ಬಸ್ತವಾಡದಲ್ಲಿ ಬೆಳಗಾವಿಯ ಮಹಾವೀರ ಮಿರ್ಜಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ
NSS camp of Mahavir Mirji College, Belgaum in Bastawada
ಲೋಕದರ್ಶನ ವರದಿ
ಕಾಗವಾಡ: (ಬೆಳಗಾವಿ) 05: ನಗರದ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಶನಿವಾರ ದಿ.04 ರಂದು ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಆಯೋಜಿಸಲಾಯಿತು. ಶಿಬಿರವನ್ನು ಬಸ್ತವಾಡ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಶಾ ಎಸ್. ಉದ್ಘಾಟಿಸಿ, ಮೊಬೈಲ್ ಬಳಕೆಯ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಿಲ್ಪಾ ಪಾಟೀಲ, ಸಮಿತಿಯ ಬೆಳಗಾವಿಯ ಶಾಲಾ ಹಾಗೂ ಕಾಲೇಜಿನ ಕಾರ್ಯಕಾರಿ ಮಂಡಳಿಯ ಚೇರಮನ್ ವಿನೋದ ಪಾಟೀಲ ಮಾತನಾಡಿ, ಶಿಬಿರಾರ್ಥಿಗಳಿಗೆ ತಮ್ಮ ಜವಾಬ್ದಾರಿಯನ್ನು ತಿಳಿಸಿಕೊಟ್ಟರು.
ಅತಿಥಿಗಳಾಗಿ ಶಾಲೆ ಹಾಗೂ ಕಾಲೇಜು ಕಾರ್ಯಕಾರಿ ಮಂಡಳಿಯ ಸದಸ್ಯ ಎ.ಬಿ. ಪಾಟೀಲ, ಶರದ ಬಾಳಿಕಾಯಿ ಅವರು ಎನ್‌ಎಸ್‌ಎಸ್ ಎಂದರೆ ನಾನು ಸಮಾಜ ಸೇವಕ ಎಂದು ರಾಷ್ಟ್ರೀಯ ಸೇವಾ ಯೋಜನೆ ಮಹತ್ವವನ್ನು ಬಗ್ಗೆ ತಿಳಿಸಿದರು.
ಈ ವೇಳೆ ಚಂದ್ರ್ಪ ಜುಜಿನ, ಮಹಾವೀರ ಮಿರ್ಜಿ ಕಾಲೇಜಿನ ಪ್ರಾಂಶುಪಾಲ ರವಿ ದಂಡಗಿ, ಉಪಪ್ರಾಂಶುಪಾಲ ಡಾ. ಭರತ ಅಲಸಂದಿ, ಸಹಾಯಕ ಪ್ರಾಧ್ಯಾಪಕ ನಾಗವೇಣಿ ಧರೆನ್ನವರ, ಸೋನಾಲಿ ಅಳಪ್ಪನವರ, ಶಿಬಿರಾಧಿಕಾರಿ ನಾಗೇಶ ತಳವಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಾಹುಬಲಿ ಬಸ್ತವಾಡ, ಭೂಮಿಕಾ ಪಾರಿಶ್ವಾಡ ಮತ್ತು ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 