಬಹುದಾದ ವಿಕೋಪ ಹಾಗೂ ಉಲ್ಬಣಿಸಬಹುದಾದ ಆಹಾಕಾರಗಳನ್ನು ತಡೆಯಲು ಕೃಷಿಯೊಂದೇ ಪರಿಹಾರ ಎಂಬ ಮಂತ್ರ ಎಲ್ಲೆಡೆಯೂ ಮೊಳಗಬೇಕು ಎಂದು ಕೃಷಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಜಿ.ಆರ್ ದೊಡ್ಡಿಹಾಳ ಹೇಳಿದರು.  ಪಟ್ಟಣದ ಹೊರವಲಯದಲ್ಲಿರುವ ಹಾರ್ವರ್ಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕುಕ್ಕುಟ ಸಹಕಾರಿ ಮಹಾಮಂಡಳ, ಬೆಂಗಳೂರು, ವಿಜಯಪುರ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಪರ​‍್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿ., ಮುದ್ದೇಬಿಹಾಳ ಹಾಗೂ ಬಿ.ಬಿ.ಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟ ಇವುಗಳ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಲಾಗಿದ್ದ  ರಾಷ್ಟಿಯ ರೈತ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಚಟುವಟಿಕೆಗಳಲ್ಲಿ ವ್ಯಾಪಕವಾಗುತ್ತಿರುವ ಲಾಭಕೋರತನದ ಭರಾಟೆಯಿಂದಾಗಿ ಭೂತಾಯಿಯ ಒಡಲು ಭರಿದಾಗುವ ಅಪಾಯ ದೇಶಕ್ಕೆ ಕಂಟಕ ತರುವ ಸಂಭವ ಹೆಚ್ಚಿಸುತ್ತಿರುವುದನ್ನು ಗಂಭೀರವಾಗಿ ಪರಗಣಿಸಿ ಮಣ್ಣು ಪ್ರಿಯ ಒಕ್ಕಲುತನದ ಅನುಕರಣೆ ನಮ್ಮ ಆದ್ಯತೆಯಾಗಬೇಕೆಂದು ಕರೆ ನೀಡಿದರು.

              ಮುಖ್ಯ ಅತಿಥಿಯಾಗಿದ್ದ ಜಲಾನಯನ ಇಲಾಖೆಯ ನಿವೃತ್ತ ಅಧಿಕಾರಿ ಎನ್‌.ಎಂ ಕುಂಬಾರ ಮಾತನಾಡಿ ಮಣ್ಣು ಮತ್ತು ದೇಹದ ಆರೋಗ್ಯ ಸರಿ ಇದ್ದಾಗ ಮಾತ್ರ ಜಾಗತಿಕವಾಗಿ ಸಾಮಾಜಿಕ ಆರೋಗ್ಯವನ್ನು ಎತ್ತಿ ಹಿಡಿಯಲು ಸಾಧ್ಯ ಎಂಬ ನಿಟ್ಟಿನಲ್ಲಿ ಕೃಷಿಯನ್ನು ಸುಸ್ಥಿರಗೊಳಿಸಿ ಜನರ ಆರೋಗ್ಯ ರಕ್ಷಿಸುವ ಜವಾಬ್ದಾರಿಯಿಂದ ನಮ್ಮಗಳ ಮಧ್ಯೆ ಅರವಿಂದ ಕೊಪ್ಪರವರು ನಡೆಸುತ್ತಿರುವ ಅನುಸಂಧಾನಗಳು ಸಾಮಾಜಿಕ ಆರೋಗ್ಯದ ಸುಭದ್ರತೆಗೆ ದೀವಿಯಾಗಿವೆ ಎಂದರು. ಜಿಲ್ಲಾ ರಕ್ತ ನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ. ಶಾಮನ್ಸ್‌ ಮಾತನಾಡಿ ರಕ್ತವೆಂಬ ಸಂಜೀವಿನಿಯನ್ನು ಸ್ವಯಂ ಪ್ರೇರಣೆಯಿಂದ ದಾನ ಮಾಡುವ ಮೂಲಕ ಅಸಂಖ್ಯಾತ ಜೀವಗಳನ್ನುಳಿಸುವ ಬದ್ದತೆಯಿರುವ ಯುವಜನರ ಅವಶ್ಯಕತೆ ಈ ದಿನ ಹೆಚ್ಚಿದ್ದು ಆ ನಿಟ್ಟಿನಲ್ಲಿ ಅನ್ನ ಹಾಕಿ ಜಗವ ಕಾಯುವ ರೈತರೇ ರಕ್ತ ನೀಡಿ ಜೀವ ರಕ್ಷಿಸುವ ಸಂಕಲ್ಪ ತೊಟ್ಟು ಶಿಬಿರಕ್ಕೆ ಸಾಕ್ಷಿ ಬರೆಯುತ್ತಿರುವುದು ದೇಶಕ್ಕೆ ಮಾದರಿಯಾಗಿದೆ ಎಂದರು. 

             ಅಧ್ಯಕ್ಷತೆ ವಹಿಸಿದ್ದ ಬಿ.ಬಿ.ಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್‌.ಎಂ ನೆರಬೆಂಚಿ, ಪ್ರತಿಪರ ರೈತ,ಚಿಂತಕ ಅರವಿಂದ ಕೊಪ್ಪ, ವಿಶ್ರಾಂತ ಉಪ ತಹಸೀಲ್ದಾರ ಆರಿ​‍್ಬ ಸಜ್ಜನ, ಪ್ರಾಂಶುಪಾಲೆ ಆರಿ​‍್ಬ ರೂಡಗಿ ಮಾತನಾಡಿದರು. ಒಕ್ಕಲುತನವನ್ನೇ ಜೀವನಾಧಾರವಾಗಿಸಿಕೊಂಡು ಸ್ವಾಭಿಮಾನಿ ಜೀವನ ಕಟ್ಟಿಕೊಂಡ ನಾಲತವಾಡದ ಅಮರೇಶ ಬಾ. ಹಟ್ಟಿ, ಕೋಳೂರಿನ ಶಿವಪ್ಪ ಕತ್ತಿ, ಶಿರೋಳದ ಹುಚ್ಚೇಶ ಗೌಡರ, ಆಲಕೊಪ್ಪರದ ತಿಮ್ಮಣ್ಣ ವಡ್ಡರ, ಮುದ್ದೇಬಿಹಾಳದ ಬಸಪ್ಪ ನಾಯಕಮಕ್ಕಳ ಇವರಿಗೆ ‘ಆತ್ಮನಿರ್ಭರ ರೈತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ 40 ಬಾರಿ ರಕ್ತ ನೀಡುವ ಮೂಲಕ ಜಿಲ್ಲೆಯಲ್ಲಿ ಐತಿಹಾಸಿಕ ದಾಖಲೆ ಮಾಡಿದ ಮತ್ತು ನಿರಂತರ ಶಿಬಿರ ಸಂಘಟಿಸಿದ ಕೀರ್ತಿಗೆ ಭಾಜನರಾದ ಅರವಿಂದ ಕೊಪ್ಪರವರನ್ನು ವಿವಿಧ ಸಂಘಟನೆಗಳಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಶಿಬಿರದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಶ್ರೀಶೈಲ ಮೇಟಿ(ಚೊಂಡಿ), ಬಸವರಾಜ ಕುಂಟೋಜಿ ಸೇರಿದಂತೆ 36 ಜನ ರೈತರು ರಕ್ತದಾನ ಮಾಡುವ ಮೂಲಕ ಹೊಸ ಪರಂಪರೆಗೆ ಭಾಷ್ಯೆ ಬರೆದರು.ಮೊದಲಿಗೆ  ಹೊಸಮನಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಮಲ್ಲಿಕಾರ್ಜುನ ನಿರೂಪಿಸಿದರು. ಅಂಬರೀಶ ತಾಳಿಕೋಟಿ ವಂದಿಸಿದರು.