ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಉದ್ಘಾಟನೆ: ಡಾ.ವೀರೇಶ ಪಾಟೀಲ
National Ayurveda Day and free health check-up inaugurated: Dr. Viresh Patil
ಮುದ್ದೇಬಿಹಾಳ 28: ತಾಲ್ಲೂಕು ಆಯುಷ್ ವೈದ್ಯರ ಸಂಘ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯುಷ್ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ವೀರೇಶ ಪಾಟೀಲ ಅವರು ಧನ್ವಂತರಿ ದೇವತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಹಸಿರು ತೋರಣ ಬಳಗದ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ , ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಸವರಾಜ ಕಟ್ಟಿ ಮತ್ತಿತರರು ಇದ್ದರು.ಮುದ್ದೇಬಿಹಾಳದ ತಾಲ್ಲೂಕು ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಹಸಿರು ತೋರಣ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ, ಕಾರ್ಯದರ್ಶಿ ಅಮರೇಶ ಗೂಳಿ, ವೈದ್ಯಾಧಿಕಾರಿ ಡಾ.ಬಸವರಾಜ ಕಟ್ಟಿ ಮತ್ತಿತರರು ಇದ್ದರು. ಆಯುರ್ವೇದ ದಿನಾಚರಣೆ, ಆರೋಗ್ಯ ತಪಾಸಣೆಆಯುರ್ವೇದ ಪದ್ಧತಿ ನಮ್ಮ ಹಿರಿಯರ ಕೊಡುಗೆ ಡಾ.ಪಾಟೀಲಮುದ್ದೇಬಿಹಾಳಆಯುರ್ವೇದ ಚಿಕಿತ್ಸೆ ನಮ್ಮ ಮನೆಯ ಹಿರಿಯರ ಬಳುವಳಿ. ನಮ್ಮ ಅಜ್ಜಿ, ತಾಯಂದಿರೇ ಇದರ ಸಂಶೋದಕರು ಎಂದು ತಾಲ್ಲೂಕು ಆಯುಷ್ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ವೀರೇಶ ಪಾಟೀಲ ಹೇಳಿದರು. ಅವರು ಗುರುವಾರ ಪಟ್ಟಣದ ಇಂದಿರಾ ನಗರದಲ್ಲಿರುವ ತಾಲ್ಲೂಕು ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯುಷ್ ವೈದ್ಯರ ಸಂಘ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ ನಮ್ಮ ಭಾರತೀಯ ಪದ್ಧತಿಯಾಗಿದೆ. ಇದನ್ನು ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
ನಮ್ಮ ಮನೆಯಲ್ಲಿ ಸಿಗುವ ಶುಂಠಿ, ಅರಿಶಿನ, ಹವೀಜ, ಲವಂಗ, ತುಳಸಿ, ಲೌಳಸರ ಮೊದಲಾದ ಪದಾರ್ಥಗಳಿಂದಲೇ ಹಲವು ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು. ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ ಮಾತನಾಡಿ, ಆಯುರ್ವೇದದ ಚಿಕಿತ್ಸೆಯನ್ನು ನಮ್ಮ ಹಿರಿಯರು ನಂಬಿದ್ದರು. ಆಯುರ್ವೇದದಿಂದ ಗುಣಮುಖರಾಗುವುದು ನಿಧಾನವಾದರೂ ಇದರಲ್ಲಿ ಅಡ್ಡಪರಿಣಾಮಗಳಿಲ್ಲ. ಇದು ಈಗ ವಿದೇಶದಲ್ಲಿ ಸಹ ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ ಎಂದರು. ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಸವರಾಜ ಕಟ್ಟಿ ಮಾತನಾಡಿ, ಆಯುರ್ವೇದ ಚಿಕಿತ್ಸೆ ಸರಳವಾದುದು, ಜನಸಾಮಾನ್ಯರ ಕೈಗೆಟಕುವಂತದು. ಆಯುರ್ವೇದ ಪದ್ಧತಿಯನ್ನು ಜನತೆಗೆ ಮುಟ್ಟಿಸುವ ನಮ್ಮ ಪ್ರಯತ್ನದಲ್ಲಿ ಹಸಿರು ತೋರಣ ಬಳಗದ ಸದಸ್ಯರು ಕೈ ಜೋಡಿಸುತ್ತಿರುವುದು ಸಂತಸ ತಂದಿದೆ. ಆಯುರ್ವೇದ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಜನತೆ ಪಡೆಯುವಂತಾದರೆ ನಮ್ಮ ಶ್ರಮ ಸಾರ್ಥಕ ಎಂದರು. ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಗಿಡಗಳನ್ನು ನೆಡುವ, ಸಂರಕ್ಷಿಸುವ ಕೆಲಸವನ್ನು ನಾವು ಮಾಡುವುದರ ಜೊತೆಗೆ ಆಯುರ್ವೇದ ಪದ್ಧತಿಯನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡೋಣ. ಆರೋಗ್ಯವಂತ ಜೀವನ ನಮ್ಮದಾಗಬೇಕು ಎಂದರು. ವೇದಿಕೆಯಲ್ಲಿ ಹಸಿರು ತೋರಣ ಬಳಗದ ಕಾರ್ಯದರ್ಶಿ ಅಮರೇಶ ಗೂಳಿ, ಪುರಸಭೆಯ ಸದಸ್ಯ ಶಿವಣ್ಣ ಶಿವಪುರ, ಆಯುಷ್ ವೈದ್ಯರ ಸಂಘದ ಕಾರ್ಯದರ್ಶಿ ಡಾ.ವೀರೇಶ ಇಟಗಿ ಇದ್ದರು.
ಕಾರ್ಯಕ್ರಮದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ, ಸದಸ್ಯರಾದ ಸುರೇಶ ಕಲಾಲ, ಬಸವರಾಜ ಬಿಜ್ಜೂರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಡಾ.ಆರ್.ಎಸ್.ಮಸೂತಿ, ಡಾ.ಜಹೀರುದ್ದೀನ ಬೀಳಗಿ, ಡಾ.ದೆಗಿನಾಳ, ಡಾ.ಆನಂದ ಚೌಧರಿ ಮತ್ತಿತರರು ಇದ್ದರು. ಡಾ.ವಿಜಯಕುಮಾರ ನಾಯಕ ಧನ್ವಂತರಿ ಶ್ಲೋಕ ಹೇಳಿದರು. ಅಕ್ಷತಾ ರೂಢಗಿ ನಿರೂಪಿಸಿದರು. ಲಕ್ಷ್ಮೀ ಪಾಟೀಲ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 