ನಗರದಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಅವಾಂತರಗಳಿಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ-ಇಮ್ತಿಯಾಜ ಮಾನ್ವಿ

  ನಗರದಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಅವಾಂತರಗಳಿಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ-ಇಮ್ತಿಯಾಜ ಮಾನ್ವಿ Municipal Council's negligence is the reason for the chaos caused by heavy rains in the city - Imtiy

ಲೋಕದರ್ಶನ ವರದಿ 

ಗದಗ-18,  ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾನುವಾರ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ನಗರದ ಅನೇಕ ಕಡೆಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರಳಿ ರಸ್ತೆ ಸಂಚಾರಕ್ಕೆ ಸಮಸ್ಯ ಉಂಟಾಗಿ ಸಾರ್ವಜನಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮಳೆಯಿಂದ ರಸ್ತೆ ಹಾಗೂ ಮನೆಗಳ ಮೇಲೆ ಬಿದ್ದಿರುವುದ್ದರಿಂದ ಜನರು ಆತಂಕದಲ್ಲಿ ಇದ್ದಾರೆ. ಇದಕ್ಕೆ ನಗರಸಭೆ ಹಾಗೂ ಹೆಸ್ಕಾಂ ವಿಭಾದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲ ಪ್ರಾರಂಭವಾದರೆ ಅವಳಿ ನಗರದಲ್ಲಿ ಇದೇ ರೀತಿ ಅವಾಂತರಳು ನಡೆಯುತ್ತಿದ್ದರು ಸಹ ನಗರಸಭೆ ಹಾಗೂ ಹೆಸ್ಕಾಂ ಅಧಿಕಾರಿಗಳು ಕಣ್ಣಿದ್ದರು ಕುರಡರಂತೆ ವರತಿಸುತ್ತಿರುವುದು ಖಂಡನೀಯ. ಗದಗ ನಗರದಿಂದ ಬೆಟಗೇರಿ ಭಾಗಕ್ಕೆ ಹೋಗುವ ಎರಡು ಬ್ರೀಡ್ಜ್‌ ಗಳು ಪ್ರತಿ ಬಾರಿ ಮಳೆ ಬಂದರೆ ಈ ಬ್ರೀಡ್ಜ್‌ ಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಸಂಚಾರ ಮಾಡಲು ಸಾಕಷ್ಟು ತೊಂದರೆಗಳನ್ನು ಆಗುತ್ತಿದೆ. ಸುಮಾರು ಒಂದು ಗಂಟೆಗೊ ಅಧಿಕ ಕಾಲ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಅವಳಿ ನಗರದ ವಾಹನ ಸವಾರರು ಸಾಕಷ್ಟು ಹರಸಾಹಸ ಪಟ್ಟಿದ್ದು ಮಳೆ ಹಾಗೂ ಬಿರುಗಾಳಿಯಿಂದ ರಸ್ತೆಗಳ ಮೇಲೆ ಬಿದ್ದಿರುವ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಕಂಡ ಸಾರ್ವಜನಿಕರು ಮತ್ತು ವಾಹನ ಸವಾರರು ಭಯಬೀತರಾಗಿದ್ದಾರೆ.

ಅನೇಕ ಭಾಗಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಮರಗಳು ಮತ್ತು ವಿದ್ಯುತ ಕಂಬಗಳು ವಾಹನಗಳ ಮೇಲೆ ಧರಗುರುಳಿದರಿಂದ ಅನೇಕ ವಾಹನಗಳು ಸಂಪೂರ್ಣ ಜಖಮಗೊಂಡಿವೆ. ಸರ್ಕಾರಗಳು ಅವಳಿ ನಗರದ ಅಭಿವೃಧ್ದಿಗಾಗಿ ಪ್ರತಿ ವರ್ಷ ಕೊಟ್ಯಾಂತರ ಅನುದಾನವನ್ನು ನೀಡುತ್ತಿದೆ ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ನಗರದ ಯಾವುದೇ ರಸ್ತೆಗಳು ಸುಧಾರಣೆ ಆಗದೇ ಇರುವುದ್ದರಿಂದ ಮಳೆಗಾಲ ಪ್ರಾರಂಭವಾದಾಗ ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಸರಿ ಇಲ್ಲದ ಕಾರಣ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಗದಗದಿಂದ ಬೆಟಗೇರಿ ಭಾಗಕ್ಕೆ ಹೋಗುವ ಪ್ರಯಾಣಿಕರಿಗೆ ಅಂಡರ್ ಬ್ರೀಜ್ ಹಾಗೂ ಬಳ್ಳಾರಿ ಬ್ರೀಡ್ಜ್‌ ಮೂಲಕ ಹೋಗಬೇಕಾಗಿದೆ.

ಆದರೆ ಮಳೆಯಿಂದ ಈ ಎರಡು ಬ್ರೀಡ್ಜ್‌ ಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಮತ್ತು ವಾಹನಗಳು ಸಂಚರಿಸದಂತೆ ಸ್ಥಿತಿ ನಿರ್ಮಾಣವಾಗುತ್ತದೆ. ಅನೇಕ ಬಾರಿ ಮೇಲಸೇತುವೆ ನಿರ್ಮಾಣ ಮಾಡಬೇಕೆಂದು ಹೋರಾಟಗಳು ನಡೆಸಿದರು ಸಹ ನಮ್ಮ ಬಾಗದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯಗಳಿಗೆ ನಿರ್ಲಕ್ಷ್ಯ ಮಾಡುತ್ತ ಬಂದಿದ್ದಾರೆ. ಕೊಡಲೇ ನಮ್ಮ ಭಾಗದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮತ್ತು ನಗರಸಭೆ ಪೌರಾಯುಕ್ತರು ಎಚ್ಚತ್ತಗೊಂಡು ಅವಳಿ ನಗರದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮಳೆಯಿಂದ ಆಗುತ್ತಿರುವ ತೊಂದರೆಗಳಿಗೆ ಸ್ಪಂದಿಸಿ ಮೇಲಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಹಾಗೂ ಮಳೆಗಾಲ ಪ್ರಾರಂಭ ಆಗಿದ್ದರಿಂದ ನಗರಸಭೆ ಅಧಿಕಾರಿಗಳು ಮುಂಚಿತವಾಗಿ ಸಾರ್ವಜನರಿಗೆ ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆ ಮೂಲಕ ಇಮ್ತಿಯಾಜ.ಆರ್‌.ಮಾನ್ವಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.