ರಟ್ಟಿನಿಂದ ಅರಳಿದ ಮೈಸೂರ ಅರಮನೆ, ಗೊಂಬೆ ಪೂಜೆ ಆಚರಣೆ
Mysore Palace blossoms from cardboard, Gombe Puja celebrations
ಧಾರವಾಡ, 22 : ದಸರಾ ಅಥವಾ ವಿಜಯದಶಮಿ ಎಂದರೆ ದುಷ್ಟರ ಮೇಲೆ ಒಳ್ಳೆಯವರ ವಿಜಯ ಧರ್ಮದ ಮೇಲೆ ಆದರ್ಮದ ಮೇಲೆ ಧರ್ಮದ ವಿಜಯ ಮತ್ತು ಪಾಪದ ಮೇಲೆ ಪುಣ್ಯದ ವಿಜಯವನ್ನು ಸೂಚಿಸುವ ಹಬ್ಬವಾಗಿದೆ ಈ ದಿನ ದುರ್ಗಾದೇವಿಯು ಮೈಸಾಸುರನ ಸಮ್ಮರಿಸಿದ ವಿಜಯವನ್ನು ಮತ್ತು ಶ್ರೀ ರಾಮನು ರಾವಣನನ್ನು ಗೆದ್ದ ವಿಜಯವನ್ನು ಆಚರಿಸಲಾಗುತ್ತದೆ ಇದು ನವರಾತ್ರಿಯ ಮತ್ತು ದುರ್ಗಾ ಪೂಜೆಯ ಕೊನೆಯ ದಿನವೂ ದಸರಾ ಹಬ್ಬವನ್ನು ಭಾರತದಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ ಇದನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ ವಿಜಯ ಎಂದರೆ ಗೆಲವು ಮತ್ತು ದಶಮಿ ಎಂದರೆ ಹಬ್ಬವು ಹಾಸ್ಪಿಜ ಮಾಸದ ಶುಕ್ಲ ಪಕ್ಷದ ದಶಮಿ ಎಂದು ಬರುವುದರಿಂದ ಈ ಹೆಸರು ಬಂದಿದೆ ನಮ್ಮ ಶಾಲೆಯಲ್ಲಿಯೂ ಈ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ನಮ್ಮ ಶಾಲೆಯ ಸಭಾಂಗಣದಲ್ಲಿ ಹರೀಶ್ ಗುರೂಜಿ ಅವರು ಗೊಂಬೆ ಪೂಜೆ ಮಾಡಿ ಅದರ ಮಹತ್ವವನ್ನು ಮಕ್ಕಳಿಗೆ ಹೇಳಿದರು ಶ್ರೀಮತಿ ಚಂದ್ರಕಲಾ ಮಾತಾಜಿಯವರು ಶ್ರೀರಾಮನು ರಾವಣನನ್ನು ಸಮ್ಮರಿಸಿದ ದಿನವು ಇದೆ ಅದೇ ರೀತಿ ಮಹಿಷಾಸುರನನ್ನು ದುರ್ಗಾದೇವಿಯನ್ನು ಸಮ್ಮರಿಸಿದ ದಿನವನ್ನಾಗಿ ಈ ದಿನವನ್ನು ಆಚರಿಸಲಾಗುತ್ತದೆ ಹೀಗಾಗಿ ದಸರ ಹಬ್ಬವು ಸತ್ಯ ಧೈರ್ಯ ಮತ್ತು ಸದ್ಗುಣಗಳ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ಹಬ್ಬದ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೃತ್ಯದ ಮೂಲಕ ಹಬ್ಬದ ಮಹತ್ವವನ್ನು ತೋರಿಸಿದರು ಭಕ್ತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಪ್ರಾರ್ಥನೆಗಳೊಂದಿಗೆ ಅಂತ್ಯಗೊಂಡಿತು ಕಾರ್ಯಕ್ರಮದಲ್ಲಿ ಹಾಸನದ ರಾಷ್ಟ್ರೋತ್ಥಾನ ವಿದ್ಯಾ ಶಾಲೆಯಲ್ಲಿ ವಿದ್ಯಾ ಕೇಂದ್ರದ ಶಾಲೆಯ ಪ್ರಧಾನಚಾರ್ಯರಾದ ಉಮಾ ಎಸ್ ಪಾಟೀಲ್ ಮಾತಾಜಿ, ಅದೇ ರೀತಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಸವರಾಜ್ ಸಿ,ಎಸ್ ಅವರು ಮೈಸೂರು ಅರಮನೆಯನ್ನು ರಟ್ಟಿನಿಂದ ನಿರ್ಮಿಸಿ ಹಾಗೂ ದುರ್ಗಾದೇವಿ ಭಾವಚಿತ್ರ ರಚಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಮತ್ತು ಶಾಲೆಯ ಗುರೂಜಿ , ಮಾತಾಜಿ, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 