ಲಂಡನ್, ಡಿ 26,ಇನ್ಪೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ ನಲ್ಲಿ ಹಣಕಾಸು ಸಚಿವರಾಗುವ ಸಾಧ್ಯತೆಯಿದೆ. ಬ್ರಿಟನ್ನಲ್ಲಿ ಹೊಸದಾಗಿ ಸೂಪರ್ ಹಣಕಾಸು ಖಾತೆಯನ್ನುರಚಿಸುವ
ಚರ್ಚೆ ನಡೆದಿದೆ. ಮುಂದಿನ ಫೆಬ್ರುವರಿಯಲ್ಲಿ ಬೋರಿಸ್ ಜಾನ್ಸನ್ ಸಂಪುಟ ಪುನಾರಚಿಸಲಿದ್ದು ರಿಷಿ ಅವರಿಗೆ
ಮಹತ್ವದ ಹಣಕಾಸು ಖಾತೆ ಜವಾಬ್ದಾರಿ ನೀಡಲಿದ್ದಾರೆ
ಎನ್ನಲಾಗಿದೆ. ಜಾನ್ಸನ್ ಅವರು ಅಂತಾರಾಷ್ಟ್ರೀಯ
ವಾಣಿಜ್ಯ ಇಲಾಖೆಯನ್ನು ವಿಲೀನಗೊಳಿಸಿ ವಿಸ್ತ್ರತ ವಾಣಿಜ್ಯ ಖಾತೆಯನ್ನು ಹೊಸದಾಗಿ ರಚಿಸುವ ಸಾಧ್ಯತೆ
ಇದೆ.ರಿಷಿ ಬ್ರೆಕ್ಸಿಟ್ ಪ್ರಕ್ರಿಯೆಯ ಕಟ್ಟಾ ಬೆಂಬಲಿಗರಾಗಿರುವುದರಿಂದ ಅವರು ಜಾನ್ಸನ್ರ ಆಪ್ತರೂ ಆಗಿದ್ದಾರೆ.
ಹೀಗಾಗಿ ಅವರಿಗೆ ಹೊಸ ಹೊಣೆಗಾರಿಕೆ ದೊರೆಯುವ ಸಾಧ್ಯತೆ ಬಹಳ ದಟ್ಟವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.