ನಮ್ಮ ಪರಂಪರೆಗಾಗಿ ಪೌರಾಣಿಕ ನಾಟಕ ಪ್ರದರ್ಶನ ಅಗತ್ಯ: ಶಾನಭೋಗರ ರಾಘಣ್ಣ
Mythological drama performances are necessary for our heritage: Shanabhogara Raghanna
ಗಂಗಾವತಿ 07: ಹೈಟೆಕ್ ಕಲಾ ಪ್ರದರ್ಶನಗಳ ನಡುವೆ ನಮ್ಮ ಪರಂಪಾರಿಕ ಕಲೆಗಳು ಮೂಲೆಗುಂಪು ಸೇರುತ್ತಿದ್ದು, ಗ್ರಾಮೀಣ ಪ್ರದೇಶದ ಕಲಾಭಿಮಾನಿಗಳ ಆಸಕ್ತಿಯಿಂದಾಗಿ ಇನ್ನು ಪೌರಾಣಿಕ ಕಲೆಗಳು ಜೀವಂತ ಉಳಿದಿದ್ದು, ಕಾಪಾಡಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಶಾನಭೋಗರ ರಾಘಣ್ಣಸ್ವಾಮಿ ಹೇಳಿದರು. ಅವರು ಸಂಡೂರು ತಾ.ಗೆಣತಿ ಕಟ್ಟೆ ಮಾರುತೇಶ್ವರ ಜೋಡು ರಥೋತ್ಸವದ ಅಂಗವಾಗಿ ಸೂಲದಹಳ್ಳಿಯ ಕಂದಗಲ್ಲು ಹನುಮಂತರಾಯ ಕಲಾ ಬಳಗದ ನಾಡಿನ ಹೆಸರಾಂತ ಕಲಾವಿದರು ಅದ್ಭುತವಾಗಿ ಪ್ರದರ್ಶಿಸಿದ ರಕ್ತರಾತ್ರಿ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಡಿಟಿಒ ನಿವೃತ್ತ ಅಧಿಕಾರಿ ವಿ.ಅಂಜಿನಪ್ಪ, ಚಿನ್ನಪ್ಪಬಿ. ಮುದ್ದಪ್ಪ, ವಿ.ರಾಮಾಂಜಿನಿ, ಬಿ.ಹಂಪಣ್ಣ, ಸಿ.ಹೆಚ್.ಉಮೇಶ್, ಎ.ಕೆ.ದುರುಗೇಶ್ ಹಾಗು ಎ.ಕೆ.ಎರಿ್ರಸ್ವಾಮಿ ಇದ್ದರು.
ನಂತರ ನಾಡಿನ ಹಸರಾಂತ ನುರಿತ ಕಲಾವಿದರಿಂದ ರಕ್ತರಾತ್ರಿ ಅಮೋಘ ಪ್ರದರ್ಶನಗೊಂಡಿತು. ದುರ್ಯೋಧನ ಪಾತ್ರದಲ್ಲಿ ಟಿ.ನಾಗರಾಜ್ ಹಿರೇಕುಂಬಳಗುಂಟೆ, ಕೃಷ್ಣ ಪಾತ್ರದಲ್ಲಿ ಚಿದಾನಂದಪ್ಪರಾರಾವಿ, ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ನಾಗರಾಜ್ ಇಂಗಳಗಿ (ಶಕುನಿ), ಪಾರ್ವತೀಶ್ ಕುರುಗೋಡು (ನವಲಿಪಕ್ಕ), ಭೀಮಣ್ಣಕಂದಗಲ್ಲು (ಭೀಮ), ಎಂ.ಜಿ.ಶಿವಕುಮಾರ್ ಮಲೆಮಾಚಿಕೆರೆ, ಎಸ್.ಹೆಚ್.ಸಘಿವುಲ್ಲಾ ಹಿರೇಕುಂಬಳಗುಂಟೆ (ಕರ್ಣ, ಗಂಧರ್ವ), ನಾಗನಗೌಡ ಬೆಣ್ಣೆಹಳ್ಳಿ (ಧರ್ಮರಾಯ), ಕನಕಪ್ಪಇಂದರಗಿ (ಶಂಕದತ್ತ), ಬಸವರಾಜ್ ಸ್ವಾಮಿ ಜವಳಗೇರಾ (ಕಲಿ ಹಾಗು ಗಂಧರ್ವ) ವೀಣಾಆದೋನಿ (ದ್ರೌಪದಿ), ಬಿ.ಜಯಶ್ರೀ ಪಾಟೀಲ್ (ಉತ್ತರೆ), ದುರುಗಮ್ಮ ಕೂಡ್ಲಿಗಿ (ಭಾನುಮತಿ), ಸಾವಿತ್ರಿ ದಾವಣಗೆರೆ (ಮದಹಂಸಿ), ಪಾತ್ರ ನಿರ್ವಹಿಸಿದರು. ವಿನಾಯಕ ಡ್ರಾಮ ಸೀನ್ಸ್ ಮುಂಡರಗಿಇವರ ಭವ್ಯರಂಗ ಸಜ್ಜಿಕೆಯಲ್ಲಿ, ಮುರಳಿ ಚಳ್ಳಿಕೇರೆ ಇವರ ಪ್ರಸಾದನದೊಂದಿಗೆ ಕಲಾವಿದರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 