ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರಂಭ
NSS Annual Special Camp Ceremony
ಕಲಾದಗಿ 01: ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಹ ಶಿಕ್ಷಕಿ ಬಿ. ಹೆಚ್. ಮೈಸೂರು ಅವರು, ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧಿಯವರ ಆದರ್ಶ ಗ್ರಾಮ ಕಲ್ಪನೆಯ ಕನಸಿನ ಭಾಗ. ಸೇವೆ, ಸಹಕಾರ ಮತ್ತು ನಾಯಕತ್ವ ಈ ಮೂರು ಗುಣಗಳ ಮೂಲಕವಾಗಿ ಗ್ರಾಮಸ್ವರಾಜ್ಯವನ್ನು ಸ್ಥಾಪಿಸುವ, ಮಕ್ಕಳಲ್ಲಿ ಸೇವಾ ಮನೋಭಾವವನ್ನು ರೂಪಿಸುವ ವಿಶಿಷ್ಟ ಯೋಜನೆಯಾಗಿದೆ. ಇದನ್ನ ಸಾಮಾಜಿಕವಾಗಿ ಕೊಂಡೊಯ್ಯುವುದರ ಮೂಲಕ ಅಭಿವೃದ್ಧಿಯ ಪತಾಕೆಗೆ ನಾವೆಲ್ಲರೂ ಸಹಭಾಗಿಗಳಾಗಬೇಕು ಎಂದು ನುಡಿದರು.ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್. ಬಿ ಮಹಾಂತೇಶ್ ಅವರು ರಾಷ್ಟ್ರೀಯ ಸೇವಾ ಯೋಜನೆಯು ಒಂದು ಹೊಸ ಅನುಭವ, ಹೊಸ ಪರಿಸರ, ಹೊಸ ಒಡನಾಟಗಳಲ್ಲಿ ಹೇಗೆ ನಮ್ಮ ಬದುಕುಗಳನ್ನ ರೂಪಿಸಿಕೊಳ್ಳಬೇಕು ಎನ್ನುವುದನ್ನು ನಿಕಟ ಪೂರ್ವವಾದ ಅನುಭವಗಳು ನಮ್ಮನ್ನು ಹಾದು ಹೋಗುತ್ತವೆ. ಇದೊಂದು ಸವಾಲಿನ ಕೆಲಸ. ದತ್ತು ಗ್ರಾಮ ಆಯ್ಕೆ, ಸಂಪನ್ಮೂಲ ಕ್ರೂಡೀಕರಣ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಉಂಟುಮಾಡುವಿಕೆ ಹಾಗೂ ಎಲ್ಲರನ್ನೂ ಸಮನ್ವಯಗೊಳಿಸಿಕೊಂಡು ಯಶಸ್ವಿಗೊಳಿಸುವ ರೀತಿ ವಿನೂತನವಾಗಿರುತ್ತದೆ. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಬದುಕಿನ ಅನುಭವಗಳು ಕಟ್ಟಿಕೊಡುತ್ತವೆ. ಒಂದು ಹೊಸ ಪರಿಸರದಲ್ಲಿ ಆಗುವ ಕಂಡುಂಡ ಅನುಭವಗಳು ಬದುಕಿನ ಪಾಠಗಳಾಗುತ್ತವೆ ಎಂದು ಮಾತನಾಡಿದರು.
ಶಿಬಿರಾಧಿಕಾರಿಗಳಾದ ಡಾ. ಬಿಂದು. ಹೆಚ್. ಎ ಅವರು ಹೊಸ ಅನುಭವ, ಹೊಸ ಪಾಠ ನನ್ನ ಅನುಭವಕ್ಕೆ ಬಂದಿದೆ. ಒಂದು ಯೋಜನೆಯ ಸಫಲತೆಯಿಂದ ಹತ್ತಾರು ಕೈಗಳ ಸಹಕಾರ ಇದ್ದೇ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಎಲ್ಲರನ್ನೂ ಸ್ಮರಿಸಿ, ಸಹಕಾರ ಯಶಸ್ಸಿನ ಗುಟ್ಟು ಎಂದು ನುಡಿದರು. ಘಟಕದ ಏಳು ದಿನದ ವರದಿಯನ್ನು ಕು.ಯಂಕಮ್ಮ ರವರು ಮಂಡಿಸಿದರು. ಪ್ರಾರ್ಥನೆಯನ್ನು ಗಂಗಮ್ಮ ಮತ್ತು ಸಂಗಡಿಗರು, ಡಾ. ಅಶೋಕ್ ಹುಲ್ಲಳ್ಳಿ, ಡಾ. ಸರೋಜಿನಿ ಹೊಸಕೇರಿ, ಡಾ. ಎಲ್ಲಪ್ಪ. ಜಿ, ಡಾ. ಪುಂಡಲಿಕ ಹುನ್ನಳ್ಳಿ, ಡಾ. ಲೋಕಣ್ಣ ಭಜಂತ್ರಿ, ಸಿ. ವೈ ಮೆಣಸಿನಕಾಯಿ, ಶ್ರೀದೇವಿ ಮುಂಡಗನೂರು, ಶೋಭಾ ಪೂಜಾರಿ, ವಿದ್ಯಾರ್ಥಿ ನಾಯಕ ಸಚಿನ್ ಮಾದಾರ, ವಿದ್ಯಾರ್ಥಿ ನಾಯಕಿ ಹುಲಿಗೆಮ್ಮ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 