ಸಂಗೀತ ಒಂದು ಸಾಧನೆ ಆರಾಧನೆ: ಕಾಕಡೆ
Music is a form of worship: Kakade
ಗೋಕಾಕ 14: ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಹಾಡಿನ ಮೋಡಿಗೆ ಒಳಗಾಗದಿರುವವರು ಭೂಮಿಯ ಮೇಲೆ ಯಾರೂ ಇಲ್ಲ, ಸಂಗೀತ ಒಂದು ಸಾಧನೆ ಮತ್ತು ಸಂಗೀತ ಒಂದು ಆರಾಧನೆ, ಕಷ್ಟದಿಂದಲೇ ಸಾಧನೆಯ ಶಿಖರವೇರಿದ ಆಶಾ ಭೋಂಸ್ಲೆ ಅಮರಕಲಾವಿದೆ. ಎಂದು ಶಿಕ್ಷಕ ಹಾಗೂ ವಾಗ್ಮಿ ರಾಮಚಂದ್ರ ಕಾಕಡೆ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಮಧುರ ಸಂಗೀತ ಬಳಗ ಗುಂಪು ಕಲಾವಿದರು, ಶ್ರೀ ಸರ್ವೇಶ್ವರ ಜಾನಪದ ಕಲಾ ಸಂಸ್ಥೆ, ಬಿಂದು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಹೆಸರಾಂತ ಚಲನಚಿತ್ರ ಗಾಯಕಿ ಆಶಾ ಭೋಂಸ್ಲೆ ಶೋಕ ಆಚರಣೆ ಸಭೆಯಲ್ಲಿ ಮಾತನಾಡಿದರು.
ಮೂಡಲಗಿ ಚೈತನ್ಯ ಆಶ್ರಮದ ವೈ ಬಿ ಪಾಟೀಲ, ಶಿಕ್ಷಕ ಹಾಗೂ ಚಿಂತಕ ಶಂಕರ ಕ್ಯಾಸ್ತಿ, ಹಿರಿಯ ಬೈಲಾಟ ಕಲಾವಿದ ಹಾಗೂ ಸಾಹಿತಿ ಈಶ್ವರ್ ಚಂದ್ರ ಬೆಟಗೇರಿ, ಶಿಕ್ಷಕ ಹಾಗೂ ಕವಿ ಈಶ್ವರ ಮಮದಾಪುರ, ನೇಸರಗಿಯ ಸಾಹಿತಿ ಸಿ.ವಾಯ್ ಮೆಣಸಿನಕಾಯಿ, ಬಸವಜೋತಿ ಐಟಿಐ ಕಾಲೇಜ್ ಚೇರ್ಮನ್ ಅಶೋಕ್ ಲಗಮಪ್ಪ ಗೋಳ ಇದ್ದರು. ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು.ಚಿಂತಕ ಅರುಣ ಸವತಿಕಾಯಿ ನಿರೂಪಿಸಿ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 