ವ್ಯಕ್ತಿತ್ವ ವಿಕಾಸತೆಗೆ ಎನ್‌ಎಸ್‌ಎಸ್ ಶಿಬಿರಗಳು ಸಹಕಾರಿ- ಡಾ. ಆರ್. ಎಂ. ಕುಬೇರ್ಪ
NSS camps are helpful in personality development- Dr. R. M. Kuberpa
ರಾಣೆಬೆನ್ನೂರು 24: ಭಾರತೀಯ ಪರಂಪರೆಯಲ್ಲಿ ಅತ್ಯಂತ ಪರಸ್ಪರ ಪ್ರೀತಿ, ವಿಶ್ವಾಸ, ಅಭಿಮಾನ ಮತ್ತು ಭಾವೈಕ್ಯತೆಯೊಂದಿಗೆ ಸಮಾನತೆ ಸಾಧಿಸಿ, ಬದುಕಿ ಬಾಳುವುದೇ ನಿಜವಾದ ಮಾನವಿಯ ಧರ್ಮವಾಗಿದೆ ಎಂದು ಬಿ. ಎ. ಜೆ. ಎಸ್. ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಎಂ. ಕುಬೇರ್ಪ ಹೇಳಿದರು.
ಅವರು ಸೋಮವಾರ ರಾತ್ರಿ ತಾಲೂಕಿನ ಕಲಾವಿದರ ತವರೂರು ಖ್ಯಾತಿಯ ಆರೇಮಲ್ಲಾಪುರ ಗ್ರಾಮದ, ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಸಂಸ್ಕೃತಿ ಭವ್ಯ ಭಾರತದ ಭದ್ರತೆಗೆ ಮೂಲ ಬುನಾದಿಯಾಗಿ ಬೆಳೆದು ಬಂದಿದೆ. ಇದು ಕೇವಲ ಇಂದು ಮತ್ತು ನಿನ್ನೆಯದಲ್ಲ, ಇತಿಹಾಸದಿಂದಲೂ ಸಾಗಿ ಬಂದಿದೆ. ಅದರ ಪರಿಣಾಮವೇ ಭಾರತದ ಗ್ರಾಮ ಸಂಸ್ಕೃತಿಯ ಬೇರು ಇಂದಿಗೂ ಗಟ್ಟಿಯಾಗಿ ಉಳಿದು ಬೆಳೆಯಲು ಸಾಧ್ಯವಾಗಿದೆ ಎಂದರು.
ಇಂದಿನ ವಿದ್ಯಾರ್ಥಿಗಳು ಸೇವಾ ಯೋಜನಾ ಶಿಬಿರದ ಮೂಲಕ ಅಲ್ಲಿನ ಆಚಾರ, ವಿಚಾರ, ಇತಿಹಾಸದ ಸಂಸ್ಕೃತಿ ಪರಂಪರೆ ಇವೆಲ್ಲವನ್ನೂ ತಿಳಿದುಕೊಳ್ಳಲು, ಮತ್ತು ಭವಿಷ್ಯದ ಭದ್ರಬುನಾದಿಗೆ ತಮ್ಮದೇ ಆದ ಸೇವೆ ಸಲ್ಲಿಸಲು ಶಿಬಿರಗಳು ತುಂಬಾ ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,ಕಾಲೇಜು ಪ್ರಾಚಾರ್ಯ ಡಾ. ಎಂ. ಎಂ. ಮೃತ್ಯುಂಜಯ ಅವರು, ಶಿಬಿರಗಳ ಆಯೋಜನೆಗೆ ಧರ್ಮ ಜಾಗೃತಿ ಜನಪದ ಕಲಾವಿದರ ತವರೂರು ಈ ಗ್ರಾಮ ಅತ್ಯಂತ ಸೂಕ್ತವಾಗಿದೆ. ಅದಕ್ಕಾಗಿ ದ್ವಿತೀಯ ಬಾರಿಗೆ ಶಿಬಿರ ಆಯೋಜಿಸಿದೆ.ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಪರಸ್ಪರ ಸಹಾಯ, ಸಹಕಾರ ಕಾಲೇಜು ಆಡಳಿತ ಮಂಡಳಿಯ ಸಂಪ್ರೀತಿಗೆ ಪಾತ್ರವಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ, ಶಿಡ್ಲು ಪತ್ರಿಕೆ ಸಂಪಾದಕ, ಎಸ್. ಜಿ. ಮಹಾನಭಾವಿಮಠ, ಅಭಿರುಚಿ ಜನಪದ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ನಾಗರಾಜ, ವ್ಯಕ್ತಿತ್ವ ನಿರ್ಮಾಣ ಮತ್ತು ವಿದ್ಯಾರ್ಥಿಗಳು ವಿಷಯ ಕುರಿತು ಮಾತನಾಡಿದರು.
ಗ್ರಾಮದ ಮುಖಂಡರಾದ ಶೇಖಣ್ಣ ಸಣ್ಣಬೂಮ್ಮಾಜಿ, ಬಸವರಾಜಪ್ಪ ನಾಗರಜ್ಜಿ, ಶ್ರೀಮತಿ ಸುಮಾ ಜಾದವ, ನಿಂಗಪ್ಪ ವಗ್ಗನವರ, ರಾಜಕುಮಾರ ಹಲವಾಗಲ, ಮಾರುತಿ ಹಲವಾಗಲ, ಪ್ರೊ,ಎಸ್. ಹೆಚ್. ಹುಚ್ಚಗೊಂಡರ, ಪ್ರೊ,ರಾಜೀವ ಕೆ.ಎಂ. ನಿಕೇತನ ಕಮ್ಮಾರ, ಹನುಮಂತಪ್ಪ ದೊಡ್ಡತಮ್ಮಣ್ಣನವರ,
ಫಕೀರ್ಪ ಸೂರ್ವೆ, ಗಂಗಾಧರ ಸುರ್ವೆ, ಡಾ. ಬಸವರಾಜ ಪವಾರ, ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು. ಬಸವರಾಜ ಅಂಬಿಗೇರ ಪ್ರಾರ್ಥಿಸಿದರು. ಪೂಜಾ ಹೆಗಡೇರ ಸ್ವಾಗತಿಸಿದರು. ಕಾರ್ಯಕ್ರಮ ಯೋಜನಾಧಿಕಾರಿ ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಕ್ಷ್ಮಿ ಹಣಚಿಕ್ಕಿ ನಿರೂಪಿಸಿ, ನಾಗರಾಜ ತಾವರಗೊಂದಿ ವಂದಿಸಿದರು. ನಂತರ ನಡೆದ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಗ್ರಾಮದ ನಾಗರಿಕರ ಗಮನ ಸೆಳೆದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 