ನರೇಗಾ ಕಾಮಗಾರಿ ಪರೀಶೀಲನೆ ಮಾಡಿದ: ಮಾಹಾದೇವಪ್ಪ ಏವೂರ

ನರೇಗಾ ಕಾಮಗಾರಿ ಪರೀಶೀಲನೆ ಮಾಡಿದ: ಮಾಹಾದೇವಪ್ಪ ಏವೂರ NREGA work inspected: Mahadevappa Evur

ಇಂಡಿ 23: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹದೇವಪ್ಪ ಏವೂರ ಅವರು ತಾಲೂಕಿನ ಕೊಳುರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಸಂಗ ಗ್ರಾಮದ ಕೆರೆ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಪರೀಶೀಲನೆ ಮಾಡಿದರು. ಕೂಲಿಕಾರರೊಂದಿಗೆ ಸಂವಾದ ನಡೆಸಿ ಬೇಸಿಗೆಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ನಿಶ್ಚಿತ ಉದ್ಯೋಗ ನೀಡುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೂಲಿ ಕಾರ್ಮಿಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿತ ಕೂಲಿ ಕೆಲಸ ಪಡೆದುಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಪ್ಪ ಏವೂರ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯ ಅಡಿ ಕೂಲಿ ಕಾರ್ಮಿಕರು ಪಡೆಯುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ, ಬೀಜ, ಗೊಬ್ಬರ ಖರೀದಿಗೆ ಬಳಸಬಹುದು. ಇದರಿಂದ ಅವರ ಕುಟುಂಬಕ್ಕೆ ನೆರವಾಗುತ್ತದೆ. ಕೃಷಿ ಚಟುವಟಿಕೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.  

ಕೂಲಿ ಕಾರ್ಮಿಕರು ಸರ್ಕಾರ ನಿಗದಿಗೊಳಿಸಿದ ಉದ್ದ ಹಾಗೂ ಅಗಲದ ಪ್ರಮಾಣದಲ್ಲಿ ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ದಿನಕ್ಕೆ 370 ರೂಪಾಯಿ ಹಾಗೂ 100 ದಿನಕ್ಕೆ 37000 ಸಾವಿರ ರೂಪಾಯಿ ತಮ್ಮ ಖಾತೆಗೆ ನೇರವಾಗಿ ಪಾವತಿಯಾಗಲಿದೆ. ಎಂದು ಹೇಳಿದರು. ಮನರೇಗಾ ಯೋಜನೆಯ ಉದ್ದೇಶ. ಕೂಲಿಕಾರರ ಹಕ್ಕುಗಳು, ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಕೆಲಸದ ಸ್ಥಳದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದ ಅವರು, ಎನ್ ಎಂ ಎಂ ಎಸ್ ಫೇಸ್ ಅಥೆಂಟಿಕೇಶನ್ ಪರೀಶೀಲಿಸಿ ಹಾಜರಾತಿ ದಾಖಲಾತಿಗಳನ್ನು ವೀಕ್ಷಿಸಿದರು. ಕೂಲಿಕಾರರಿಗೆ ಅಗತ್ಯವಾದ ಕುಡಿಯುವ ನೀರು, ನೆರಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮರ​‍್ಕವಾಗಿ ಒದಗಿಸುವಂತೆ ಪಿಡಿಓ ರವರಿಗೆ ಸೂಚನೆ ನೀಡಿದರು.

ಕಾಮಗಾರಿ ಗುಣಮಟ್ಟ ಕಾಪಾಡುವ ಜೊತೆಗೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ತಮಗೆ ನೀಡಿರುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ.ಗ್ರಾಮದಲ್ಲಿನ ಇತರ ಕೂಲಿಕಾರರು ತಮ್ಮ ಮನೆಯ ಸುತ್ತ ಮುತ್ತ ತಮ್ಮ ಸಂಬಂಧಿಕರಿಗೂ ಮನರೇಗಾ ಯೋಜನೆಯಡಿ ಉದ್ಯೋಗಾವಕಾಶ ದೊರೆಯುವ ಕುರಿತು ಜಾಗೃತಿ ಮೂಡಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ  ಶಿವು ಪೂಜಾರಿ, ಐಇಸಿ ಸಂಯೋಜಕ ರಾಮಗೌಡ ಸರಬಡಗಿ, ಖಆಂ ಅರುಣ ಅಂಕಲಗಿ,ತಾಂತ್ರಿಕ ಸಹಾಯಕರು ಬಾಬು ನಾಯಕ, ಆಇಓ  ಸಿದ್ದು  ಎಸ್ ವಾಯ ಪಾಟೀಲ,  ಟೆಕ್ನಿಷನ್ ಸೈಯದ್ , ಗ್ರಾಮ ಕಾಯಕಮಿತ್ರ ಶ್ರೀಮತಿ ಸುರೇಖಾ ರಾಠೋಡ, ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.