ಕೌಲಲಾಂಪುರ , ಡಿ 18 ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಇಂದಿನಿಂದ ಮುಸ್ಲಿಂ ರಾಷ್ಟ್ರಗಳ ಸಮ್ಮೇಳನ ನಡೆಯಲಿದೆ. ಜಮ್ಮು ಮತ್ತು
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕದ ಅಲ್ಲಿನ ಸ್ಥಿತಿಯ ಬಗ್ಗೆ ಪ್ರಧಾನವಾಗಿ ಚರ್ಚೆ ನಡೆಯುವ
ಸಾಧ್ಯತೆಗಳಿವೆ. ಸೌದಿ ಅರೇಬಿಯಾ, ಈಜಿಪ್ಟ್, ಮೊರೊಕ್ಕೋ,
ಪಾಕಿಸ್ಥಾನ, ಟರ್ಕಿ, ಕತಾರ್, ಇಂಡೋನೇಷ್ಯಾ ಭಾಗವಹಿಸುವ
ಪ್ರಮುಖ ರಾಷ್ಟ್ರಗಳಾಗಿವೆ.ಇದೇ ಸಂದರ್ಭ ಪಾಕಿಸ್ಥಾನ
ಕೂಡ ಭಾರತದ ವಿರುದ್ಧ ಸಲ್ಲದ ರೀತಿಯಲ್ಲಿ ಅಪಪ್ರಚಾರ ನಡೆಸಲು ಹಾಗೂ ಟರ್ಕಿಯ ಬೆಂಬಲ ಪಡೆದುಕೊಳ್ಳಲು ಮುಂದಾಗಿದೆ. ಏಕೆಂದರೆ ಕಾಶ್ಮೀರ
ವಿಚಾರದಲ್ಲಿ ಭಾರತ ಸರಕಾರ ಕೈಗೊಂಡಿರುವ ನಿರ್ಣಯಕ್ಕೆ ಸೌದಿ ಅರೇಬಿಯಾ ಬೆಂಬಲ ನೀಡಿರುವುದು ಇಮ್ರಾನ್
ಖಾನ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಕಾಶ್ಮೀರ
ವಿಚಾರವನ್ನು ಪಾಕಿಸ್ಥಾನದ ನಿಯೋಗ ಸಮ್ಮೇಳನದಲ್ಲಿ ಪ್ರಧಾನವಾಗಿ ಚರ್ಚೆಗೆ ತರಲು ಯತ್ನಿಸಿದರೂ ಅದಕ್ಕೆ
ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ ಬೆಂಬಲ ನೀಡುವ ಸಾಧ್ಯತೆ
ಕಡಿಮೆ ಎನ್ನಲಾಗಿದೆ. ಇನ್ನೊಂದೆಡೆ ಮುಸ್ಲಿಂ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾದ ಪ್ರಮುಖ್ಯತೆ ಕಡಿಮೆ
ಮಾಡುವ ಏಕೈಕ ಕಾರಣಕ್ಕಾಗಿ ಮಲೇಷ್ಯಾ ಪ್ರಧಾನಿ ಡಾ|
ಮಹಾತಿರ್ ಮೊಹಮ್ಮದ್ ಈ ಸಮ್ಮೇಳನ ಆಯೋಜಿಸಿದ್ದಾರೆ ಎಂದೂ
ಹೇಳಲಾಗುತ್ತಿದೆ .ಸಮ್ಮೇಳನ ಶನಿವಾರದ ವರೆಗೂ ನಡೆಯಲಿದೆ.