ಮುಸ್ಲಿಂ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ

ತಾಳಿಕೋಟೆ,   ಇತ್ತೀಚಿಗೆ ಪಟ್ಟಣದ ದಿ. ಮುಸ್ಲಿಂ ಕೋ-ಆಪ್ ಬ್ಯಾಂಕ ಲಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಆದಮ ಅತ್ತಾರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೈನುದ್ದೀನ ಬೇಪಾರಿ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಜಿಲ್ಲಾ ಪಂಚಾಯತ್ ಸದಸ್ಯ ಶಿವನಗೌಡ ದೇಸಾಯಿ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ಸಾಸನೂರ ಗ್ರಾ.ಪಂ. ಅಧ್ಯಕ್ಷ ಶರಣಗೌಡ ದೇಸಾಯಿ, ದೆ.ಹಿಪ್ಪರಗಿ ಕಾಂಗ್ರೆಸ್ ಅಲ್ಪಸಂಖ್ಯಾಂತ ಘಟಕ ಅಧ್ಯಕ್ಷ ರಮಜಾನ ಮುಜಾವರ, ವಿಜುಗೌಡ ಕರಕಳ್ಳಿ, ಶಿವರಡ್ಡಿ ಐನಾಪೂರ, ಅಜೀಜ ಬಳಬಟ್ಟಿ, ಮಶ್ಯಾಕ ಕಾಚಾಪೂರ, ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ಸತ್ತಾರ ಅವಟಿ, ಇಬ್ರಾಹಿಂ ಮನ್ಸೂರ, ಸಿಕಂದರ್ ಡೋಣಿ, ಮಂಜೂರಅಲಿ ಬೇಪಾರಿ, ಫಯಾಜಅಹ್ಮದ ಉತ್ನಾಳ, ಆರ್.ಎ.ಪಟ್ಟೇವಾಲೆ ಇತರರು ಇದ್ದರು.