ಗೋವುಗಳನ್ನು ರಕ್ಷಿಸಿದ್ದ ಶ್ರೀರಾಮ ಸೇನೆ ಕಾರ್ಯಕತ್ರರನ್ನು ಥಳಿಸಿದ ಮುಸ್ಲಿಂ ಯುವಕರು,
Muslim youths beat up Sri Ram Sene workers who were protecting cows.
.jpg)
ಯಮಕನಮರಡಿ ಪೋಲಿಸ ಠಾಣೆಯ ವ್ಯಾಪ್ತಿಯ ಇಂಗಳಿ ಗ್ರಾಮದಲ್ಲಿನ ಘಟನೆ,
ಉಳ್ಳಾಗಡ್ಡಿ-ಖಾನಾಪೂರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವನ್ನು ಹುಕ್ಕೇರಿ ತಾಲೂಕಿನ ಬೆಳವಿಯಲ್ಲಿರುವ ಗೋಶಾಲೆಗೆ ಪೋಲಿಸರ ಸಹಾಯದಿಂದ ಕಳುಹಿಸಿದ್ದರು ನಂತರ ಗೋಶಾಲೆಯಿಂದ ಗೋವನ್ನು ಮತ್ತೆ ಸಾಕುವುದಾಗಿ ತೆಗೆದುಕೊಂಡು ಹೊಗುತ್ತಿದ್ದವರನ್ನು ಶ್ರೀರಾಮ ಸೇನೆಯ ಕಾರ್ಯಕರ್ತರು ಬೆನ್ನೆಟ್ಟಿ ಈ ಗೋವನ್ನು ಎಲ್ಲಿ ತೆಗೆದುಕೊಂಡು ಹೊಗುತ್ತಿದ್ದಾರೆ ನೋಡಬೇಕೆಂದು ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮಕ್ಕೆ ಹೊದಾಗ ಅಲ್ಲಿದ್ದ ಕೆಲಯುವಕರು ಹಾಗೂ ಮಹಿಳೆಯರು ಸೇರಿ ಇದನ್ನೆಲ್ಲಾ ಪ್ರಶ್ನಿಸಲು ನಿವ್ಯಾರು ಎಂದು ತೆಂಗಿನ ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ ಅಮಾನವಿಯ ಘಟನೆ ಹುಕ್ಕೇರಿ ಶನಿವಾರ ದಿ,28 ರಂದು ತಾಲೂಕಿನ ಯಮಕನಮರಡಿ ಪೋಲಿಸ ಠಾಣೆಯ ವ್ಯಾಪ್ತಿಯ ಇಂಗಳಿ ಗ್ರಾಮದಲ್ಲಿ ನಡೆದಿದ್ದು ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗೋರಕ್ಷಿಸುತ್ತಿರುವ ಯುವಕರ ಮೇಲೆ ಹಲ್ಲೆ:-ಸಾಮಾಜಿಕ ಜಾಲ ತಾನದಲ್ಲೆ ಈ ಥಳಿತದ ವಿಡಿಯೋ ಹರಡುತ್ತಿದಂತೆಯೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಸ್ವಯಂ ಕಾನೂನಿನಡಿಯಲ್ಲಿ ಪೋಲಿಸರು ಈ ಘಟನೆಯಲ್ಲಿ ಹಿಂದೂ ಕಾರ್ಯಕತ್ರರನ್ನು ಥಳಿಸಿದವರ ವಿರುದ್ದ ಪ್ರಕರಣ ದಾಖಲಿಸುವಂತೆ ಶ್ರೀರಾಮ ಸೇನೆಯ ಮುಖಂಡ ವಿಠ್ಠಲ ಗಡ್ಡಿ ಪೋಲಿಸರ ಕ್ರಮವನ್ನು ಖಂಡಿಸಿದ್ದಾರೆ ಈ ವಲಯದಲ್ಲಿ ಈ ಘಟನೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬೈಗುಳದ ಸದ್ದು:-ಒಂದೆಡೆ ತಳಿಸುವ ದೃಶ್ಯಗಳು ವೈರಲ್ ಆಗಿದ್ದರೆ ಮತ್ತೊಂದೆಡೆ ಬೈಗುಳಗಳು ಸದ್ದು ಕೂಡಾ ವೈರಲ್ ಆಗಿದೆ, ಈ ಹಿನ್ನೆಲೆ ಯಮಕನಮರಡಿ ಪೋಲಿಸ ಠಾಣೆಯ ಅಧಿಕಾರಿಗಳು ಈ ಪ್ರಕರಣವನ್ನು ಹೇಗೆ ಬೇಧಿಸುತ್ತಾರೆ ಎಂದು ಕಾದು ನೊಡಬೇಕಷ್ಟೆ,
ವೈರಲ್ ಆದ ವಿಡಿಯೋ ವಿಕ್ಷೀಸಿದ ಪೋಲಿಸರು ಸ್ವಯಂ ಪ್ರಕರಣ ದಾಖಲಿಸಬೇಕೆಂಬುದು ಶ್ರೀರಾಮ ಸೇನೆಯ ಅನಿಸಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಿದ್ದಲ್ಲಿ ರಾಜ್ಯಾದ್ಯಂತ ಶ್ರೀರಾಮ ಸೇನೆಯ ಕಾರ್ಯಕರ್ತರು ಯಮಕನಮರಡಿ ಠಾಣೆಗೆ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ.
ಆದರೆ ವಿಡಿಯೋ ವೈರಲ್ ನಂತರ ಈ ಪ್ರಕರಣ ಮತ್ತಷ್ಟು ಹೊಸ ತಿರುವು ಪಡೆದಿದೆ ಸಂಜೆಯ ವರೆಗೂ ಈ ಘಟನೆಯ ಹಿನ್ನೆಲೆಯಲ್ಲಿ ಯಮಕನಮರಡಿ ಪೋಲಿಸರು ಯಾವುದೇ ಪ್ರಕರಣ ದಾಖಲಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 