ತಾಳಿಕೋಟೆಯಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರ
NSS special camp in Talikote
ತಾಳಿಕೋಟಿ 09: ಪಟ್ಟಣದ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಶ್ರಯ ಕಾಲೋನಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ (ಓಖಖ) ವಿಶೇಷ ಶಿಬಿರವು ಮೂರನೇ ದಿನ ಬುಧವಾರ ಸಂಭ್ರಮದಿಂದ ಆರಂಭಗೊಂಡಿತು.ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ನಗರದ ಪೊಲೀಸ್ ಸ್ಟೇಷನ್ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.ಶಿಬಿರದ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ “ಆರೋಗ್ಯವೇ ಭಾಗ್ಯ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಉಪನ್ಯಾಸಕರಾದ ಡಾ. ಎ.ಎ. ನಾಲಬಂದ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾಲ್ನಡಿಗೆ, ಯೋಗಾಸನಗಳನ್ನು ಮಾಡುವುದು ಅಗತ್ಯವೆಂದರು. ಸರಿಯಾದ ನಿದ್ರೆ, ಶುದ್ಧ ಆಹಾರ ಸೇವನೆ, ಯಥೇಚ್ಛ ನೀರು ಸೇವನೆ ಮತ್ತು ಮಾನಸಿಕ ನೆಮ್ಮದಿ ಇವು ಉತ್ತಮ ಆರೋಗ್ಯಕ್ಕೆ ಅಗತ್ಯವೆಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಎಸ್. ಬಿ. ಹಿಪ್ಪರಗಿ ಅವರು ಮಾತನಾಡಿ, ಯುವಕರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಶುದ್ಧ ಆಹಾರ ಮತ್ತು ಶುದ್ಧ ಜೀವನ ಶೈಲಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮಾರ್ಗದರ್ಶಕ ಹಾಗೂ ಉಪನ್ಯಾಸಕರಾದ ವಾಯ್.ಎಚ್. ಅಂಗಡಗೇರಿ ಅವರು, ಸಮತೋಲನ ಆಹಾರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಮಾತನಾಡಿ ಆರೋಗ್ಯದ ಬಗ್ಗೆ ಅಲಕ್ಷ್ಯ ತೋರಬಾರದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ವೈಸ ಚೇರಮಾನ್ನರು ಕೆ.ಎಸ್.ಮುರಾಳ ಸಹ ಕಾರ್ಯದರ್ಶಿ ಎಂ.ಎಸ್. ಸರಶೆಟ್ಟಿ ಉಪಸ್ಥಿತರಿದ್ದರು.ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶರಣಮ್ಮ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಅನ್ನಪೂರ್ಣ ತಂಡ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಕರಿಯಣ್ಣ ಸ್ವಾಗತಿಸಿ ಪರಿಚಯಿಸಿದರು. ದೀಪಿಕಾ ಪುಷ್ಾರೆ್ಪಣ ನೆರವೇರಿಸಿದರು. ಸಹನಾ ಸಜ್ಜನ ವಂದನಾರೆ್ಣ ಸಲ್ಲಿಸಿದರು. ನೇತ್ರಾವತಿ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಎ.ಎ. ಗಂಗನಗೌಡ, ಕಾರ್ಯದರ್ಶಿ ರೇಷ್ಮಾ ಚಲವಾದಿ, ಮಹಿಳಾ ಕಾರ್ಯದರ್ಶಿ ಪಾರ್ವತಿ ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 