ಪುರಸಭೆ ಅಧ್ಯಕ್ಷ ಕೆಲವರ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ: ಸದಸ್ಯರ ಆರೋಪ
Municipal Chairman is governing at the behest of a few: Members allege
ಶಿಗ್ಗಾವಿ 26 : ಪುರಸಭೆ ಅಧ್ಯಕ್ಷ ಸಿದ್ಧಾರ್ಥ್ ಪಾಟೀಲ ಅವರು ಏಕ ಪಕ್ಷೀಯವಾಗಿ ಪುರಸಭೆ ಅಧಿಕಾರಿಗಳು ಮತ್ತು ಕೆಲವು ಸದಸ್ಯರ ಅಣತಿಯಂತೆ ಪುರಸಭೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಸದಸ್ಯರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಅವರೊಂದಿಗೆ ಸದಸ್ಯರಾದ ದಯಾನಂದ ಅಕ್ಕಿ, ನಸ್ರೀನ್ ಬಾನು ತಿಮ್ಮಾಪುರ, ಮುಮ್ತಾಜ್ ಗೊಟಗೋಡಿ, ಸುಲೇಮಾನ್ ಭಾಷಾ ತರಲಗಟ್ಟ ಮತ್ತು ಮುಸ್ತಾಕ್ ಅಹಮ್ಮದ್ ತಹಶೀಲ್ದಾರ್ ಅವರು ಅಧ್ಯಕ್ಷರ ಏಕಪಕ್ಷಿಯ ಆಡಳಿತ ವಿರೋಧಿಸಿ, ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ: 2025-26 ನೇ ಸಾಲಿನ 15 ನೇ ಹಣಕಾಸು ಯೋಜನೆಯ ದರ ಮಂಜೂರಾತಿ ನೀಡುವುದು. ಆರ್.ಸಿ.ಸಿ ಚರಂಡಿ ಕಾಮಗಾರಿಗೆ ದರ ಮಂಜೂರಾತಿ ನೀಡುವುದು. ನಗರಾಭಿವೃದ್ಧಿ ಇಲಾಖೆಯ ಯೋಜನೆಯಡಿ ನಾಗನೂರು ಕೆರೆಯನ್ನು ಅಭಿವೃದ್ಧಿಗೊಳಿಸುವ ಯೋಜನೆಯ ಅಂದಾಜು ಪಟ್ಟಿಗೆ ಪುರಸಭೆ ವತಿಯಿಂದ ಠರಾವು ಸಲ್ಲಿಸುವುದು ಮತ್ತು ಶಿಗ್ಗಾಂವಿ ಗ್ರಾಮಾಂತರದಲ್ಲಿ ಬರುವ ಎಲ್ಲಾ ರಿ.ಸ.ನಂ ಗಳಿಗೆ ಎನ್.ಓ.ಸಿ ಕೊಡುವ ಬಗ್ಗೆ ಚರ್ಚೆಯ ವಿಷಯಗಳೊಂದಿಗೆ ಪುರಸಭೆ ಅಧ್ಯಕ್ಷ ಸಿದ್ಧಾರ್ಥ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸದಸ್ಯರ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಅಧ್ಯಕ್ಷರ ಆಡಳಿತದ ವಿರುದ್ಧ ಹರಿಹಾಯ್ದಪುರಸಭೆಯ ಹಿರಿಯ ಸದಸ್ಯ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ದಿ. ಸುಭಾಸ ಚೌಹಾಣ್ ನಿಧನರಾದರೂ ಹಿರಿಯ ಸದಸ್ಯರ ನಿಧನಕ್ಕೆ ಸಂತಾಪ ಸೂಚಿಸದೆ ಅವಮಾನ ಮಾಡುತ್ತಿದ್ದಾರೆ. ಪಟ್ಟಣದ ಜನತೆಗೆ ಸರಿಯಾಗಿ ಕುಡಿಯಲು ನೀರಿಲ್ಲ, ಪಟ್ಟಣದಲ್ಲಿರುವ ಕಸ ವಿಲೇವಾರಿಯಾಗದೆ, ಎಲ್ಲೆಂದರಲ್ಲಿ ಕಸ ಬಿದ್ದು ಕುಳಿತು ನಾರುತ್ತಿದೆ. ಹಿಂದುಗಳ ಧಾರ್ಮಿಕ ಹಬ್ಬವಾದ ಗಣೇಶ ಚತುರ್ಥಿ ಮತ್ತು ಮುಸ್ಲಿಮರ ಈದ್ ಮಿಲಾದ್ ಆಚರಣೆ ಪಟ್ಟಣದ ಕಸದ ಸಮಸ್ಯೆಯಿಂದ ಜನ ರೋಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಸದಸ್ಯ ಜಾಫರಖಾನ್ ಪಠಾಣ ಅವರ ಮಧ್ಯೆ ವಾಗ್ವಾದ ಜೋರಾಗಿ ಕೈ ಕೈ ಮಿಲಾಯಿಸುವ ಹಂತಕ್ಕೋದರೂ ಅಧ್ಯಕ್ಷರು ಮೌನಕ್ಕೆ ಶರಣಾಗಿದ್ದಕ್ಕೆ ಶ್ರೀಕಾಂತ ಬುಳ್ಳಕ್ಕನವರ ಅವರೊಂದಿಗೆ ಕೆಲವು ಸದಸ್ಯರು ಹೊರ ಬಂದು ಅಧ್ಯಕ್ಷರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.್ಷ
ಸದಸ್ಯರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದುದು, ಎಲ್ಲ ಸದಸ್ಯರು ನನಗೆ ಸಹೋದರರಿದ್ದಂತೆ ಯಾವುದೇ ಕೆಲಸ ಮಾಡಬೇಕಾದರೂ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ನನ್ನ ಮೇಲೆ ಮಾಡುತ್ತಿರುವ ಅವ್ಯವಹಾರ ಸಾಬೀತುಪಡಿಸಿದರೆ ಈಗಲೇ ರಾಜೀನಾಮೆ ಸಲ್ಲಿಸುತ್ತೇನೆ.
ಸಿದ್ಧಾರ್ಥ ಪಾಟೀಲ, ಪುರಸಭೆ ಅಧ್ಯಕ್ಷ ಶಿಗ್ಗಾಂವಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 