ಕೊಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

ಕೊಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ Murder accused gets life sentence

ಕಾಗವಾಡ, 28 : ಪೊಲೀಸ್ ಠಾಣಾ ವ್ಯಾಪ್ತಿಯ  ಉಗಾರ ಖುರ್ದ ಪಟ್ಟಣದ ದೀಪಕ ಬಾನೆ ಈತನನ್ನು ದಿ. 12.08.2020 ರಂದು ಕುಡಚಿ  ರೈಲ್ವೆ ಓವರ್ ಬ್ರಿಡ್ಡನಿಂದ ಮಹಾಪೂರದಿಂದ ತುಂಬಿ ಹರಿಯುತ್ತಿದ್ದ  ಕೃಷ್ಣಾ ನದಿಗೆ ನೂಕಿ ಕೊಲೆ ಮಾಡಿದ ಅಪರಾಧ ಹಾಗೂ ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ ಮಾನ್ಯ 11ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿಯ ಅಥಣಿ ಪೀಠ ವಿಚಾರಣೆ ಕೈಗೊಂಡು, ಆರೋಪಿ ರಿಯಾಜ್ ಸಿರಾಜ್ ಮುಜಾರವರ ಈತನಿಗೆ  ಕಠಿಣ ಜೀವಾವದಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.  

ಪ್ರಕರಣದ ಹಿನ್ನೆಲೆ: ಮೃತ ದೀಪಕ ಚಿದಾನಂದ ಬಾನೆ ಈತನು ದಿ. 12.08.2020 ರಂದು ಕಾಣೆಯಾಗಿರುವ ಬಗ್ಗೆ ಕಾಗವಾಡ ಪೋಲಿಸ್ ಠಾಣೆಯಲ್ಲಿ ಮೃತನ ತಾಯಿ ಪ್ರಕರಣ ದಾಖಲಿಸಿದ್ದರು.  ತನಿಖೆ ಕೈಗೊಂಡ ಪೊಲೀಸರು ಆರೋಪಿ ರಿಯಾಜ್ ಸಿರಾಜ್ ಮುಜಾರವರ ಇವನು ತನ್ನ ಪ್ರೇಯಸಿ ಉಗಾರ ಖುರ್ದ ಪಟ್ಟಣದ   ಶಾರ್ವಿ ಡೇ ಕೇರ್ ಸೆಂಟರ್ ಆಸ್ಪತ್ರೆಯಲ್ಲಿ ನರ್ಸ ಆಗಿ ಕೆಲಸ ಮಾಡುವ ಕಾಲಕ್ಕೆ ಮೃತ ದೀಪಕ ಬಾನೆ ಇವನು ಆಕೆಯನ್ನು  ಕಾಡುತ್ತಿದ್ದ ಬಗ್ಗೆ ಹಾಗೂ ತಂಟೆ ತಕರಾರು ಮಾಡುತ್ತಿದ್ದ ಬಗ್ಗೆ ಮತ್ತು ಸದರಿಯವನನ್ನು ದಿ: 12.08.2020 ರಂದು ರಾತ್ರಿ 08:15 ಗಂಟೆ ಸುಮಾರಿಗೆ ಕುಡಚಿ ರೋಡನಲ್ಲಿರುವ ರೈಲ್ವೆ ಓವರ್ ಬ್ರಿಡ್ಡಗೆ ಕರೆದುಕೊಂಡು ಹೋಗಿ ಸರಾಯಿ ಕುಡಿಸಿ, ಬ್ರಿಡ್ಡನಿಂದ ಕೆಳಗೆ  ಕೃಷ್ಣಾ ನದಿಗೆ ನೂಕಿ ಕೊಲೆ ಮಾಡಿದ್ದು, ಆರೋಪಿತನ ಮೇಲೆ ಕಾಗವಾಡ ಪೋಲಿಸ್ ಠಾಣೆ ಪ್ರಕರಣ ನಂ. 115/20, ಕಲಂ: 302 201 506 ಐಪಿಸಿ ಅಡಿಯಲ್ಲಿ ತನಿಖೆ ಕೈಗೊಂಡು ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.  

ಆರೋಪಗಳ ಪೈಕಿ ಕಲಂ 302, 201 ಐಪಿಸಿ ಅಡಿಯಲ್ಲಿಯ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈರಣ್ಣ ಈ. ಎಸ್‌., ಮಾನ್ಯ ಜಿಲ್ಲಾ ್ಘ ಸತ್ರ ನ್ಯಾಯಾದೀಶರು, ಅಥಣಿ ರವರು ಆರೋಪಿತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.15,000-00 ಗಳ ದಂಡ ವಿಧಿಸಿ ತೀಪು ನೀಡಿರುತ್ತಾರೆ.   

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಮೀನಸಾಬ ಕಲಾದಗಿ ವಾದ ಮಂಡಿಸಿದ್ದು,   ಅಥಣಿ ಸಿಪಿಐ  ಶಂಕರಗೌಡ ಬಸನಗೌಡರ ತನಿಖಾಧಿಕಾರಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ.