ನರೇಗಾ ಹಾಗೂ ಪಂ.ರಾ ಪ್ರಗತಿ ಪರೀಶೀಲನಾ ಸಭೆ
NREGA and P.R.A progress review meeting
ದೇವರ ಹಿಪ್ಪರಗಿ 15: ಪಟ್ಟಣದ ತಾಲೂಕ ಪಂಚಾಯಿತಿಯಲ್ಲಿ ಶುಕ್ರವಾರದಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಾರತಿ ಚಲುವಯ್ಯ ರವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹಾಗೂ ಪಂಚಾಯತ ರಾಜ ಇಲಾಖೆಯ ವಿವಿಧ ವಿಷಯಗಳ ಕುರಿತು ಪ್ರಗತಿ ಪರೀಶೀಲನಾ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಕೂಲಿಕಾರರಿಗೂ ಕಡ್ಡಾಯವಾಗಿ ಕೆಲಸ ಒದಗಿಸಬೇಕು ಎಂದು ಪಿಡಿಓ ರವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿಯಲ್ಲಿ ಜಿ. ಕೆ. ಎಂ. ಟಿ ಆರ್ ಎಂ, ಬಿ ಎಫ್ ಟಿ ಮನೆಮನೆಗೆ ತೆರಳಿ ನಮೂನೆ-6 ಕೆಲಸದ ಬೇಡಿಕೆ ಸ್ವೀಕರಿಸಿ, ಕೂಲಿಕಾರರಿಗೆ ಯೋಜನೆಯ ಸೌಲಭ್ಯ ತಲುಪುವಂತೆ ಕ್ರಮ ವಹಿಸಬೇಕು ಹಾಗೂ ಇದೇ ವೇಳೆ ಇ-ಕೆವೈಸಿ ಪ್ರಗತಿಯನ್ನು ಶೇ.100ಕ್ಕೆ ತಲುಪಿಸುವಂತೆ ಸೂಚಿಸಿದರು, ಗುರಿ ಸಾಧನೆಯಲ್ಲಿ ನಿರ್ಲಕ್ಷ್ಯ ತೋರಿದ ಜಿ.ಕೆ.ಎಂ, ಟಿ.ಆರ್.ಎಂ ಹಾಗೂ ಬಿ.ಎಫ್.ಟಿ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಾಕ್ಸ್ ಸಭೆಯಲ್ಲಿ ಲೇಬರ್ ಎಂಗೇಜ್ ಹೆಚ್ಚಿಸುವುದು, ಜೀರೋ ಎನ್ಎಂಆರ್ ತಡೆಗಟ್ಟುವುದು, ಮಾನವ ದಿನಗಳ ಸೃಜನೆ, ಪೇಸ್ ಅಥೆಂಟಿಕೇಶನ್ ಪ್ರಗತಿ, ಯುಕ್ತಧಾರದಲ್ಲಿ ವರ್ಕ್ ಎಂಟ್ರಿ, ಕಾಮಗಾರಿಗಳ ಪೂರ್ಣಗೊಳಿಸುವುದು ಬಾಕಿ ಕೂಲಿ ಪಾವತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸವಿಸ್ತಾರ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನರೆಗಾ ಸಹಾಯಕ ನಿರ್ದೇಶಕರಾದ ಶಾಂತಗೌಡ ನ್ಯಾಮಣ್ಣವರ, ಪಂ.ರಾ ಸಹಾಯಕ ನಿರ್ದೇಶಕರಾದ ಶಿವಾನಂದ ಮೂಲಿಮನಿ, ತಾಂತ್ರಿಕ ಸಂಯೋಜಕರಾದ ಶರಣಗೌಡ ಪಾಟೀಲ, ತಾಂತ್ರಿಕ ಸಹಾಯಕರಾದ ಸೊಹೇಬ ಮಾರಡಗಿ, ಅರ್ಷದ್ ಕೋಟ್ಯಾಳ, ಗ್ರಾಪಂ. ಪಿಡಿಓ ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಆಡಳಿತ ಸಹಾಯಕ ಪವನ ಜೋಶಿ, ತಾಪಂ. ಕಂಪ್ಯೂಟರ್ ಸಿಬ್ಬಂದಿ ಕಿರಣ ಪಾಟೀಲ್, ಕಂಪ್ಯೂಟರ್ ಆಪರೇಟರ್ಗಳು, ಜಿ.ಕೆ.ಎಂ, ಬಿ.ಎಫ್.ಟಿ, ಟಿ.ಆರ್.ಎಂ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 