ನಾಗೇಶ್ ಜೆ. ನಾಯಕ ಅವರಿಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ

ನಾಗೇಶ್ ಜೆ. ನಾಯಕ ಅವರಿಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ Nagesh J. Nayak presented with the Sirigannada Book Award

ನಾಗೇಶ್ ಜೆ. ನಾಯಕ ಅವರಿಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರದಾನ 

ಸವದತ್ತಿ  27: ಪಟ್ಟಣದ ಶಿವಬಸವ ನಗರದ ಶಿಕ್ಷಕ, ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರು ರಚಿಸಿದ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನಕ್ಕೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಹಿಂದವಾಡಿಯ ಬಿಎಂಇಆರ್ ಸಭಾಗೃಹದಲ್ಲಿ ಕಾದಂಬರಿಕಾರ ಡಾ. ರಾಜಶೇಖರ ಹಳೆಮನಿ ಹಾಗೂ ರಂಗಕರ್ಮಿ ಡಾ. ಶಶಿಧರ ನರೇಂದ್ರ ಅವರು ನಾಗೇಶ್ ಜೆ. ನಾಯಕ ಅವರಿಗೆ 5 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗೇಶ್, ಜಿಲ್ಲೆಯ ಸಾಹಿತಿಗಳಿಗೆ ನೀಡುವ ಈ ಪ್ರಶಸ್ತಿ ಯಾವ ರಾಜ್ಯಮಟ್ಟದ ಪ್ರಶಸ್ತಿಗಳಿಗಿಂತ ಕಡಿಮೇಯೇನಿಲ್ಲ. ಅತ್ಯಂತ ಪಾರದರ್ಶಕವಾಗಿ ಕೊಡಮಾಡುವ ಪುಸ್ತಕ ಪ್ರಶಸ್ತಿ ಯುವ ಬರಹಗಾರರ ಬರವಣಿಗೆಗೆ ಬಲ ತುಂಬುವ ಕೆಲಸ ಮಾಡುತ್ತದೆ. ಸತತ ನಲವತ್ತು ವರ್ಷಗಳಿಂದ ಈ ಕಾರ್ಯ ಮಾಡುತ್ತಿರುವ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎನ್‌. ಬಿ. ದೇಶಪಾಂಡೆ, ಸಿರಿಗನ್ನಡ ಗೌರವ ಪಡೆದ ಡಾ. ಅರವಿಂದ ಕುಲಕರ್ಣಿ, ಉಪಾಧ್ಯಕ್ಷೆ ಭಾರತಿ ವಡವಿ, ಕಾರ್ಯದರ್ಶಿ ಗುಂಡೇನಟ್ಟಿ ಮಧುಕರ ವೇದಿಕೆ ಮೇಲೆ ಉಪಸ್ಥಿತರಿದ್ದರು.