ಆಗಸ್ಟ್ 6ರಂದು ಡಾ. ನಂದಾ ಪಾಟೀಲ ಸಂಗೀತ ಕಾರ್ಯಕ್ರಮ
Music program by Dr. Nanda Patil on August 6
ಲೋಕದರ್ಶನ ವರದಿ
ಧಾರವಾಡ 05 : ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ನಂದಾ ಪಾಟೀಲ ದತ್ತಿ ಅಂಗವಾಗಿ ಆಗಸ್ಟ್ 6, 2026ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಡಾ. ನಂದಾ ಪಾಟೀಲ ವಚನ ಸಂಗೀತ ಪ್ರಶಸ್ತಿ-2026’ ಪ್ರದಾನ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಸಂದರ್ಭದಲ್ಲಿ ಬೆಂಗಳೂರಿನ ಸಂಗೀತಗಾರ್ತಿ ವಿದುಷಿ ಪಾವನಿ ಕಾಶಿನಾಥ ಅವರಿಗೆ ‘ಡಾ. ನಂದಾ ಪಾಟೀಲ ವಚನ ಸಂಗೀತ ಪ್ರಶಸ್ತಿ-2026’ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ವಿಶ್ರಾಂತ ಎಸಿಪಿ ಬಿ.ಡಿ. ಹಿರೇಮಠ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಾಯಿ ಪಿ.ಯು. ಕಾಲೇಜಿನ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಭಾಗವಹಿಸಲಿದ್ದು, ಧಾರವಾಡದ ಕ.ವಿ.ವಿ.ಯ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಪಾಟೀಲ ಉಪಸ್ಥಿತರಿರುವರು.
ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕನ್ನಡ ನಾಡು ಹಾಗೂ ದೇಶದ ಹೆಸರಾಂತ ಹಿಂದೂಸ್ತಾನಿ ಸಂಗೀತ ವಿದುಷಿ ಡಾ. ನಂದಾ ಪಾಟೀಲ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರದಾನ ಮಾಡಲಾಗುವ ‘ಡಾ. ನಂದಾ ಪಾಟೀಲ ವಚನ ಸಂಗೀತ ಪ್ರಶಸ್ತಿ-2026’ ಖ್ಯಾತ ಗಾಯಕಿ ವಿದುಷಿ ಪಾವನಿ ಕಾಶೀನಾಥ್ ಆಯ್ಕೆಯಾಗಿದ್ದಾರೆ.
‘ಅಕ್ಕ ಕೇಳವ್ವ’ ಸೇರಿದಂತೆ ಹಲವು ವಚನ ಸಂಗೀತ ಧ್ವನಿಮುದ್ರಿಕೆಗಳು, ‘ಸ್ವರಯಾತ್ರೆ’ ಆತ್ಮಕಥೆ ಹಾಗೂ ಅವರ ಹೆಸರಿನಲ್ಲಿ ಸ್ಥಾಪಿತವಾದ ಡಾ. ನಂದಾ ಪಾಟೀಲ ಸಂಗೀತ ಅಕಾಡೆಮಿ ವಚನ ಸಂಗೀತದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಅಕಾಡೆಮಿಯ ಮೂಲಕ ಪ್ರತಿವರ್ಷ ವಚನ ಸಂಗೀತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ವಿದುಷಿ ಪಾವನಿ ಕಾಶೀನಾಥ್ ಅವರು ಸಂಗೀತ ಪರಂಪರೆಯ ಕುಟುಂಬದಿಂದ ಬಂದವರು. ತಾಯಿ ವಿದುಷಿ ಪುಷ್ಪಾ ಕಾಶೀನಾಥ್ ಹಾಗೂ ಪದ್ಮಶ್ರೀ ವಿದ್ವಾನ್ ರುದ್ರಪಟ್ಟಣಂ ತ್ಯಾಗರಾಜ್ ಸೇರಿದಂತೆ ಹಲವರ ಬಳಿ ಸಂಗೀತಾಭ್ಯಾಸ ಪಡೆದಿದ್ದಾರೆ.
ಡಾ. ನಂದಾ ಪಾಟೀಲ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ‘ಡಾ. ನಂದಾ ಪಾಟೀಲ ವಚನ ಸಂಗೀತ ಹಿ2026' ಪ್ರದಾನ ಸಮಾರಂಭವು ಶೀಘ್ರದಲ್ಲೇ ನಡೆಯಲಿದ್ದು, ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಕಲಾಭಿಮಾನಿಗಳು ಭಾಗವಹಿಸಲಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 