ಪುರಸಭಭೆ ಸದಸ್ಯ ಚನ್ನಪ್ಪ ಕಂಠಿ ನಿಧನ: ಶ್ರದ್ಧಾಂಜಲಿ
Municipal council member Channappa Kanthi passes away
ಮುದ್ದೇಬಿಹಾಳ 28: ಪಟ್ಟಣದ ಬಾಜಪ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರು ಹಾಗೂ ಪುರಸಭಭೆ ಸದಸ್ಯರಾದ ಚನ್ನಪ್ಪ ಕಂಠಿಯವರು ಅಕಾಲಿಕ ನಿಧನ ಹೊಂದಿದ ಹಿನ್ನೆಲೆಯಲ್ಲಿ ಭಾಜಪದ ಕರ್ನಾಟಕ ರಾಜ್ಯ ರೈತ ಮೊರ್ಚಾ ಅಧ್ಯಕ್ಷರು, ಮಾಜಿ ಶಾಸಕ ಎ.ಎಸ್.ಪಾಟೀಲ್ (ನಡಹಳ್ಳಿ) ಯವರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಹಳೆ ಊರು ವಿರೇಶ್ವರ ನಗರ ಬಡಾವಣೆಯಲ್ಲಿಯರುವ ಅವರ ನಿವಾಸಕ್ಕೆ ತೆರಳಿ ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಂತರ ಮಾತನಾಡಿ ಅವರು ಸಮುದಾಯಗಳ ಪರವಾಗಿ, ಸಹಾನುಭೂತಿಯ ಲಿಂಗಾಯತ ಸಮೂದಾಯದ ನಾಯಕರಾಗಿ, ಮಾರ್ಗದರ್ಶಕ ಮತ್ತು ದಾರ್ಶನಿಕನ ಗುಣಗಳನ್ನು ಸಾಕಾರಗೊಳಿಸಿದ ಗಮನಾರ್ಹ ವ್ಯಕ್ತಿಯಾಗಿದ್ದರು. ಹಿರಿಯ ಮುಖಂಡರಾಗಿ ಅವರು ಸಮಗ್ರತೆ, ಲಿಂಗಾಯತ ಸಮುದಾಯಗಳ ಪರಿವರ್ತನೆಯ ಹರಿಕಾರಕಾರರಾಗಿ ಎಲ್ಲರಿಗೂ ಪ್ರೀಯರಾಗಿ ಉತಮ ಮಾರ್ಗದರ್ಶಕರಾಗಿದ್ದರು.
ತಮ್ಮ ಅನುಭವನವನ್ನು ದಾರ್ಶನಿಕರಾಗಿ, ನಿರ್ಭಯವಾಗಿ ಮತ್ತು ಧೈರ್ಯದಿಂದ ಮುನ್ನಡೆಸಿಕೊಂಡು ಬಂದವರು. ಚನ್ನಪ್ಪ ಕಂಠಿಯವರು ನೇರ ಹಾಗೂ ನಿಷ್ಠುರವಾದಿಗಳಾಗಿದ್ದರೂ, ಸದಾ ಸಮಾಜದ ಹಾಗೂ ಪಕ್ಷದ ಏಳಿಗೆಗೆ ಟೊಂಕಕಟ್ಟಿ ನಿಂತಿದ್ದ ಹಿರಿಯ ಜೀವಿಗಳಾಗಿದ್ದರು.ಅವರು ನಮ್ಮ ತಾಲೂಕಿನ ಲಿಂಗಾಯತ ಸಮಾಜಕ್ಕೆ ಮಾತ್ರವಲ್ಲದೇ ಎಲ್ಲ ಸಮಾಜಕ್ಕೂ ಹಿರಿಯರಾಗಿ ಮಾರ್ಗದರ್ಶಕರಾಗಿದ್ದರು, ಅವರು ಅನುಭವದ ಮಾತುಗಳು ಮತ್ತು ಸಮಾಜಿಕ ಕಳಕಳಿಯ ದೈನಂದಿನ ಚಟುವಟಿಕೆಗಳು ಇಂದಿನ ಯುವ ಪೀಳಿಗೆಗಳಿಗೆ ಪ್ರೇರಣೆಯಾಗಬೇಕಿದೆ. ಬಿಜೆಪಿ ಪಕ್ಷಕ್ಕೆ ಒಬ್ಬ ವ್ಯಕ್ತಿಯಾಗಿರಲಿಲ್ಲ ಶಕ್ತಿಯಾಗಿದ್ದರು. ಅವರನ್ನು ಕಳೆದುಕೊಂಡ ಪಕ್ಷಕ್ಕೆ ಹಾಗೂ ಪಟ್ಟಣದ ವ್ಯಾಪಾರಸ್ಥ ಸಂಘಗಳಿಗೆ ಮತ್ತು ಲಿಂಗಾಯತ ಸಮೂದಾಯಕ್ಕೆ ತುಂಬಲಾರದ ನಷ್ಟವಾಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಮಂಡಲ ಪ್ರ.ಕಾರ್ಯದರ್ಶಿ ಸಂಜು ಬಾಗೇವಾಡಿ, ಪಕ್ಷದ ಮುಖಂಡರಾದ ಪ್ರಭು ಕಡಿ, ಮಾಣಿಕ್ ದಂಡಾವತಿ, ಶ್ರೀಶೈಲ ದೊಡಮನಿ, ಸಂಗನಗೌಡ ಬಿರಾದಾರ, ಪರಶುರಾಮ ನಾಲತವಾಡ, ರಾಜು ಬಳ್ಳೊಳ್ಳಿ, ಅಶೋಕ ಚಿನಿವಾರ, ಗುರು ಕಡಿ, ಶರಣು ಸಜ್ಜನ, ಮಹಾಂತೇಶ ಮಡಿವಾಳರ, ಶಂಕರ ಕಡಿ, ಶರಣು ಪಡದಾಳೆ ಇನ್ನೂ ಹಲವಾರು ಕಾರ್ಯಕರ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 