ಎನ್.ಇ.ಪಿ-2020: ಕಾರ್ೋರೇಟ್ ಜಗತ್ತು ಅಪೇಕ್ಷಿತ ಕೌಶಲ್ಯಾಧಾರಿತ ಶಿಕ್ಷಣ ಪಡೆಯಲು ಸಾಧ್ಯ
NEP-2020: Corporate world can get desired skill-based education
ಲೋಕದರ್ಶನ ವರದಿ
ಎನ್.ಇ.ಪಿ-2020: ಕಾರ್ೋರೇಟ್ ಜಗತ್ತು ಅಪೇಕ್ಷಿತ ಕೌಶಲ್ಯಾಧಾರಿತ ಶಿಕ್ಷಣ ಪಡೆಯಲು ಸಾಧ್ಯ
ವಿಜಯಪುರ 04: ಎನ.ಇ.ಪಿ-2020 ವಾಣಿಜ್ಯ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಭರವಸೆಗಳನ್ನು ಹೊಂದಿದ್ದರೂ, ಪರಿಣಾಮಕಾರಿ ಅನುಷ್ಠಾನಕ್ಕೆ ಬಲವಾದ ಡಿಜಿಟಲ್ ಮೂಲಸೌಕರ್ಯ, ಶಿಕ್ಷಕರಿಗೆ ಹೆಚ್ಚಿನ ತರಬೇತಿ ಮತ್ತು ಉದ್ಯಮಗಳೊಂದಿಗೆ ಉತ್ತಮ ಸಂಪರ್ಕ ಮತ್ತು ಸಹಕಾರದ ಅಗತ್ಯತೆಯಿದೆ ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪುರ ಅವರು ಅಭಿಪ್ರಾಪಟ್ಟರು.
ಅವರು ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಮಾಢಾದ ರೈತ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ “ಹೊಸ ಶಿಕ್ಷಣ ನೀತಿ-2020 ರ ಅನುಷ್ಠಾನದಲ್ಲಿ ವಾಣಿಜ್ಯ ಶಿಕ್ಷಣದಲ್ಲಿನ ಸವಾಲುಗಳು” ವಿಷಯ ಕುರಿತಾದ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಪ್ರಥಮ ಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು.
ಇಂದಿನ ರಾಷ್ರೀಯ ಶಿಕ್ಷಣ ನೀತಿಯು ವಾಣಿಜ್ಯ ಶಿಕ್ಷಣದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಡಿಜಿಟಲ್ ವಿಭಜನೆ, ವಾಣಿಜ್ಯ ಪ್ರಯೋಗಾಲಯಗಳ ಕೊರತೆ, ಪಠ್ಯಕ್ರಮ ಮತ್ತು ಬೋಧನೆಯಲ್ಲಿನ ಬದಲಾವಣೆಗಳು, ಬಹುಶಿಸ್ತೀಯ ಕಲಿಕಾ ವಿಧಾನ, ಕೌಶಲ್ಯಾಧಾರಿತ ಕಲಿಕೆ, ಹಳೆಯ ತರಬೇತಿಯ ಕೊರತೆ, ಮೌಲ್ಯಮಾಪನ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ಅಮೂಲಾಗ್ರ ಬದಲಾವಣೆಗಳು ಮತ್ತು ಉದ್ಯಮ-ಶೈಕ್ಷಣಿಕ ಜೋಡಣೆ ಹೀಗೆ ಹತ್ತು ಹಲವಾರು ಸವಾಲುಗಳನ್ನು ಎದಿರುಸುತ್ತಿದೆ. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಪಾಲಕರು-ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಶಿಕ್ಷಣ ನೀತಿಯನ್ನು ಯಶಸ್ವಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಂಕಣಬದ್ಧರಾಗಿ ನಿಲ್ಲಬೇಕಾಗಿದೆ ಎಂದರು.
ಇವೆಲ್ಲ ಸವಾಲುಗಳನ್ನು ಮಧ್ಯೆಯು ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ಮುಕ್ತವಾಗಿ ವಿಷಯಗಳ ಆಯ್ಕೆ ಮಾಡಿಕೊಳ್ಳುವದರ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ, ಪ್ರಾಯೋಗಿಕತೆ, ಕೌಶಲ್ಯಗಳ ಅಳವಡಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾ-ತಾರ್ತಿಕ ಶಕ್ತಿಯನ್ನು ಬೆಳೆಸುವಲ್ಲಿ ಹೆಚ್ಚಿನ ಒಲವು ನೀಡಿದೆ. ಕಾರ್ೋರೇಟ್ ಅಪೇಕ್ಷಿತ ಮಟ್ಟದ ಜ್ಞಾನ ಪಡೆಯಲು ಮತ್ತು ಉದ್ಯೋಗಾವಕಾಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತಾ, ಬಾರತದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಶಿಕ್ಷಣವನ್ನು ಉನ್ನತಿಕರಿಸಿದೆ ಎಂದು ಹೇಳಿದರು.
ವಿಚಾರ ಸಂಕೀರಣದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ. ಸದಾಶಿವ ಕದಂ, ದಹಿವಡಿ ಕಾಲೇಜಿನ ಪ್ರಾಚಾರ್ಯ ಡಾ. ಸುನೀಲ ಹೋಳ್ಕರ, ಕಾಲೇಜಿನ ಪ್ರಾಂಶುಪಾಲ ಡಾ. ಘನಶ್ಯಾಮ ಹರಳೆ, ವಿಚಾರಸಂಕೀರಣದ ಸಂಚಾಲಕ ಡಾ. ಅಶೋಕ ಲೊಂಡೆ ,ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಮದೇವ ಮಾನೆ ಇನ್ನಿತರು ಸಹ ವೇದಿಕೆಯ ಮೇಲಿದ್ದರು.
ದೇಶದ ಸುಮಾರು 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 