ಎನ್‌ಸಿಸಿ ಕೆಡೆಟ್ ಓಂಕಾರ ಲೋಗಾವಿ ರಾಷ್ಟ್ರೀಯ ಸೈನಿಕ ಶಿಬಿರಕ್ಕೆ ಆಯ್ಕೆ
NCC Cadet Omkara Logavi selected for National Soldier Camp
ಬೆಳಗಾವಿ 01: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಪದವಿ ಮಹಾವಿದ್ಯಾಲಯದ ಬಿಎ ಎನ್‌ಸಿಸಿ ಕೆಡೆಟ್ ಓಂಕಾರ ಪ್ರಕಾಶ ಲೋಗಾವಿ ಕರ್ನಾಟಕ ಹಾಗೂ ಗೋವಾ ಡೈರಕ್ಟೋರೆಟ್ ಘಟಕದಿಂದ ದಿನಾಂಕ 1 ಸೆಪ್ಟೆಂಬರ್‌ದಿಂದ 10ರವರೆಗೆ ದೆಹಲಿಯಲ್ಲಿ ಜರುಗಲಿರುವ ರಾಷ್ಟ್ರೀಯ ಸೈನಿಕ ಶಿಬಿರಕ್ಕೆ ಆಯ್ಕೆಯಾಗಿದ್ದಾನೆ. ಮೈಸೂರಿನಲ್ಲಿ ಜರುಗಿದ ನಿರ್ಣಾಯಕ ಅಂತಿಮ ಸುತ್ತಿನ ಸೈನಿಕ ಶಿಬಿರದಲಿ ಓಂಕಾರ ಪ್ರಕಾಶ ಲೋಗಾವಿ ಆಯ್ಕೆಯಾಗಿದ್ದಾನೆ.
ಕೆಡೆಟ್ ಓಂಕಾರ ಪ್ರಕಾಶ ಲೋಗಾವಿಗೆ ಬೆಳಗಾವಿಯ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನೀಲ್ ದಾಗರ, ಲೆಫ್ಟನಂಟ್ ಕರ್ನಲ್ ಸಿದ್ಧಾರ್ಥ ರೇಡೂ ಲಿಂಗರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ, ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ ತರಬೇತಿ ನೀಡಿದ್ದರು. ಈತನ ಸಾಧನೆಗೆ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಪ್ರಾಚಾರ್ಯರಾದ ಡಾ.ಎಚ್.ಎಸ್.ಮೇಲಿನಮನಿ, 26 ಕರ್ನಾಟಕ ಬಟಾಲಿಯನ್ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 