ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ನರೇಂದ್ರ ಮೋದಿ- ಅರುಣಕುಮಾರ

ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ನರೇಂದ್ರ ಮೋದಿ- ಅರುಣಕುಮಾರ Narendra Modi - Arunkumar who wrote the foreword to the creation of new India

ರಾಣೇಬೆನ್ನೂರು 22: ದೇಶದ ಮಹಾನ್ ನಾಯಕ,  ನವ ನಿರ್ಮಾಣದ ಹರಿಕಾರ ನರೇಂದ್ರ ಮೋದಿಜಿ ಅವರು, ಇಂದು ಘೋಷಿಸಿರುವ ಜಿಎಸ್ಟಿ ಮರಿಪೂರ್ಣರಿಯಾಯಿತು, ದಸಮಿಯ ಕೊಡುಗೆಯಾಗಿ ನೀಡಿ ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ್ ಪೂಜಾರ ಹೇಳಿದರು  

 ಅವರು, ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಜಿಎಸ್ಟಿ ಕುರಿತು ಮಾತನಾಡಿದರು. ನವ ನಿರ್ಮಾಣ ಮೋದಿಯವರ ಕನಸು. ಸ್ವದೇಶಿ ವಸ್ತುಗಳ ಸಂಪೂರ್ಣ ಬಳಕೆಗೆ ಜಿಎಸ್ಟಿಡಿ ಆಯ್ತು ತುಂಬಾ ಸಹಕಾರಿಯಾಗಿದೆ. ರಿಯಾಯಿತಿಯಿಂದಾಗಿ ಜನಸಾಮಾನ್ಯರು, ಬಡವರು ಮಾಧ್ಯಮ ವರ್ಗದವರು ಸರಳವಾಗಿ ಜೀವನ ಸಾಗಿಸಬಹುದಾಗಿದೆ ಎಂದರು.  

ಸಿದ್ದರಾಮಯ್ಯನವರ ನಡೆ ಜನ ವಿರೋಧಿ ನೀತಿಯಾಗಿದೆ ಎಂದು ಖಂಡಿಸಿದ ಅವರು ಕೂಡಲೇ ಮುಸ್ಲಿಂ ಸಮುದಾಯ ತುಷ್ಟಿಕರ ಣಬಿಟ್ಟು ರಾಜ್ಯದ ಅಭಿವೃದ್ಧಿಗೆ ಮುನ್ನಡೆ ಸಾಧಿಸಲಿ ಎಂದು ಅವರು ಕಿಡಿಕಾರಿದರು. ನರೇಂದ್ರ ಮೋದಿ ಸರ್ಕಾರ 11 ವರ್ಷ ಪೂರೈಸಿದೆ. ದೇಶದ ಜನರಿಗೆ ಭಾರಿ ಬಂಪರ್ ಕೊಡುಗೆ ಘೋಷಿಸಿದ್ದಾರೆ.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ.ಬಸವರಾಜ ಕೇಲಗಾರ ಮಂಜುನಾಥ ಕಾಟಿ, ಪರಮೇಶಪ್ಪ ಗೋಳಣ್ಣನವರ, ಪ್ರಕಾಶ ಪೂಜಾರ, ಭಾರತಿ ಜಂಬಿಗಿ, ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಕುಬೇರ​‍್ಪ ಕೊಂಡಜ್ಜಿ, ಭೀಮಣ್ಣ ಎಡಚಿ, ಮುತ್ತಣ್ಣ ಪಾಟೀಲ್, ಮೈಲಪ್ಪ ಗೋಣಿಬಸಮ್ಮನವರ, ಬಸವರಾಜ ಚಳಗೇರಿ, ಮಾಳಪ್ಪ ಪೂಜಾರ್, ಪವನ್ ಮಲ್ಲಾಡದ, ಎ. ಬಿ.ಪಾಟೀಲ್, ಅಮೋಘ ಬದಾಮಿ, ಮೊದಲಾದವರು ಉಪಸ್ಥಿತರಿದ್ದರು