ಪುರಾಣ ಕಾವ್ಯಗಳು ನಮ್ಮನ್ನು ಬಂಧಿಸಿವೆ: ವಿನಯಾ ವಕ್ಕುಂದ

ಲೋಕದರ್ಶನ ವರದಿ

ಬೆಳಗಾವಿ,29:  ಮಹಿಳಾ ಅಸ್ಮಿತೆಯನ್ನುವುದು ಪುರುಷ ಕೇಂದ್ರಿತ ಚಹರಗಳ ಅಡಿಯಲ್ಲಿ ಸಿಕ್ಕಿಕೊಂಡಿದೆ. ಅದನ್ನು ನಿರಾಕರಿಸುವ ಕಾಲ ಇದಾಗಿದೆ.

ಮಾತು ನಮ್ಮ ಅಸ್ಮಿತೆಯೆಂದು ತಿಳಿದ ಕಾಲವಿತ್ತು ಈಗ್  ಮಾತಿನ ಆಳದಲ್ಲಿ ಜಗತ್ತು ಕಳೆದುಹೋಗುತ್ತಿದೆ. ನಾವು ಈಗ ಮಾತಿನ ಬರಾಟೆ ಕಾಲದಲ್ಲಿದ್ದೆವೆ ಎಂದು ಧಾರವಾಡದ ಕವಯಿತ್ರಿ ವಿನಯಾ ವಕ್ಕುಂದ ಹೇಳಿದರು.

ಸ್ಥಳೀಯ ಬಸವರಾಜ ಕಟ್ಟೀಮನಿ ಸಬಾಭವನದಲ್ಲಿ ಸೋಮವಾರ 10 ರಂದು   ಜಿಲ್ಲಾ ಲೇಖಕಿಯರ ಸಂಘ ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ  ನವದೆಹಲಿ ಮತ್ತು  ನಾರಿ ಚೇತನ ಎಂಬ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಅಸ್ಮಿತೆಯನ್ನುವುದು ಮಹಿಳೆಯ ಹೋರಾಟದ ಅಸ್ಮಿತೆಯಾಗಿ ನಾವು ನೋಡಬೇಕಿದೆ. ಗಂಡು ಹೆಣ್ಣನ್ನು ಆಜ್ಞೆ ಅಧಿಕಾರ, ಬೇಕಾದಾಗ ಕರೆದು ಬೇಡವಾದಾಗ ನುಕುವ ಚಾಳಿ ಪಡೆದಿದ್ದಾನೆ. 

ಪುರಾಣ ಕಾವ್ಯಗಳು ನಮ್ಮನ್ನು ಬಂಧಿಸಿವೆ.

ಲಕ್ಷ್ಮಣರೇಖೆ ಮಹಿಳೆಯನ್ನು ನಿಯಂತ್ರಿಸಿದೆ. ಆದರೆ, ಹೆಣ್ಣಿನ ಸ್ವಯಂ ಚೆಲುವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಮ್ಮ ಚರಿತ್ರೆ ಅವನ ಕಥೆಯಾಗದೆ ಅವಳ ಕಥೆಯಾಗಬೇಕಿದೆ.

ಪಿತೃತ್ವದ ಆಳ್ವಿಕೆಯನ್ನು ನಾವು ಒಪ್ಪಿಕೊಂಡಿದ್ದೆವೆ. ಹೆಣ್ಣಿನ ಶ್ರಮ ಸಂಗೋಪನ ಕಾರಣಕ್ಕಾಗಿ ಇಡಲಾಗಿದೆ. ನೌಕರಿ ನನ್ನ ಅಸ್ಮಿತೆಯಾಗಿದೆ ಅದು ಹೆಣ್ಣಿಗೆ

ಸ್ವಾತಂತ್ರ್ಯವನ್ನು ಕೊಡುತ್ತದೆ. 

ನಾವು ಏಕಕಾಲದಲ್ಲಿ ಹಲವು ರೂಪದಲ್ಲಿ ಬದುಕುತ್ತಿದ್ದೆವೆ. ಮನೆಗ ಬಂದಾಗ ತಾಯಿಯಾಗಬೇಕು, ಶಾಲೆಯಲ್ಲಿ ಶಿಕ್ಷಕಿ ಇತ್ಯಾದಿ. ಮಹಿಳೆಯ ಅಸ್ಮಿತೆ ಇಂದು ಹರಿದು ಹಂಚಿ ಹೋಗಿದೆ. ನೀನು ಎಂದರೆ ದೇಹ ಎಂದು ಮರು ವ್ಯಾಖ್ಯಾನ ಮಾಡಲಾಗುತ್ತಿದೆ. 

ಜಾಹಿರಾತು ಮತ್ತು ಸಿನೆಮಾ ಮಹಿಳೆಯ ದೇಹವನ್ನು ಗುರಿಯಾಗಿ ಇಟ್ಟುಕೊಂಡಿದೆ. ಗಂಡಾಳಿಕೆಯ ನಿಬರ್ಂಧಗಳು ನಮ್ಮ ಮನಸ್ಸಿಗೆ ತಾಟುತ್ತಿವೆ. ಹೆಣ್ಣನ್ನು ದೇಹ ಬದ್ಧವಾಗಿ ನೋಡುವ ಅಗತ್ಯವಿಲ್ಲ ಹೆಣ್ಣು ಎಂದರೆ ದೇಹವಲ್ಲ ಹೆಣ್ಣು ಸಂವೇದನೆ ಎನ್ನುವುದು ಒಂದು ಆಲೋಚನಾ ವಿಧಾನ ಬಂಡವಾಳ ಶಾಹಿವಾದ ದಿಕ್ಕು ತಪ್ಪಿಸುವ ಕಾಲಘಟ್ಟವಿದು. ಹೆಣ್ಣಿನ ಸಬಲಿಕರಣ ಬೇಕಿಲ್ಲ ಹೆಣ್ಣು ಸ್ವತಃ ಸಬಲಳಾಗಿದ್ದಾಳೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನಾಲ್ಕು ಜನ ಮಹಿಳೆಯರು ಕಾವ್ಯವನ್ನು ಓದಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ,   ಕೇಂದ್ರ ಸಾಹಿತ್ಯ ಅಕಾಡೆಮಿ ಜನಮುಖಿಯಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಯುವ ಸಾಹಿತಿ, ಗ್ರಾಮ ಲೋಕ, ನಾರಿ ಚೇತನ ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು 

ಅಧ್ಯಕ್ಷತೆಯನ್ನು ವಹಿಸಿದ ಜ್ಯೊತಿ ಬದಾಮಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯವನ್ನು ಕೊಂಡಾಡಿದರು. ಮತ್ತು ಇಂತ ಕಾರ್ಯಕ್ರಮಗಳ ಔಚಿತ್ಯ ದೊಡ್ಡದು. ಇಂತಹ ಒಂದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಡಾ.ನಿಮರ್ಾಲಾ ಬಟ್ಟಲ, ರಾಜೇಶ್ವರಿ ಹಿರೇಮಠ ಪ್ರಾರ್ಥನಾ ಗೀತೆ ಹಾಡಿದರು, ಸೈಲಜಾ ಕುಲಕಣರ್ಿ,  ಮಿನಾಕ್ಷೀ ಮಿಶ್ರಿಕೋಟೆ, ಪ್ರಿಯಾ ಪುರಾಣಿಕ, ಯಮುನಾ ಕಂಬಾರ ಹಾಗೂ ಉಪಸ್ಥಿತರಿದ್ದರು.  ಆಶಾ ಯಮಕನಮರಡಿ ನಿರೂಪಿಸಿದರು. ರಾಜನಂದಾ ಘಾರಗೆ ವಂದಿಸಿದರು.