ಸರಕಾರದ ಯೋಜನೆ ಮನೆಗೆ ತಲುಪಿಸಲು ಎನ್.ಎಸ್.ಎಸ್ ಉಪಕಾರಿ : ಪಠಾಣ
NSS help to deliver government scheme home: Pathana
ಸರಕಾರದ ಯೋಜನೆ ಮನೆಗೆ ತಲುಪಿಸಲು ಎನ್.ಎಸ್.ಎಸ್ ಉಪಕಾರಿ : ಪಠಾಣ
ಶಿಗ್ಗಾವಿ 23 : ಸಂಸ್ಕಾರ, ಸಂಸ್ಕೃತಿ, ದೇಶದ ಏಕ್ಯತೆ ಕಾಪಾಡಲು ಮತ್ತು ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ರಾಷ್ಟ್ರೀಯ ಸೇವಾ ಯೋಜನೆ ಬಹಳ ಉಪಕಾರಿಯಾಗಿದೆ ಎಂದು ಶಾಸಕ ಯಾಶೀರ ಅಹ್ಮದಖಾನ ಪಠಾಣ ಹೇಳಿದರು.ತಾಲೂಕಿನ ಹಿರೇಬೇಂಡಿಗೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ರಂಭಾಪೂರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಎನ್.ಎಸ್.ಎಸ್.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವಕರೇ ನಾಳಿನ ಪ್ರಜೆಗಳಾಗಬೇಕಾದರೆ ಟಿ.ವ್ಹಿ, ಮೊಬೈಲ್, ವಾಟ್ಸಾಪ್, ಫಬ್ಬಜೀ, ದುಶ್ಚಟದಿಂದ ಮುಕ್ತರಾದರೆ ಮಾತ್ರ ಆದರ್ಶ ವಿದ್ಯಾರ್ಥಿಗಳು ಆಗಬಹುದು ಅಲ್ಲದೇ ಎನ್.ಎಸ್.ಎಸ್ ಯೋಜನೆಯ ಕೆಲವೊಂದು ಉದ್ದೇಶಗಳನ್ನು ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಅಳವಡಿಸಿಕೊಂಡರೆ ಕ್ಷೇತ್ರವು ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದರು. ನಾನು ಸಹಿತ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿ ಆಗಿದ್ದು ನನಗೆ ಈ ಯೋಜನೆ ಬಗ್ಗೆ ತುಂಬಾ ವಿಶ್ವಾಸವಿದೆ ಮತ್ತು ಗೌರವವಿದೆ ಎಂದರು. ಪ್ರಾಚಾರ್ಯ ಎಫ್.ಎಸ್.ಶಿವಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶ ಮಹಾತ್ಮ ಗಾಂದೀಜಿಯವರದಾಗಿತ್ತು ಅದನ್ನು ಭಾರತ ಸರ್ಕಾರ ಕಾರ್ಯರೂಪಕ್ಕೆ ತಂದು ಗಾಂದೀಜಿಯವರ ಕನಸು ನನಸು ಮಾಡಿದೆ ಎಂದರು.
ಸಾನಿಧ್ಯವಹಿಸಿ ಸಂಗನಬಸವ ಶ್ರೀಗಳು ವಿರಕ್ತಮಠ ಶಿಗ್ಗಾವಿ ಆರ್ಶಿವದಿಸಿದರು. ಸಮ್ಮುಖ ವೇದಮೂರ್ತಿ ರೇವಣಸಿದ್ದಯ್ಯ ಹಿರೇಮಠ, ಅಧ್ಯಕ್ಷತೆ ರಂಬಾಪೂರಿ ಸಂಸ್ಥೆ ಕಾರ್ಯದರ್ಶಿ ಎಸ್.ಬಿ.ಹಿರೇಮಠ, ಶೈಕ್ಷಣಿಕ ನಿರ್ದೇಶಕ ಪೋ.ಪಿ.ಸಿ.ಹಿರೇಮಠ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ದ್ಯಾಮಣ್ಣವರ, ಜಿ.ಬಿ.ಬೈಲಪ್ಪಗೌಡ್ರ, ಪಕ್ಕೀರಯ್ಯ ಹಿರೇಮಠ, ನಾಗಯ್ಯ ಹಿರೇಮಠ, ಕರಿಯಪ್ಪ ಮುದ್ದೇವರ, ತಾಜೀಯಾಬಾನು ಪಠಾಣ, ವೀರನಗೌಡ ನಡುವಿನಮನಿ, ಮುಖಂಡರಾದ ರಮೇಶ ಸಾತಣ್ಣವರ,ಬಾಬರ ಬಾವೋಜಿ, ಫಯಾಜ ಸವಣೂರ, ಸಂತೋಷ ಚಾಕಲಬ್ಬಿ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಾಕ್ರಮಾಧಿಕಾರಿ ಎಸ್.ಬಿ.ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 