ಬಸವರಾಜಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬಸವರಾಜಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ  National Award presented to Basavaraja


ಲೋಕದರ್ಶನ ವರದಿ   

ಇಂಡಿ 02: ಬಸವರಾಜ ಬಾಗೇವಾಡಿ, ರವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಇದೆ ದಿ. 30ರಂದು 3ನೆಯ ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟವು ಸ್ವಾಮಿ ಸಮರ್ಥ ಸಾಂಸ್ಕೃತಿಕ ಭವನ ಸೊಲ್ಲಾಪುರದಲ್ಲಿ ಜರುಗಿತು. ವಿವಿಧ ಜಿಲ್ಲೆಯ ಹಾಗೂ ರಾಜ್ಯದ ಕರಾಟೆ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ಬಸವರಾಜ ಬಾಗೇವಾಡಿ ಅವರು ವಿವಿಧ ಕ್ರೀಡೆಗಳ ತರಬೇತುದಾರರು ಮತ್ತು ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದನ್ನು ಗುರುತಿಸಿ ಈ ವರ್ಷ ಕೊಡುಮಾಡುವ ರಾಷ್ಟ್ರೀಯ ಉತ್ತಮ ತರಬೇತಿದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಯೋಜಕ ಈಶ್ವರ ಎಸ್, ಹಾಗೂ ವಿವಿಧ ಜಿಲ್ಲೆಯ, ರಾಜ್ಯದ ತರಬೇತುದಾರರು ಮತ್ತು ನಿರ್ಣಾಯಕರು ಭಾಗವಹಿಸಿದ್ದರು.