ಬ್ಯಾಡಗಿ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಬ್ಯಾಡಗಿ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು Muslim brothers and sisters offered Ramadan prayers at the Byadgi Eidgah Ground

ಬ್ಯಾಡಗಿ 21: ‘ಈದ್ ಉಲ್ ಫಿತ್ರ್‌ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಅದು ಶಿಸ್ತು, ಸಂಯಮ, ತ್ಯಾಗ ಮತ್ತು ಮಾನವೀಯತೆ ನೆಲಗಟ್ಟಿನಲ್ಲಿ ಆಚರಿಸಲ್ಪಡುತ್ತದೆ. ಏಕತೆ ಮತ್ತು ಸಹೋದರತೆ ಸಾರುತ್ತದೆ. ಹಸಿವಿನಿಂದ ಯಾರು ಹಬ್ಬದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ತಿಂಗಳ ಕಾಲ ಆಹಾರ ನಿರ್ಭಂದಿಸಿ ಕಠಿಣ ರಂಜಾನ್ ಉಪವಾಸ ಕೈಗೊಳ್ಳುವರು. ಹಬ್ಬದ ಸಮಾರೋಪವೇ ಮುಸ್ಲಿಮರಿಗೆ ಮುಖ್ಯ ಘಟ್ಟವಾಗಿದ್ದು, ರಂಜಾನ್ ಅಂತ್ಯದಲ್ಲಿ ಫಿಶ್ರ್‌ ಝಕಾತ್ ಅಂದರೆ ಅಲ್ಲಾಹ್ಗೆ ಕೃತಜ್ಞತೆಯಿಂದ ಬಡವರಿಗೆ ನೀಡುವ ದಾನವೇ ಶ್ರೇಷ್ಠ’ ಎಂದು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ ಹೇಳಿದರು.

ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದಲ್ಲಿರುವ ಈದ್ಗಾ ಮೈದಾನದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಮಾತನಾಡಿ ರಂಜಾನ್ ತಿಂಗಳಲ್ಲಿ ಮುಸ್ಲಿಮರು ಪವಿತ್ರ ಧರ್ಮ ಗ್ರಂಥ ಕುರಾನ್ ಪಠಣ ಮಾಡುವುದರಿಂದ ಮನಸ್ಸಿನಲ್ಲಿ ಕಲ್ಮಶಗಳು ದೂರವಾಗುತ್ತದೆ ಅಲ್ಲಾಹನ ಮನದಲ್ಲಿ ನೆನೆದು ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ನಾವೆಲ್ಲರೂ ಒಂದೇ ಅನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬರ ಕರ್ತವವಾಗಿದೆ ದುಡಿಯುವದಲ್ಲಿ ದಾನ ಧರ್ಮ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯಲಿದೆ ಎಂದರು.  

ಗ್ಯಾರೆಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಮಾತನಾಡಿ ಪವಿತ್ರ ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ದೇವರ ಕುರಿತು ಏಕಾಗ್ರತೆ ಮೂಡಲು ಸಾಧ್ಯ ಎಂಬುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ. ದಿನನಿತ್ಯ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಈ ಪವಿತ್ರ ಧಾರ್ಮಿಕ ರಂಜಾನ್ ಹಬ್ಬದಲ್ಲಿ ರೋಜಾ ನಮಾಜ್ ಜಕಾತ್ ಮಾಡುವುದರಿಂದ ಸ್ವಲ್ಪಮಟ್ಟಿಗೆ ಮಾನಸಿಕ ನೆಮ್ಮದಿ ನೀಡುತ್ತದೆ ಅಲ್ಲದೆ ಈ ತಿಂಗಳ ಉಪವಾಸ ವೃತ ಮಾಡುವುದರಿಂದ ವ್ಯಕ್ತಿಯ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ಹೇಳಿದರು.

ಸಮಾಜದ ಮುಖಂಡ ಡಾಕ್ಟರ್ ಎ.ಎಂ. ಸೌಧಾಗರ ಮಾತನಾಡಿ ಈ ಹಬ್ಬವು ಸಮಾನತೆ ಸಾಮರಸ್ಯ ಸೌಹಾರ್ದತೆ ಮತ್ತು ಬಡವ ಮತ್ತು ಶ್ರೀಮಂತನಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಡೆಸುವ ಹಬ್ಬ ಇದಾಗಿದೆ ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್‌ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು.

ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ. ಬೆಳಗ್ಗೆ ಕುಟುಂಬ ಸದಸ್ಯರೆಲ್ಲರೂ ಹೊಸ ಉಡುಪು ಧರಿಸಿ ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವುದರೇ ಪುರುಷರು ಈಗ ಮೈದಾನದಲ್ಲಿ ಸುಮಾರು ಒಂದು ಗಂಟೆಗಳ ಹೆಚ್ಚು ಕಾಲ ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಮುಗಿದ ನಂತರ ಸಮಸ್ತ ಮುಸ್ಲಿಂ ಬಾಂಧವರು ಶುಭಾಶಯಗಳ ವಿನಿಮಯ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ರಾಜೆ ಸಾಬ್ ಕಳ್ಯಾಳ. ಮಂಜೂರಲ್ಲಿ ಹಕ್ಕಿಮ್‌. ಅಬ್ದುಲ್ ಮುನಫ್ ಎರೇಸಮಿ. ಭಾಷಾ ಸಾಬ್ ಮುಲ್ಲಾ. ಹಾಗೂ ಸಮಸ್ತ ಮುಸ್ಲಿಂ ಬಾಂಧವರು .ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ಚಿಕ್ಕಣ್ಣನವರ್ ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು.