ಅಧ್ಯಕ್ಷರಾಗಿ ನಾಗರಾಜ ಅಮರೊಂಡ, ಉಪಾಧ್ಯಕ್ಷ ವಸ್ತಾದ ಜಮಾದಾರ ಆಯ್ಕೆ

ಅಧ್ಯಕ್ಷರಾಗಿ ನಾಗರಾಜ ಅಮರೊಂಡ, ಉಪಾಧ್ಯಕ್ಷ ವಸ್ತಾದ ಜಮಾದಾರ ಆಯ್ಕೆ Nagaraja Amaronda elected as President, Vastada Jamadar as Vice President

ಆಲಮೇಲ 14: ಪಟ್ಟಣದ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಸ್ಥಾನಕ್ಕೆ ಇತ್ತಿಚೆಗೆ ಚುನಾವಣೆ ಜರುಗಿತ್ತು. ಒಟ್ಟು 12 ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡದ ಒಂದು ವಸ್ತಾಕ್ಕೆ ವಸ್ತಾದ ದೇವಿಂದ್ರ ಜಮಾದಾನ ಓರ್ವನೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡು ಇನ್ನೂಳಿದ 11 ಸ್ಥಾನಗಳಿಗೆ 30 ಜನ ಸ್ಪರ್ಧಿಸಿದ್ದರು.  

ಫೆ. 1 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಾಮನ್ಯ ಕ್ಷೇತ್ರದಲ್ಲಿ ಭೀಮಾಶಂಕರ ಬಂಡಗಾರ, ನಾಗರಾಜ ಅಮರಗೊಂಡ, ಮೈಹಿಬೂಬ ಮಸಳಿ, ಮುಕ್ತರ ಅಮ್ಮದ ಕೊತಂಬರಿ, ಸಿದ್ದಪ್ಪ ಹಾವಳಗಿ, ಮಹಿಳಾ ಕ್ಷೇತ್ರದಿಂದ ಭಾರತಿ ಕೋಳಾರಿ, ಚಂದಮ್ಮ ಗುರಕಾರ, ಹಿಂದುಳಿದ ವರ್ಷದ ಅ ಕ್ಷೇತ್ರದಿಂದ ಅಬ್ದುಲ್ ವಾಹಬ ಸುಂಬಡ, ಹಿಂದುಳಿದ ವರ್ಷದ ಬ ಕ್ಷೇತ್ರದಿಂದ ಪಂಚಯ್ಯ ರಾಂಪೂರಮಠ, ಪರಿಶಿಷ್ಟ ಜಾತಿಯಿಂದ ಶಶಿಧರ ಗಣಿಯಾರ ಬಿನ್ನ ಸಾಲಗಾರ ಕ್ಷೇತ್ರದಿಂದ ಪ್ರಮೋದ ಕೋಳಕೂರ ಚುನಾಯಿತಾರಿ ಆಯ್ಕೆಗೊಂಡಿದ್ದರು. ನಂತರ ಪೆ. 12 ರಂದು ಸಂಘದ ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ನಾಗರಾಜ ಅಮರೋಂಡ ಮತ್ತು ಭಾರತಿ ಕೊಳಾರಿ ಇಬ್ಬರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಸ್ತಾದ ಜಮಾದಾರ ಮುಕ್ತರಾಹಮ್ಮದ ಕೊತಂಬರಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಅದ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಾಗರಾಜ ಅಮರಗೊಂಡ ಬಣ ಜಯಗಳಿಸಿತ್ತು. ಅಧ್ಯಕ್ಷರಾಗಿ ನಾಗರಾಜ ಅಮರಗೊಂಡ, ಉಪಾಧ್ಯಕ್ಷರಾಗಿ ವಸ್ತಾದ ಜಮಾದಾರ ತಲಾ 7 ಮತಗಳು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಗಳಾದ ಭಾರತಿ ಕೊಳಾರಿ, ಮುಕ್ತರಾಹಮ್ಮದ ಕೊತಂಬರಿ ನಾಮ ಪತ್ರ ಸಲ್ಲಿಸಿ ಬಹುಮತ ಸಿಗದರಿಂದ ಕೊನೆಗೆ ತಮ್ಮ ಮತವು ಹಾಕಿಕೊಳ್ಳದೆ ಹೊರಹೊಗಿದ್ದಾರೆ ಎಂದು ಚುನಾವಾಧಿಕಾರಿ ಲಿಲಾವತಿಗೌಡ ತಿಳಿಸಿದ್ದರು.  

ಸಂಘದ ಮುಖ್ಯ ಕಾರ್ಯದರ್ಶಿ ಭಾಗಣ್ಣ ಗುರಕಾರ ಸಹಾಯಕ ಚುನಾವಣಾದಿಕಾರಿಗಳಾಗಿದ್ದರು. ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆದ ಚುನಾವಣೆಯಲ್ಲಿ ಆಡಳಿತಮಂಡಳಿ ಸದಸ್ಯರಾದ ಭೀಮಾಶಂಕರ ಬಂಡಗಾರ, ಸಿದ್ದಪ್ಪ ಹಾವಳಗಿ, ಪ್ರಮೋದ ಕೋಳಕೂರ, ಚಂದಮ್ಮ ಗುರಾಕಾರ, ಕ್ಷೇತ್ರಾಧಿಕಾರಿ ಎಂ.ಎಸ್‌. ಜೇವಾಡಗಿ ಸೇರಿದಂತೆ ಅಬ್ಯಾರ್ಥಿಗಳಾದ ನಾಗರಾಜ ಅಮರಗೊಂಡ, ವಸ್ತದ ಜಮಾದಾರ 7 ಜನ ಮತ ಜಲಾಯಿಸಿದ್ದಾರೆ. ಒರ್ವ ಸದಸ್ಯ ಗೈರಾಗಿದ್ದು ಪ್ರತಿಸ್ಪರ್ಧಿಗಳ ಬಣದ 5 ಜನ ಸದಸ್ಯರು ಮತದಾನ ಮಾಡದೆ ತೆರಳಿದ್ದಾರೆ. ವಿಜೋಯೋತ್ಸವ: ಅದ್ಯಕ್ಷ ಉಪಾಧ್ಯಕ್ಷ ಗೆಲಯವು ಸಾದೀಸಿ ವಿಜಯೋತ್ಸವ ಆಚರಿಸಿದರು.  

ವಿಜೋತ್ಸವದಲ್ಲಿ ಭೀಮಾಶಂಕರ ಬಂಡಗಾರ, ಪ.ಪಂ. ಸದಸ್ಯ ಸಂಜೀವಕುಮಾರ ಯಂಟಮಾನ, ಶಿವು ಗುರಕಾರ, ಅಂಬಣ್ಣ ಗುರಕಾರ ಸೇರಿದಂತೆ ಮುಂತಾದವರು ಇದ್ದರು.