ನವದೆಹಲಿ, ಜುಲೈ 4: ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಅಖಿಲ ಭಾರತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶ ಪರೀಕ್ಷೆ(ನೀಟ್ ಮತ್ತು ಜೆಇಇ) ಅನ್ನು ಸೆಪ್ಟೆಂಬರ್ಗೆ ಮುಂದೂಡಿದೆ.
"ವಿದ್ಯಾರ್ಥಿಗಳ ಸುರಕ್ಷತೆಯನ್ನು ಪರಿಗಣಿಸಿ ಜೆಇಇ, ನೀಟ್ ಹಾಗೂ ಜೆಇಇ ಅಡ್ವಾನ್ಸ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಶುಕ್ರವಾರ ತಿಳಿಸಿದ್ದಾರೆ.
ಜೆಇಇ-ಮುಖ್ಯ ಪರೀಕ್ಷೆ ಸೆಪ್ಟೆಂಬರ್ ೧-೬ರ ನಡುವೆ ನಡೆಯಲಿದ್ದು, ನೀಟ್ ಪರೀಕ್ಷೆ ಸೆಪ್ಟೆಂಬರ್ ೧೩ ರಂದು ನಡೆಯಲಿದೆ. ಜೆಇಇ-ಅಡ್ವಾನ್ಸ್ ಪರೀಕ್ಷೆ ಸೆಪ್ಟೆಂಬರ್ ೨೭ ರಂದು ನಡೆಯಲಿದೆ ಎಂದು ಸಚಿವರು ಪ್ರಕಟಿಸಿದ್ದಾರೆ.
ಈ ಮೊದಲು ನೀಟ್ ಪರೀಕ್ಷೆಯನ್ನು ಜುಲೈ ೨೬ ಹಾಗೂ ಜೆಇಇ ಪರೀಕ್ಷೆಗಳು ಜುಲೈ ೧೮ ರಿಂದ ೨೩ ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು.