ಹೊಸಪೇಟೆಯಲ್ಲಿ ವೆಂಕಟೇಶ್ ಬಡಿಗೇರ್ಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಹೊಸಪೇಟೆಯಲ್ಲಿ ವೆಂಕಟೇಶ್ ಬಡಿಗೇರ್ಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ  National Award presented to Venkatesh Badiger in Hospet

 ವಿಜಯನಗರ 29: ಹೊಸಪೇಟೆಯ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ  ವತಿಯಿಂದ ಆಯೋಜಿಸಿದ್ದ 13ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಕಮಲಾಪುರದ ಸಾಹಿತಿ ವೆಂಕಟೇಶ್ ಬಡಿಗೇರ ಅವರಿಗೆ ’ವಾಲ್ಮೀಕಿ ಕಲಾ ಸೇವೆ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.  

ಹೊಸಪೇಟೆಯ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಜೂನ್ 28ರಂದು ನಡೆದ ಸಮಾರಂಭದಲ್ಲಿ ಸಾಹಿತ್ಯ, ಕಲೆ ಹಾಗೂ ಕನ್ನಡ ್ಣೂಳ್ದಹಿ್ದೂಳ್ತ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

ನಿವೃತ್ತ ತಹಶೀಲ್ದಾರ್ ವೆಂಕನಗೌಡ ಆರ್‌. ಪಾಟೀಲ, ಡಾ. ವಿರೂಪಾಕ್ಷಪ್ಪ ಪೂಜಾರಹಳ್ಳಿ, ಆಧ್ಯಾತ್ಮಿಕ ಚಿಂತಕ ವೆಂಕೋಬ ಶೆಟ್ಟಿ, ಡಾ. ಅನಸೂಯಾ ಕೆಂಪನಹಳ್ಳಿ, ಕಲಾವಿದ ಶಿವಬಸಪ್ಪ, ಕೆ.ಪಿ. ಉಮಾಪತಿ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಆರ್‌. ಅಂಬೇಡ್ಕರ್ ಸಂಘದ ಅಧ್ಯಕ್ಷರು ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸಾಧಕರನ್ನು ಸನ್ಮಾನಿಸಲಾಯಿತು.  

ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಶ್ರೀ ಸಾವಿತ್ರಮ್ಮ ಕಲಾತಂಡದಿಂದ ಡೊಳ್ಳು ಕುಣಿತ ಹಾಗೂ ಭರತನಾಟ್ಯ ಕಲಾವಿದರಿಂದ ನೃತ್ಯ ಪ್ರದರ್ಶನಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದವು.