ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗ ಪಂಚಮಿ ಆಚರಣೆ
Naga Panchami celebrated by distributing milk to poor children
ಹಾವೇರಿ 28: ಬಸವಕೇಂದ್ರ ಶ್ರೀಹೊಸಮಠ ವತಿಯಿಂದ 35 ವರ್ಷಗಳಿಂದ ನಾಗ ಪಂಚಮಿಆಚರಣೆ ಬದಲು ಬಸವ ಪಂಚಮಿಯನ್ನಾಗಿ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಹಬ್ಬಗಳಿಗೆ ವೈಚಾರಿಕತೆ ತುಂಬುವುದು ಕಾರ್ಯ ಜರುಗುತ್ತಿದೆ ಎಂದು ಶ್ರೀ ಹೊಸಮಠದ ಶ್ರೀ ಬಸವಶಾಂಕಲಿಂಗ ಸ್ವಾಮಿಜಿಗಳು ಹೇಳಿದರು.
ಬಸವಕೇಂದ್ರ ಶ್ರೀ ಹೊಸಮಠ ವತಿಯಿಂದ ಸೋಮವಾರ ನಾಗಪಂಚಮಿ ನಿಮಿತ್ತ ಕರ್ಜಗಿ ಗ್ರಾಮದ ಶಿಶುವಿಹಾರ ಶಾಲೆ ಮಕ್ಕಳಿಗೆ ಹಾಲನ್ನು ಕುಡಿಸಿ ಅವರು ಮಾತನಾಡಿದರು.
ಯಜ್ಞವನ್ನು ನಿಲ್ಲಿಸಿದ ದಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನವಾಗಿತ್ತು.ಈ ಯಜ್ಞದ ಸಮಯದಲ್ಲಿ ಒಟ್ಟಾರೆಯಾಗಿ ಮಹಾಭಾರತವನ್ನು ಮೊದಲ ಖುಷಿ ವೈಶಂಪಾಯನ ನಿರೂಪಿಸಿದರು.ಅಂದಿನಿಂದಆ ದಿನವನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ.ಅಜ್ಞಾನ ಮತ್ತು ಅಂಧಕಾರವನ್ನುನಿವಾರಿಸುವ ಶಕ್ತಿ ಜ್ಞಾನಕ್ಕಿದೆ. ನುಡಿಗಳಲ್ಲಿ ಜ್ಞಾನಪ್ರಕಾಶವಿದ್ದರೆಅಜ್ಞಾನ ಅಂಧಕಾರಗಳು ಪಲಾಯನ ಮಾಡುತ್ತವೆ. ಹಬ್ಬಗಳು ಸಮಾಜದಲ್ಲಿ ಆದರ್ಶವಾಗಬೇಕು.ಕಲ್ಲ ನಾಗರ ಕಂಡರೆಹಾಲನ್ನೆರಿವವರು.ದಿಟ್ಟದ ನಾಗರ ಕಂಡರೆಕೊಲ್ಲೆಂಬರಯ್ಯಾಇಲ್ಲದ ದೇವರಿಗೆ ಸಲ್ಲದ ಸೇವೆ ಯಾಕೆ ? ಮನೆಗೆ ಬಂದ ಅತಿಥಿ.ಅಭ್ಯಾಗತರು.ಬಂಧು ಬಾಂಧವರನ್ನು ದೇವರೆಂದು ಭಾವಿಸು.ಭಾರತದಲ್ಲಿ ವಿವಿಧ ಧರ್ಮಗಳಹಬ್ಬಗಳು ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುತ್ತವೆಪಂಚಮಿ ಎಂದರೆ ಐದುತತ್ವಗಳನ್ನು ಒಳಗೊಂಡಿದೆ.ಸೃಷ್ಟಿ.ಮನುಷ್ಯನ ದೇಹಪಂಚಭೂತಗಳಿಂದ ಕೂಡಿದೆ.ಹಾಲು ಕೂಡ ಒಂದು ಮನುಷ್ಯನಿಗೆ ಆಹಾರ.12ನೇ ಶತಮಾನದಲ್ಲಿ ಬಸವಾದಿಶರಣರು ಮೂಡನಂಬಿಕೆ.ಕಂದಾಚಾರಿಗಳಿಗೆ ತಿಲಾಂಜಲೀನೀಡಿ ವೈಚಾರಿಕತೆಯ ತಳಹದಿಯ ಮೇಲೆ ಸಾಮಾಜಿಕ ಸಮಾನತೆ ಸ್ಥಾಪಿಸಿದರು. ಮುಗ್ಧಜನರನ್ನು ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ವಿರುದ್ಧ ತಮ್ಮ ವಚನ ಚಳುವಳಿಯನ್ನು ಆರಂಭಿಸಿದರು ಎಂದುಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಸತೀಶ ಹರಿವಿಮಠ.ಮಂಜುನಾಥ.ಚೇತನಮಹಿಳೆಯರು ಹಾಗೂ ವಿದ್ಯಾರ್ಥಿಗಳುಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 