ಸರಕಾರಿ ಶಾಲೆಗಳ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರ ಪರಸ್ಪರ ಸಮಾಲೋಚನೆ ಅಗತ್ಯ
Mutual consultation between teachers and parents is necessary for the progress of government schools
ಸರಕಾರಿ ಶಾಲೆಗಳ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರ ಪರಸ್ಪರ ಸಮಾಲೋಚನೆ ಅಗತ್ಯ
ರಾಣೇಬೆನ್ನೂರು 10: ಇಂದಿನ ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು, ತಮ್ಮ ವೈಜ್ಞಾನಿಕ ಮತ್ತು ದೂರ ದೃಷ್ಟಿಯ ಶಿಕ್ಷಣ ದೊರಕಿಸುವಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಝೆಡ್.ಎಂ. ಖಾಜಿ ಕರೆ ನೀಡಿದರು. ಅವರು, ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಸರ್ವತಿ ಸಂಸ್ಥೆ ಹಾಗೂ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಆಯೋಜಿಸಿದ್ದ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರಿ್ಡಸಲಾಗಿದ್ದ, ಶೈಕ್ಷಣಿಕ ಪ್ರಗತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
2025 ನೇ ಸಾಲಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿದೆಯಾದರೂ, ಭವಿಷ್ಯದ 2026ನೇ ಸಾಲಿನಲ್ಲಿ ಇನ್ನಷ್ಟು ಉತ್ತಮ ಫಲಿತಾಂಶವನ್ನು ಗಳಿಸುವುದರ ಮೂಲಕ ಎಸ್ ಎಸ್ ಎಲ್ ಸಿ ಫಲಿತಾಂಶ ರಾಜ್ಯದಲ್ಲಿಯೇ ಪ್ರಥಮ ಪ್ರಗತಿ ಸಾಧಿಸುವ ಗುರಿ ಇಟ್ಟುಕೊಳ್ಳಬೇಕು ಎಂದರು. ಸರಕಾರಿ ಶಾಲೆಗಳ ಪ್ರಗತಿ ಮತ್ತು ಮಕ್ಕಳ ದಾಖಲಾತಿ ಗಣನೀಯವಾಗಿ ಬೆಳೆಯಬೇಕಾದರೆ ಮುಖ್ಯೋಪಾಧ್ಯಾಯರು, ಪ್ರತಿಭಾವಂತ ಮಕ್ಕಳ ಮತ್ತು ಸಾಮಾನ್ಯ ಮಕ್ಕಳ ಪಾಲಕರ ಜೊತೆಗೆ ಪರಸ್ಪರ ಸಮಾಲೋಚಿಸುವುದರ ಮೂಲಕ, ಅವರ ಶೈಕ್ಷಣಿಕ ಪ್ರಗತಿ ಪರಿಪೂರ್ಣತೆಗೆ ಗಮನಹರಿಸಲು ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು ನಗರವು ಸೇರಿದಂತೆ ತಾಲೂಕಿನಲ್ಲಿ ಶಿಕ್ಷಣ ಪ್ರಗತಿಗಾಗಿ, ಮೇಲಿಂದ ಮೇಲೆ ತರಬೇತಿ ಕಾರ್ಯಗಾರಗಳು ಆಯೋಜಿಸುತ್ತ ಬರಲಾಗಿದೆ. ರಜೆ ಮುಕ್ತಾಯದ ಹಂತಾ ತಲುಪಿದ್ದೇವೆ ಇಂದಿನಿಂದಲೇ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದರು. ಶ್ರೀಮತಿ ಸುಜಾತಾ ಸಂಗಡಿಗರು ಪ್ರಾರ್ಥಿಸಿದರು ಸಮನ್ವಯಾಧಿಕಾರಿ ಮಂಜುನಾಯಕ, ಸ್ವಾಗತಿಸಿ, ಎಂ.ಎಂ. ಮಾಗನೂರು ನಿರೂಪಿಸಿ ಡಯಟ್ ಉಪನ್ಯಾಸಕ ಮಹಾಂತೇಶ್ ಡಿ. ಎನ್, ವಂದಿಸಿದರು. ವೇದಿಕೆಯಲ್ಲಿ ಇಲಾಖೆ ಸಿಬ್ಬಂದಿ, ಶಿಕ್ಷಕ ಸಮುದಾಯಗಳ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 