ಯಲ್ಲಮ್ಮದೇವಿ ಸನ್ನಿಧಿಗೆ ಶಾಸಕ ವಿಶ್ವಾಸ ವೈದ್ಯ ಭೇಟಿ ವಿಶೇಷ ಪೂಜೆ, ನಾಡಿನ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ

ಯಲ್ಲಮ್ಮದೇವಿ ಸನ್ನಿಧಿಗೆ ಶಾಸಕ ವಿಶ್ವಾಸ ವೈದ್ಯ ಭೇಟಿ ವಿಶೇಷ ಪೂಜೆ, ನಾಡಿನ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ MLA Vishwas Vaidya visits Yallammadevi, performs special puja, prays for the welfare of the people o

ಸವದತ್ತಿ 23 : ಸಮೀಪದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಜಗನ್ಮಾತೆ ಯಲ್ಲಮ್ಮದೇವಿಯ ಸನ್ನಿಧಿಗೆ ಶನಿವಾರದಂದು ಶಾಸಕ ವಿಶ್ವಾಸ ವೈದ್ಯ ಅವರು ಭೇಟಿ ನೀಡಿ, ದೇವಿಯ ಭವ್ಯ ದರ್ಶನ ಪಡೆದರು. ಬಳಿಕ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಯನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಜಗನ್ಮಾತೆ ಯಲ್ಲಮ್ಮದೇವಿಯ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಆ ತಾಯಿಯು ಸಮಸ್ತ ಜನತೆಗೆ, ವಿಶೇಷವಾಗಿ ದೇಶದ ಬೆನ್ನೆಲುಬಾದ ರೈತಬಾಂಧವರಿಗೆ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಆಯುರಾರೋಗ್ಯ ಮತ್ತು ಸಕಲ ಐಶ್ವರ್ಯಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ಇದೇ ವೇಳೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡುತ್ತಾ, ಪವಿತ್ರ ಪುಣ್ಯಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲು ಮತ್ತು ಕ್ಷೇತ್ರದ ಪ್ರಗತಿಗೆ ಆ ತಾಯಿ ಸದಾ ಕಾಲ ತನ್ನ ಆಶೀರ್ವಾದದ ಬೆಳಕನ್ನು ನೀಡಲಿ ಎಂದು ಅವರು ದೇವಿಯಲ್ಲಿ  ಬೇಡಿಕೊಂಡರು.