ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಕೃಷಿ ಸ್ಟಾರ್ಟಪ್ ಎಕ್ಸ್‌ಪೋ ಸಮಾರೋಪ
National Agriculture Startup Expo concluded at Agricultural University, Dharwad
ಧಾರವಾಡ 08: ಇಂದಿನ ಯುಗ ಬಹುಶಿಸ್ತೀಯ ಯುಗವಾಗಿದ್ದು, ಶಿಕ್ಷಣದ ಪ್ರತ್ಯೇಕ ಶಾಖೆಗಳು ಪರಸ್ಪರ ಸಮನ್ವಯ ಹೊಂದಿದಾಗ ಮಾತ್ರ ಅವುಗಳಿಗೆ ನಿಜವಾದ ಅಸ್ತಿತ್ವ ಮತ್ತು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಎಸ್. ಹೇಳಿದರು. ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಕೃಷಿ ಸ್ಟಾರ್ಟಪ್ ಎಕ್ಸ್‌ಪೋ (ಓಂಖಇಹಿ2025) ಸಮಾರೋಪ ಸಮಾರಂಭವನ್ನು ಅವರು ಉದ್ದೇಶಿಸಿ ಮಾತನಾಡಿದರು. “ಇಂಜಿನಿಯರಿಂಗ್ ಶಿಕ್ಷಣದಲ್ಲಿಯೇ ಈಗ ವಿದ್ಯಾರ್ಥಿಗಳು ಸಮುದಾಯದ ನೈಜ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸ್ಥಳೀಯ ಅವಶ್ಯಕತೆಗಳಿಗೆ ತಕ್ಕ ಸಮರ್ಕ ಪರಿಹಾರಗಳನ್ನು ನೀಡುವ ದಿಕ್ಕಿನಲ್ಲಿ ಹೊಸ ಯೋಜನೆಗಳು ಆರಂಭವಾಗಿವೆ. ಕೃತಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚುತ್ತಿರುವುದಾದರೂ, ಅದು ಇಂಜಿನಿಯರ್ಗಳ ಉದ್ಯೋಗವನ್ನು ಕಸಿಯುವುದಿಲ್ಲ; ಇಂಜಿನಿಯರ್ ನಿರ್ವಹಿಸುವ ಹೊಣೆಗಾರಿಕೆಗಳಲ್ಲಿ ಶೇಕಡಾ 20 ರಷ್ಟು ಕಾರ್ಯವನ್ನಷ್ಟೇ ಕೈಗೊಳ್ಳಬಹುದು. ನೆರವಿನಿಂದ ನಡೆಯುವ ಕೆಲಸವೂ ಸಂಪೂರ್ಣ ಪರಿಪೂರ್ಣವಲ್ಲ. ಆದ್ದರಿಂದ ಇಂಜಿನಿಯರ್ ಗಳಿಗೆ ಸದಾ ಅವಕಾಶ ಮತ್ತು ಬೇಡಿಕೆ ಇದ್ದೇ ಇರುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕುಲಪತಿ ಡಾ. ಪಿ. ಎಲ್. ಪಾಟೀಲ ಅವರು ಓಂಖಇಹಿ2025 ನೀರೀಕ್ಷೆಗಿಂತ ಮಿಗಿಲಾದ ಯಶಸ್ಸು ಸಾಧಿಸಿದೆ. ಈ ಯಶಸ್ಸು ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಹ್ಯಾಕಥಾನ್‌ನಲ್ಲಿ ತಮ್ಮ ನವೀನ ಆಲೋಚನೆಗಳನ್ನು ಪ್ರಸ್ತುತಪಡಿಸಿದ ವಿದ್ಯಾರ್ಥಿಗಳನ್ನು ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಕಾರ್ಯಕ್ರಮವು ಏಖಋಊಋಹಿಂಃಋ ಯ ಯೋಜನಾ ಮುಖ್ಯಸ್ಥರಾದ ಡಾ. ಎಸ್. ಎಸ್. ಡೊಳ್ಳಿ ಅವರ ಸ್ವಾಗತದಿಂದ ಆರಂಭವಾಯಿತು. ನಂತರ ಡಾ. ಜಿ. ಬಸವರಾಜ ಅವರು ಓಂಖಇಹಿ2025 ರ ಸಂಕ್ಷಿಪ್ತ ವರದಿ ಮಂಡಿಸಿದರು. 13,000 ಕ್ಕೂ ಹೆಚ್ಚು ಜನರು ಈ ಮೇಳಕ್ಕೆ ಭೇಟಿ ನೀಡಿದ್ದಾರೆ, 225 ಸ್ಟಾರ್ಟಪ್ಗಳು ಪ್ರದರ್ಶನಗೊಂಡಿದ್ದು, 136 ನೋಂದಾಯಿತ ಸ್ಟಾರ್ಟಪ್‌ಗಳು ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ನವದೆಹಲಿಯಿಂದ ಭಾಗವಹಿಸಿದ್ದವು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ವಿದ್ಯಾರ್ಥಿಗಳ ಹ್ಯಾಕಥಾನ್ ಆಗಿದ್ದು, ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ 130 ಕ್ಕೂ ಹೆಚ್ಚು ತಂಡಗಳು ತಮ್ಮ ನವೀನ ಆವಿಷ್ಕಾರಗಳನ್ನು ಮಂಡಿಸಿದ್ದವು. ತಜ್ಞರ ಸಮೀಕ್ಷೆಯ ನಂತರ ಅತ್ಯುತ್ತಮ ಹತ್ತು ಕಲ್ಪನೆಗಳನ್ನು ಪುರಸ್ಕರಿಸಲಾಯಿತು. ಹಾಗೂ ಸಮಾಲೋಚನೆಗಳಿಗೂ ಸೂಕ್ತ ಅವಕಾಶ ನೀಡಲಾಗಿತ್ತು. ಕಾರ್ಯಕ್ರಮವು ತಮ್ಮ ಉದ್ಯಮ ವಿಸ್ತರಣೆಗೂ, ಜ್ಞಾನಾಭಿವೃದ್ದಿಗೂ ಪರಿಣಾಮಕಾರಿಯಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು. ಈ ಮೇಳದಲ್ಲಿ ಕೃಷಿಕ್-ಎಬಿಐ ನ ಸಹ ಪಾಲುದಾರರು ಭಾಗವಹಿಸಿದ್ದರು. ವಿಶ್ವವಿದ್ಯಾಲಯದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ. ವಾಸುದೇವ ಆರ್., ಶ್ರೀ ಮಾಲತೇಶ ಶ್ಯಾಗೋಟಿ, ಶ್ರೀ ಮಯೂರ್ ಕಾಂಬಳೆ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ನಿರ್ವಾಹಕರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಬಿ. ಡಿ. ಬಿರಾದಾರ, ಡೀನ್ (ಕೃಷಿ) ಡಾ. ವಿ. ಬಿ. ಕುಲಿಗೋಡ, ಸಹ ವಿಸ್ತರಣಾ ನಿರ್ದೇಶಕರಾದ ಡಾ. ಸಿ. ಪಿ. ಮಲ್ಲಾಪುರ ಉಪಸ್ಥಿತರಿದ್ದರು. ಡಾ. ಸುರೇಖಾ ಸಂಕನಗೌಡರವರು ಸಮಾರಂಭವನ್ನು ನಿರೂಪಿಸಿದರು. ಡಾ. ಎಸ್. ಎಸ್. ಡೊಳ್ಳಿ ಧನ್ಯವಾದ ಅರ್ಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 