ಸಂಗೀತ ಎಂಬುದು ಅದ್ಬುತವಾದ ಶಕ್ತಿ - ದತ್ತು ಕಮ್ಮಾರ
Music is a wonderful force - Dattu Kammara
ಲೋಕದರ್ಶನ ವರದಿ
ಕೊಪ್ಪಳ 31: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಪ್ಪಳ/ಬೆಂಗಳೂರು ಹಾಗೂ ಗಾನಾಮೃತ ಸಂಗೀತ ಪ್ರತಿಷ್ಠಾನ (ರಿ) ಭಾಗ್ಯನಗರ ಇವರ ಸಹಯೋಗದಲ್ಲಿ ಭಾಗ್ಯನಗರದ ಉದ್ಯಾನವನ ನೀಲಕಂಠೇಶ್ವರ ದೇವಾಸ್ಥಾನ ಎದುರುಗಡೆ “ಕಲಾ ಯಾತ್ರೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದಯವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರರಾದ ಶ್ರೀ ದತ್ತು ಕಮ್ಮಾರ, ಸಂಗೀತ ನಿಂತ ನೀರಲ್ಲ, ನಿರಂತರವಾಗಿ ಹರಿಯುತ್ತಾ ಇರುತ್ತದೆ, ಪುರಾತನ ಕಾಲದಿಂದಲೂ, ಆಧುನಿಕ ಯುಗದಲ್ಲಿ, ಭವಿಷ್ಯದಲ್ಲು ಸಂಗೀತ ನಿರಂತರವಾಗಿ ಹರಿಯುತ್ತಾ ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಮಕ್ಕಳನ್ನು ಬಲಿ ಪಡೆಯುತ್ತಿದೆ, ಸಾಮಾಜಿಕ ಮಾಧ್ಯಮ ಇರಬೇಕು ಆದರೆ ಅದೇ ಜೀವನವಲ್ಲ, ಸಂಗೀತ ್ಘ ಸಂಸ್ಕೃತಿಯಿಂದ ಮಕ್ಕಳಲ್ಲಿ ಸಂಸ್ಕಾರ ಬರುತ್ತದೆ, ಸಂಸ್ಕಾರ ಇರುವಂತಹ ಮಕ್ಕಳು ಎಂದು ದಾರಿ ತಪ್ಪುವುದಿಲ್ಲ ಎಂದರು.
ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರಮೇಶ್ ಹ್ಯಾಟಿ ಅವರು ಮಾತನಾಡಿ ಸಂಗೀತ ಎನ್ನುವುದು ಇಡೀ ಜಗತ್ತಿನಲ್ಲಿಯೇ ಆದ್ಯತೆಯನ್ನು ಪಡೆದಿರುವ ಸಾಧನ, ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತವನ್ನೇ ಉಸಿರಾಗಿಸಿಕೊಂಡವರು, ಅಂಧ, ಅನಾಥರ ಬಾಳಿಗೆ ಬೆಳಕಾದವರು, ಹೆಚ್ಚು ಹೆಚ್ಚು ಮಕ್ಕಳು ಸಂಗೀತದಲ್ಲಿ ಸಾಧನೆಯನ್ನು ಮಾಡಿ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ, ಆದರೆ ಜನ ಮಾತ್ರ ಟಿವಿ ಬಿಟ್ಟು ಹೊರಗಡೆ ಬರಬೇಕಾಗಿದೆ ಸಂಗೀತವನ್ನು ಅಭ್ಯಾಸ ಮಾಡುವುದರಿಂದ ವಿದ್ವಂಸಕ ಜಾಲಗಳಿಂದ ದೂರವಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷರಾದ ವಿಜಯಲಕ್ಷ್ಮೀ ಮ್ಯಾಗಡೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಡಾಽಽ ಕೋಟ್ರೇಶ ಶೆಡ್ಮೀ, ಪಟ್ಟಣ ಪಂಚಾಯತ ಸದಸ್ಯರಾದ ಮಂಜುಳಾ ಮ್ಯಾಗಳಮನಿ ಮತ್ತಿತರರು ಉಪಸ್ಥಿತರಿದ್ದರು.
ಕಲಾ ವೃಂದದಲ್ಲಿ ರಾಘವೇಂದ್ರ ಗಂಗಾವತಿ ಅವರಿಂದ ತಬಲಾ ಸೋಲೋ, ಅನನ್ಯ ದೇಸಾಯಿ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸ್ನೇಹ ಕೆ.ಎಮ್ ಅವರಿಂದ ಸುಗಮ ಸಂಗೀತ, ಸ್ಪಂದನ ಅವರಿಂದ ದಾಸವಾಣಿ, ತಿಪ್ಪೇಶ್ ಹಿರೇಮಠ ಬೆಂಗಳೂರು ಅವರಿಂದ ಸುಗಮ ಸಂಗೀತ, ವಿಜಯಲಕ್ಮಿ-್ಷ ಶ್ಯಾವಿ ಅವರಿಂದ ಜಾನಪದ ಗೀತೆಗಳು, ಅಪರ್ಣಾ ಹೆಗಡೆ ಹಾಗೂ ತಂಡ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ವಾದ್ಯವೃಂದದ ಕೀಬೋರ್ಡನಲ್ಲಿ ಶ್ರೀ ರಾಮಚಂದ್ರ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಾಘವೇಂದ್ರ ಗಂಗಾವತಿ, ಗಿಟಾರ್‌ನಲ್ಲಿ ತಿಪ್ಪೇಶ ಹಿರೇಮಠ, ಡೋಲಕ್ ನಲ್ಲಿ ನಂದೀಶ್ ಹಿರೇಮಠ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲದ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 