ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲಯದಲ್ಲಿ ನ್ಯಾಸಾ ವಾರ್ಷಿಕೋತ್ಸವ : ಸಾಧನೆಗಳ ಪ್ರಶಂಸೆ

ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲಯದಲ್ಲಿ ನ್ಯಾಸಾ ವಾರ್ಷಿಕೋತ್ಸವ : ಸಾಧನೆಗಳ ಪ್ರಶಂಸೆ NYASA Anniversary at KLE Nursing College: Appreciation of Achievements

ಲೋಕದರ್ಶನ ವರದಿ 

ಬೆಳಗಾವಿ 13 :  ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲವು “ನ್ಯಾಸಾ” ವಾರ್ಷಿಕೋತ್ಸವನ್ನು ಕೆ.ಎಲ್‌.ಇ ಸಭಾಂಗಣದಲ್ಲಿ ಆಚರಿಸಿತು.  ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲದ ಪ್ರಾಂಶುಪಾಲರಾದ ಪ್ರೊ.ಡಾ.ವೀರೇಶಕುಮಾರ ನಂದಗಾವ ಅವರು ಸಂಸ್ಥೆಯ 2025-2026ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ನ್ಯಾಸಾ ಮ್ಯಾಗಜಿನ್ ಮತ್ತು ವಾರ್ತಾ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು ಹಾಗೂ ಈ ವೇಳೆ ಅತಿಥಿಗಳನ್ನು ಸನ್ಮಾನಿಸಲಾಯಿತು. 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಕಾಂತ ಪುಲಾರಿ. ಕುಲಸಚಿವರು, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್, ಬೆಂಗಳೂರು ಇವರು ಆಗಮಿಸಿದ್ದರು ಮತ್ತು ಸಾಧನೆಗೈದ ಎಲ್ಲ ವಿಧ್ಯಾರ್ಥಿಗಳನ್ನು ಅಭಿನಂದಿಸಿ, ನರ್ಸಿಂಗ್ ವೃತ್ತಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆಯಿದೆ ಮತ್ತುಕೆ.ಎಲ್‌.ಇ.  ಸಂಸ್ಥೆಯು ಸಮಾಜಕ್ಕೆ ಸಮರ್ಥ ಶುಶ್ರೂಷಕರನ್ನು ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆಯೆಂದು ಹೇಳಿದರು. 

ಕೆ.ಎಲ್‌.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಽಽ ವಿ.ಎಂ.ಪಟ್ಟಣ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲವನ್ನು 100ಅ ಪ್ರತಿಶತ ಶೈಕ್ಷಣಿಕ ಯಶಸನ್ನು ಸಾಧಿಸಿದ್ದಕ್ಕಾಗಿ ಅಭಿನಂದಿಸಿದರು ಹಾಗೂ ಶುಶ್ರೂಷಾ ಮಹಾವಿದ್ಯಾಲಯವು ಉದ್ಯೋಗ ಸೇವೆಗಳು ಮತ್ತು ಜಾಗತಿಕ ಭಾಷಾ ತರಬೇತಿಯಲ್ಲಿ ಶ್ರೇಷ್ಢವಾಗಿದೆಯೆಂದು ಉಲ್ಲೇಖಿಸಿದರು. 

ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿಗೌರವಿಸಲಾಯಿತು. ಕೆ.ಎಲ್‌.ಇ. ನರ್ಸಿಂಗ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗುರುರಾಜ ಉಡಪಿ ಅವರು ಸರ್ವರನ್ನು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಡಾ.ಶ್ವೇತಾದಂಡಗಿ ವಂದಿಸಿದರು. ಕಾರ್ಯಕ್ರಮದಲ್ಲ್ಲಿ ಕೆ.ಎಲ್‌.ಇ. ನರ್ಸಿಂಗ ಕಾಲೇಜಿನ ಡೀನ್ ಡಾ. ಸಂಗೀತಾ ಖರಡೆ ಮತ್ತು ವಿದ್ಯಾರ್ಥಿ ಸಮಿತಿಯ ಸಲಹೆಗಾರರು ಉಪಸ್ಥಿತರಿದ್ದರು. ವಾರ್ಷಿಕೋತ್ಸವು ಸಮಾರಂಭವು ರಾಷ್ಟ್ರಗೀತೆ ಹಾಡುವುದರ ಮೂಲಕ ಮುಕ್ತಾಯಗೊಂಡಿತು.