ಕೃಷಿ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಅಗ್ರಿ ಸ್ಟಾರ್ಟಅಪ್ ಎಕ್ಸಪೋ-2025ಗೆ ಚಾಲನೆ
National Agri Startup Expo-2025 launched at Agricultural University
ಲೋಕದರ್ಶನ ವರದಿ
ಧಾರವಾಡ 05: “ಆಯ್ಕೆಗಳ ಮತ್ತು ನವೀನ ಆವಿಷ್ಕಾರಗಳ ಸಂಭ್ರಮದ ಯುಗ ಇದು. ಅವುಗಳನ್ನು ವಾಣಿಜ್ಯೀಕರಣ ಗೊಳಿಸಲು ಇದು ಸುಸಮಯ” ಎಂದು ಭಾರತ ಸರ್ಕಾರದ ಕೃಷಿ ಆಯುಕ್ತರಾದ ಡಾ. ಪಿ. ಕೆ. ಸಿಂಗ್ ಅವರು 2025ರ ಡಿಸೆಂಬರ್ 5ರಂದು ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕೃಷಿ ಸ್ಟಾರ್ಟಅಪ್ ಎಕ್ಸ್ಪೋ (ಓಂಖಇಹಿ2025) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಆಧುನಿಕ ತಂತ್ರಜ್ಞಾನಗಳು ಸಾಮಾಜಿಕ ಬದಲಾವಣೆಯಲ್ಲಿ ಕ್ರಾಂತಿಯನ್ನುಂಟುಮಾಡಿ ಜೀವನ ಶೈಲಿಯನ್ನು ಉತ್ತಮಗೊಳಿಸುತ್ತಿರುವುದರಿಂದ ಭಾರತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಸ್ಟಾರ್ಟಅಪ್ಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲವನ್ನು ಅವರು ಉಲ್ಲೇಖಿಸಿ, ಇಂತಹ ಎಕ್ಸ್ಪೋಗಳು ನಮ್ಮ ಕನಸುಗಳನ್ನು ರೂಪಿಸಿಕೊಳ್ಳಲು, ಪ್ರಯೋಗಿಸಲು ಹಾಗೂ ಮುಂದುವರಿಸಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವಿಶ್ವ ಮಣ್ಣು ದಿನಾಚರಣೆಯನ್ನು ಗಿಡಕ್ಕೆ ಮಣ್ಣು ಹಾಕುವ ಮೂಲಕ ಆಚರಿಸಲಾಯಿತು. ಕೃಷಿ ಮಹಾವಿದ್ಯಾಲಯ ಧಾರವಾಡದ ನಿವೃತ್ತ ಡೀನ್ (ಕೃಷಿ), ಡಾ. ಜಿ. ಎಸ್. ದಾಸೋಗ್ ಅವರು ಪ್ರಸ್ತುತ ವರ್ಷದ ಮಣ್ಣು ದಿನಾಚರಣೆಯ ಘೋಷವಾಕ್ಯವಾದ “ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಮಣ್ಣು ನಮ್ಮನ್ನು ಪೋಷಿಸುವುದರ ಹೊರತಾಗಿ ನೀರನ್ನು ಶುದ್ಧೀಕರಿಸುವುದು, ಕಾರ್ಬನ್ನ ಭಂಡಾರವಾಗಿರುವುದು, ಜೀವ ವೈವಿಧ್ಯತೆಯ ತಾಯಿಯಾಗಿರುವುದು ಮುಂತಾದ ಅನೇಕ ಮಹತ್ತರ ಪಾತ್ರಗಳನ್ನು ವಹಿಸುತ್ತದೆ ಎಂದು ಅವರು ವಿವರಿಸಿದರು. ವಿಶ್ವದ ಶೇ. 95 ಜನರು ತಮ್ಮ ಆಹಾರಕ್ಕಾಗಿ ಮಣ್ಣಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಈ ಮಣ್ಣು ಗಂಭೀರ ಬೆದರಿಕೆಗೆ ಒಳಗಾಗುತ್ತಿದೆ ಎಂದು ಹೇಳಿದರು. ನಿರ್ಮಾಣ ಸೇರಿದಂತೆ ಕೃಷಿಯೇತರ ಕ್ಷೇತ್ರಗಳಲ್ಲಿಯೂ ಮಣ್ಣಿನ ಪಾತ್ರ ಅಪಾರವಾಗಿದ್ದು, ಸ್ಟಾರ್ಟಅಪ್ಗಳು ಮತ್ತು ಮಣ್ಣಿನ ಆರೋಗ್ಯದ ನಡುವಿನ ಸಂಬಂಧವನ್ನು ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಓಂಖಇಹಿ2025 ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಆವರಣಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರಿ್ಡಸಿ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ. ಎಲ್. ಪಾಟೀಲ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಆಯೋಜನೆಯಾಗಿರುವುದಾಗಿ ಸಂತೋಷ ವ್ಯಕ್ತಪಡಿಸಿದರು. ಕೃಷಿ ಕ್ಷೇತ್ರವು ತಂತ್ರಜ್ಞಾನ ಆಧಾರಿತವಾಗಿ ವೇಗವಾಗಿ ಬೆಳೆಯುತ್ತಿದ್ದು, ಇದು ಆಹಾರ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು. ಭಾರತ ವಿಶ್ವದ ಆಹಾರ ಉತ್ಪಾದನೆಯಲ್ಲಿ ಮುಂದಾಳಾಗುವ ದಿನಗಳು ಅತೀ ದೂರದಲ್ಲಿಲ್ಲ ಎಂದು ಹೇಳಿದರು. ಕೃಷಿಕ್ ಅಗ್ರಿ ಬಿಸಿನೆಸ್ ಇಂಕ್ಯುಬೇಟರ್, ಕೃ.ವಿ.ವಿ.,ಧಾರವಾಡವು 136 ಸ್ಟಾರ್ಟಅಪ್ಗಳಿಗೆ ಒಟ್ಟು 14 ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲ ನೀಡಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಹ್ಯಾಕಥಾನ್ಗೆ ಪ್ರಸ್ತಾಪವಾಗುವ ಎಲ್ಲಾ ಆಲೋಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಯೋಜನೆಯ ಮುಖ್ಯಸ್ಥರಾದ ಡಾ. ಎಸ್. ಎಸ್. ಡೊಳ್ಳಿ ಸಭೆಯನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಮೇಳದ ಉದ್ದೇಶವನ್ನು ವಿವರಿಸಿದರು. ಓಂಖಇಹಿ2025 ಅನ್ನು ಕೃಷಿಕ್ ಅಗ್ರಿ ಬಿಸಿನೆಸ್ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ,ಭಾರತ ಸರ್ಕಾರದ ಜ್ಞಾನ ಪಾಲುದಾರರೊಂದಿಗೆ ಆಯೋಜಿಸಲಾಗಿದೆ. ಇದರಲ್ಲಿ ಎಕ್ಸ್ಪೋ, ವಿದ್ಯಾರ್ಥಿಗಳ ಹ್ಯಾಕಥಾನ್, ಃ2ಃ ಮತ್ತು ಃ2ಅ ಸಂವಾದಗಳನ್ನು ಒಳಗೊಂಡಿದೆ.
ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಾರ್ವತಿ ಕುರ್ಲೆ, ವಿ. ಪಿ. ಪೋಲಿಸ್ಗೌಡರ್, ಬಸವರಾಜ ಕುಂದಗೋಳಮಠ, ರವಿಕುಮಾರ್ ಮಾಳಿಗೇರ, ವಿಶ್ವವಿದ್ಯಾಲಯದ ಕುಲಸಚಿವರಾದ ಜಯಶ್ರೀ ಶಿಂತ್ರಿ ಉಪಸ್ಥಿತರಿದ್ದರು. ಶಿಕ್ಷಣ ನಿರ್ದೇಶಕ ಡಾ. ಬಿ. ಡಿ. ಬಿರಾದಾರ, ಸಂಶೋಧನಾ ನಿರ್ದೇಶಕ ಡಾ. ಪಿ. ಯು. ಕೃಷ್ಣರಾಜ, ವಿಸ್ತರಣಾ ನಿರ್ದೇಶಕ ಡಾ. ಎಂ. ವಿ. ಮಂಜುನಾಥ, ಹಾಗೂ ಎಲ್ಲಾ ಆವರಣಗಳ ಡೀನ್ಗಳು ಹಾಜರಿದ್ದರು. ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಕೃಷಿ, ಅರಣ್ಯ ಮತ್ತು ತಂತ್ರಜ್ಞಾನ ವಿಭಾಗಗಳ 170 ಕ್ಕೂ ಹೆಚ್ಚು ತಂಡಗಳು ಹೊಸ ಆಲೋಚನೆಗಳನ್ನು ಪ್ರಸ್ತುತಪಡಿಸುತ್ತಿವೆ. ದೇಶದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸ್ಟಾರ್ಟಅಪ್ಗಳು ಈ ಅಗ್ರಿ ಸ್ಟಾರ್ಟಅಪ್ ಎಕ್ಸ್ಪೋದಲ್ಲಿ ಭಾಗವಹಿಸುತ್ತಿವೆ. ಕಾರ್ಯಕ್ರಮಕ್ಕೆ ಡಾ. ಜಿ.ಬಸವರಾಜ ವಂದನಾರೆ್ಣ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 