ಸಂಗೀತ ಮುಪ್ಪನ್ನು ಮರೆಸುತ್ತದೆ: ಎನ್. ಬಿ. ದೇಶಪಾಂಡೆ
Music makes you forget old age: N. B. Deshpande
ಬೆಳಗಾವಿ 16: ಜೀವನದ ಸಂಧ್ಯಾ ಸಮಯದಲ್ಲಿ ಮನುಷ್ಯ ಸಹಜವಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತ ಹೋಗುತ್ತಾನೆ. ಸಂಗೀತ ಶ್ರವಣದಿಂದ ಮನುಷ್ಯ ಆರೋಗ್ಯವಂತನಾಗುತ್ತಾನೆ. ಮುಪ್ಪನ್ನು ಮರೆಯಲು ಸಂಗೀತ ಬೇಕು. ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕೆಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಎನ್. ಬಿ. ದೇಶಪಾಂಡೆಯವರು ಇಂದಿಲ್ಲಿ ಹೇಳಿದರು.ನಗರದ ನಾದಸುಧಾ ಸುಗಮ ಸಂಗೀತ ಶಾಲೆಯವರು ಇದೇ ದಿ. 13 ರವಿವಾರದಂದು ಬೆನಕನಹಳ್ಳಿಯಲ್ಲಿರುವ "ಘರ್ ಕುಲ್" ವೃದ್ಧಾಶ್ರಮದ ದೇವಸ್ಥಾನದ ಆವರಣದಲ್ಲಿ "ಭಜನಾಮೃತ" ಭಕ್ತಿ ಸಂಗೀತದ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಉದ್ಘಾಟಿಸಿದ ದೇಶಪಾಂಡೆಯವರು ಮೇಲಿನಂತೆ ಅಭಿಪ್ರಾಯಪಟ್ಟರು. ಅತಿಥಿಗಳಾಗಿ ಆಗಮಿಸಿದ್ದ. ಖ್ಯಾತ ಸಂಗೀತ ವಿದ್ವಾನ್ ಎಂ.ಜಿ. ರಾವ್ ಅವರು ಮಾತನಾಡಿ ನಾದಸುಧಾ ವಿಧ್ಯಾರ್ಥಿಗಳು ಕನ್ನಡ ಹಿಂದಿ ಮರಾಠಿ ಕೃತಿಗಳನ್ನು ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಪ್ರತಿ ಗುರುಪೂರ್ಣಿಮೆ ದಿನದಂದು ನಾದಸುಧಾದವರು ಭಕ್ತಿ ಸಂಗೀತದ ಕಾರ್ಯಕ್ರಮವನ್ನಿಲ್ಲಿ ನೀಡಬೇಕೆಂದು ಎಂದರು.
ಪ್ರಾಸ್ತಾವಿಕ ಮಾತಗಳನ್ನಾಡುತ್ತ ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಡಾ. ಸತ್ಯನಾರಾಯಣರು ಮಾತನಾಡುತ್ತ ನಾದಸುಧಾ ಸಂಗೀತ ಶಾಲೆಯು ನೀಡುತ್ತಿರುವ ಇಂದಿನ ಕಾರ್ಯಕ್ರಮ 300 ನೇಯದ್ದು ಎಂದು ಹೇಳಲು ಅಭಿಮಾನವೆನಿಸುತ್ತದೆ ಎಂದು ಹೇಳಿ ಸಂಘಟನೆ ನಡೆದು ಬಂದ ದಾರಿಯನ್ನು ವಿವರಿಸಿದರು. ಕನ್ನಡ, ಹಿಂದಿ, ಮರಾಠಿಗಳಲ್ಲಿ ಭಕ್ತಿ ಗೀತೆ ಹಾಗೂ ಅಭಂಗಗಳನ್ನು ನಾದಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸುಮಧುರವಾಗಿ ಹಾಡಿದರು.
ಸ್ವಾಮಿ ಛಾಯಾ ಉಪಸ್ಥಿತರಿದ್ದರು ಡಾಽಽಸತ್ಯನಾರಾಯಣ ಸ್ವಾಗತಿಸಿದರು, ಮಹಾದೇವಿ ಬೆಳಕೂಡ ಕಾರ್ಯಕ್ರಮವನ್ನು ನಿರೂಪಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 