ನಗರಸಭೆಯ ಸದಸ್ಯ ದಿ,ಸಿದ್ದು ಮೀಸಿ ನಿಧನ: ಶ್ರದ್ಧಾಂಜಲಿ ಸಭೆ
Municipal Council member Di, Siddu Meesi passes away: Tribute meeting
ಜಮಖಂಡಿ 26: ನಗರಸಭೆಯ ಸದಸ್ಯ ದಿ,ಸಿದ್ದು ಮೀಸಿ ಅವರು ಹೃದಘಾತದಿಂದ ನಿಧನಕ್ಕೆ ತುತ್ತಾಗಿರುವದರಿಂದ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಗಲಿದ ಸದಸ್ಯನಿಗೆ ಶ್ರದ್ಧಾಂಜಲಿ ಅರ್ಿಸಲಾಯಿತು.
ಸಾಮಾನ್ಯ ಸಭೆಯನ್ನು ಮೌನಾಚರಣೆಯೊಂದಿಗೆ ಪ್ರಾರಂಭಿಸಿ, ಸಂಕೇತಿಕವಾಗಿ ಸಭೆ ನಡೆಸಲಾಯಿತು. ಕಳೆದ ಸಭೆಯ ನಿರ್ಣಯಗಳನ್ನು ಅಂಗೀಕರಿಸುವದು, ಜನನ ಮರಣಗಳ ಮಾಹಿತಿ, ನಗರಸಭೆಗೆ 75 ಲಕ್ಷರೂ, ಗಳವರೆಗೆ ಅನುದಾನ ಖರ್ಚು ಮಾಡಲು ಸರ್ಕಾರ ಅನುಮತಿಸಿದ್ದು, ಟೆಂಡರ್ ಪ್ರಕ್ರಿಯೆಗಳ ವಿವಿರಗಳನ್ನು ಪೌರಾಯುಕ್ತ ಜ್ಯೋತಿ ಗೀರೀಶ ಸಭೆಯ ಗಮನಕ್ಕೆ ತಂದರು.
ನಂತರ ಅಗಲಿದ ನಾಯಕ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಿ,ಸಿದ್ದು ಮೀಸಿ ಅವರ ಕುರಿತು ಸದಸ್ಯರುಗಳಾದ ಗುರುಪಾದಪ್ಪ ಮೆಂಡಿಗೇರಿ, ಸುನೀಲ ಶಿಂಧೆ, ಮಲ್ಲಮ್ಮ ಪಾಯಗೊಂಡ, ಪೂಜಾ ವಾಳ್ವೇಕರ, ಪ್ರಕಾಶ ಹಂಗರಗಿ, ಕುಶಾಲ ವಾಗಮೋರೆ, ದಶರಥ ವಗ್ಗೆಣ್ಣವರ, ಪ್ರಶಾಂತ ಚರಕಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷ ಪರಮಾನಂದ ಗೌರೋಜಿ ಮಾತನಾಡಿ, ಸಿದ್ದು ಮೀಸಿ ಅವರೊಂದಿಗಿದ್ದ ತಮ್ಮ ಒಡನಾಡದ ಬಗ್ಗೆ ವಿವರಿಸಿದರು. ಅವರನ್ನು ಕಳೆದು ಕೊಂಡಿದ್ದು ಪಕ್ಷಕ್ಕೆ ಹಾಗೂ ನಗರಸಭೆಗೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟರು. ದೇವರು ಅವರ ಆತ್ನಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ವರ್ಗದವರ ದುಖ:ದಲ್ಲಿ ತಾವೆಲ್ಲರೂ ಭಾಗಿಯಾಗುವದುದಾಗಿ ತಿಳಿಸಿದರು.
ಹಿರಿಯ ಸದಸ್ಯರಾದ ದಿಲಾವರ ಶಿರೋಳ, ಈಶ್ವರ ವಾಳೆಣ್ಣವರ, ನಗರಸಭೆಯ ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ನಗರದಭೆ ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 