ಕೊಳಲಿನ ನಾದ ತಬಲಾ ಮೃದಂಗದ ನಿನಾದದಲ್ಲಿ ಮಿಂದೆದ್ದ ಅವಳಿ ನಗರದ ಸಂಗೀತ ಪ್ರೇಮಿಗಳು

ಕೊಳಲಿನ ನಾದ ತಬಲಾ ಮೃದಂಗದ ನಿನಾದದಲ್ಲಿ ಮಿಂದೆದ್ದ ಅವಳಿ ನಗರದ ಸಂಗೀತ ಪ್ರೇಮಿಗಳು Music lovers from the twin cities were mesmerized by the sound of flutes and the melody of tabla and

ಲೋಕದರ್ಶನ ವರದಿ 

ಹುಬ್ಬಳ್ಳಿ 17: ನಗರದ ಸಂಗೀತಾಸಕ್ತರು ಭಾನುವಾರ ಕರ್ನಾಟಕೀ ಹಿಂದೂಸ್ತಾನಿ ಸಂಗೀತದ ಎರಡು ಪ್ರಕಾರಗಳ ಲಯ ಸ್ವರಗಳ ಮಧ್ಯೆ 2 ತಾಸುಗಳ ಕಾಲ ಮಿಂದೆದ್ದ ಅನುಭವ ನೀಡಿತು.  

ಕೊಳಲಿನಲ್ಲಿ ವಿದ್ವಾನ ರಾಜಕಮಲ ಅವರೊಂದಿಗೆ ಅನಿರುದ್ಧ ಭಟ್ ಮೃದಂಗದಲ್ಲಿ, ಪಂಡಿತ ಸಮೀರ ರಾವ್ ಅವರೊಂದಿಗೆ ಅತೀ ಕಿರಿಯ ವಯಸ್ಸಿನ ಕುಮಾರ ಹೇಮಂತ ಜೋಶಿ ಅವರ ತಬಲಾ ಕೈಚಳಕ ನೆರೆದಿದ್ದವರನ್ನು ತಮ್ಮ ಆಸನಗಳಿಂದ ಏಳದಂತೆ ಮಾಡಿದ ಮೋಡಿ ನಿಜಕ್ಕೂ ಸುನಾದ ಗಾನಸುಧಾ ಸಂಸ್ಥೆಯ ಕಾರ್ಯಕ್ರಮಗಳ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಯಿತು. ಕಲಾವಿದರ ಪ್ರತಿ ಹೊಸ ಪ್ರಯೋಗಕ್ಕೂ ನೆರೆದಿದ್ದವರು ವಾಹ್ ಅದ್ಭುತ ಎಂದು ಚಪ್ಪಾಳೆಗಳ ಮೂಲಕ ಕಲಾವಿದರ ಉತ್ಸಾಹವನ್ನು ಹೆಚ್ಚು ಮಾಡಿತು. ಹುಬ್ಬಳ್ಳಿಯ ಕೋರ್ಟ್‌ ವೃತ್ತದ ಬಳಿಯ ಮಹಾರಾಷ್ಟ್ರ ಮಂಡಳ ಸಭಾಂಗಣದಲ್ಲಿ ಬಹುತೇಕ ಎಲ್ಲ ಆಸನಗಳು ಬಹಳ ದಿನಗಳ ನಂತರ ಭರ್ತಿಯಾಗಿ ಪ್ರೇಕ್ಷಕರು ನಿಂತು ನೋಡಿದ ದೃಶ್ಯ ಈ ಭಾಗದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಕರಿಗೆ ಹೊಸ ಭರವಸೆ ನೀಡಿ ನಿರಂತರ ಕಾರ್ಯಕ್ರಮ ಆಯೋಜಿಸಲು ಪುಷ್ಟಿ ನೀಡಿತು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ಲತಾ ಜಮಖಂಡಿ, ಡಾ. ನಾಗಲಿಂಗ ಮುರಗಿ, ಅನಂತರಾಜ್ ಭಟ್, ರಾಕೇಶ ತಟ್ಟಿಮನಿ ಉಪಸ್ಥಿತರಿದ್ದರು.