ಮೈಸೂರ್ ದಸರಾ ಮಹೋತ್ಸವ 2025 ಅದ್ಭುತ ತಬಲಾ ವಾದನ ಕಾರ್ಯಕ್ರಮ
Mysore Dasara Festival 2025 Amazing Tabla Performance
ಲೋಕದರ್ಶನ ವರದಿ
ಮೈಸೂರ್ ದಸರಾ ಮಹೋತ್ಸವ 2025 ಅದ್ಭುತ ತಬಲಾ ವಾದನ ಕಾರ್ಯಕ್ರಮ
ಹುಬ್ಬಳ್ಳಿ 05: ವಿಶ್ವ ವಿಖ್ಯಾತ ಮೈಸೂರ್ ದಸರಾ ಮಹೋತ್ಸವ 2025 ರಂದು ಜಗನ್ಮೋಹನ ಅರಮನೆ ವೇದಿಕೆಯಲ್ಲಿ ಆಯೋಜಿಸಿದ್ದ ಸಪ್ತ ತಬಲಾ ವಾದನ ಕಾರ್ಯಕ್ರಮದಲ್ಲಿ ನಿನಾದ ತಬಲಾ ವಿದ್ಯಾಲಯದ ಗುರುಗಳಾದ ವೀರೇಶ ಅಕ್ಕಿ, ಹಾಗೂ ವಿದ್ಯಾರ್ಥಿಗಳಾದ ಶರಣು ಭಜಂತ್ರಿ, ಪಾರ್ಥ ಚಟಪಲ್ಲಿ, ರಾಘವೇಂದ್ರ ಕಲಬುರ್ಗಿ, ಅದ್ವೈತ ಕುಲಕರ್ಣಿ, ಅಚ್ಯುತ್ ಕದಂ, ನರೇಶ್ ಇಲ್ಲೂರು ಅವರು ಭಾಗವಹಿಸಿ ಅದ್ಭುತ ತಬಲಾ ವಾದನ ಕಾರ್ಯಕ್ರಮ ನೀಡಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯಾದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸಂತಸ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶುಭ ಕೋರಿದ್ದಾರೆ. ದುರ್ಗೇಶ್ ನಿಲೋಗಲ್ ವಯೋಲಿನ, ಪ್ರಮೋದ್ ಹೆಬ್ಬಳ್ಳಿ ಹಾರ್ಮೋನಿಯಂ ಸಾಥ್ ನೀಡಿದ್ದರು. ಕಲಾವಿದರಿಗೆ ಮೈಸೂರ ದಸರಾ ಮಹೋತ್ಸವದ ಮುಖ್ಯ ಕಾರ್ಯ ನಿರ್ವಹನಾಧಿಕಾರಿಗಳಾದ ಎಸ್. ಯುಕೇಶ್ ಕುಮಾರ್ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 